ರೋಗನಿರೋಧಕ ಶಕ್ತಿ ಎಂದರೆ ಥಟ್ಟನೆ ನೆನಪಾಗುವುದು ಬೆಳ್ಳುಳ್ಳಿ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳ್ಳುಳ್ಳಿ ಹೆಚ್ಚಿಸುತ್ತದೆ. ಅನೇಕ ಪೋಷಕಾಂಶಗಳನ್ನು ಹೊಂದಿರುವ ಬೆಳ್ಳುಳ್ಳಿಯಲ್ಲಿ ಹಲವು ಔಷಧೀಯ ಗುಣಗಳು ಕೂಡ ಇವೆ.
ಬೆಳ್ಳುಳ್ಳಿಯು ರಕ್ತದೊತ್ತಡವನ್ನು ತಡೆಯುತ್ತದೆ. ಈ ಮೂಲಕ ನಮ್ಮ ದೇಹದಲ್ಲಿರುವ ರಕ್ತನಾಳಗಳಿಗೆ ಆಗಬಹುದಾಗಿರುವ ಸಾಮಾನ್ಯ ಹಾನಿಗಳನ್ನು ತಡೆಯುತ್ತದೆ. ನಮ್ಮ ದೇಹದಲ್ಲಿರುವ ಅನಗತ್ಯ ಕೊಬ್ಬುಗಳನ್ನು ತೆಗೆದು ಹಾಕಲು ಇದು ಸಹಾಯಕವಾಗಿದೆ.
ಮುಖ್ಯವಾಗಿ ಬೆಳ್ಳುಳ್ಳಿ ಸೇವೆಯು ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗಬಹುದಾಗಿರುವ ಅಪಾಯವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಬಿ 6, ಸಿ, ಫೈಬರ್ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಪೋಷಕಾಂಶಗಳನ್ನು ಬೆಳ್ಳುಳ್ಳಿ ಹೊಂದಿದೆ.
ನಮ್ಮ ದೇಹವು ಸುಸ್ಥಿತಿಯಲ್ಲಿರಲು, ನಮ್ಮ ಜೀರ್ಣಕ್ರಿಯೆಯಲ್ಲಿಯೂ ಬೆಳ್ಳುಳ್ಳಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಆಹಾರದಲ್ಲಿ ಬೆಳ್ಳುಳ್ಳಿಯನ್ನು ನಮ್ಮ ಮಿತಿಯೊಳಗೆ ಬಳಸುವುದು ಉತ್ತಮ.