ದೇಹದ ಆರೋಗ್ಯ ಮತ್ತು ಸೌಂದರ್ಯದ ರಕ್ಷಣೆಗೆ ಅಲೋವೆರಾ ಅತ್ಯುತ್ತಮವಾಗಿದ್ದು, ಇದರಲ್ಲಿರುವ ಔಷಧೀಯ ಗುಣಗಳು ಹಲವಾರು ರೋಗಗಳ ನಿವಾರಣೆಗೆ ಸಹಕಾರಿಯಾಗಿದೆ. ನಮ್ಮ ದೇಹದ ಬಹುತೇಕ ಕಾಯಿಲೆಗಳು ಮದ್ದು ತೆಗೆದುಕೊಂಡರೂ ಗುಣವಾಗುವುದಿಲ್ಲ. ಅದಕ್ಕೆ ಪರಿಹಾರ ಏನು ಎನ್ನುವುದು ತಿಳಿಯದೇ, ಈ ರೋಗವನ್ನು ಸಹಿಸುವುದು ಅನಿವಾರ್ಯ ಅಂದು ಕೊಳ್ಳುತ್ತೇವೆ. ಆದರೆ, ನೈಸರ್ಗಿಕ ಚಿಕಿತ್ಸೆಯ ಬಗ್ಗೆ ಬಹಳಷ್ಟು ಬಾರಿ ನಾವು ಯೋಚಿಸುವುದೇ ಇಲ್ಲ.
ಅಲೋವೆರಾದಲ್ಲಿ ವಿಟಮಿನ್ ಇ, ಅಮೈನೋ ಆಮ್ಲಗಳು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು, ಫೋಲಿಕ್ ಆ್ಯಸಿಡ್, ಸೋಡಿಯಂ ಮತ್ತು ಕಾರ್ಬೋಹೈರ್ಡೇಡ್ ಗಳಿವೆ. ಅಲೋವೆರಾವನ್ನು ಹೇಗೆ ಸೇವಿಸುವುದು ಎನ್ನುವುದು ಕೆಲವರಿಗೆ ಕುತೂಹಲ ಇರಬಹುದು. ಅಲೋವೆರಾವನ್ನು ಜ್ಯೂಸ್ ಮಾಡಿ ಸೇವಿಸಬಹುದಾಗಿದೆ.
ಅಲೋವೆರಾವು ಎದೆ ಉರಿ, ಮಧುಮೇಹ, ಹೊಟ್ಟೆಯ ಕಾಯಿಲೆ, ಮೂತ್ರಪಿಂಡದ ಕಾಯಿಲೆ ಮೊದಲಾದವುಗಳಿಗೆ ಪರಿಹಾರವಾಗಿದೆ. ಅಲೋವೆರಾ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಈ ಮೇಲಿನ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಇನ್ನೂ ಅಲೋವೆರಾದಿಂದ ಕೂದಲು ಉದುರುವಿಕೆ ಸಮಸ್ಯೆಗಳಿಂದಲೂ ಮುಕ್ತರಾಗಬಹುದು ಅಲೋವೆರಾ ಜೆಲ್ ನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಹಾಗೂ ತಲೆಹೊಟ್ಟು ಸಮಸ್ಯೆಗಳ ನಿವಾರಣೆ ಸಾಧ್ಯ.