ಬೆಳಗಾವಿ: ನಟ ಪುನೀತ್ ರಾಜ್ ಕುಮಾರ್ ನಿಧನದಿಂದ ನೊಂದ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದು, ಮತ್ತೋರ್ವ ಅಪ್ಪು ಫೋಟೋಗೆ ಪೂಜೆ ಸಲ್ಲಿಸಿ, ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಳಗಾವಿಯ ಶಿಂದೊಳ್ಳಿಯ ಕನಕದಾಸ ನಗರದ 33 ವರ್ಷ ವಯಸ್ಸಿನ ವ್ಯಕ್ತಿ ಪರುಶರಾಮ ಹನುಮಂತ ದೇಮಣ್ಣ ಪುನೀತ್ ಸಾವಿನ ಸುದ್ದಿಯಿಂದ ತೀವ್ರವಾಗಿ ನೊಂಡಿದ್ದು, ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಇನ್ನೂ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ 26 ವರ್ಷ ವಯಸ್ಸಿನ ರಾಹುಲ್ ಗಾಡಿವಡ್ಡರ ಎಂಬ ಯುವಕ ಪುನೀತ್ ಅವರ ನಿಧನದಿಂದ ತೀವ್ರವಾಗಿ ನೊಂದು ಪುನೀತ್ ಫೋಟೋಗೆ ಪೂಜೆ ಸಲ್ಲಿಸಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಾವು ಎನ್ನುವುದು ಯಾರ ಕೈಯಲ್ಲಿಯೂ ಇಲ್ಲ. ಹುಟ್ಟಿದ ಮನುಷ್ಯ ಸಾಯುವುದು ಪ್ರಕೃತಿಯ ನಿಯಮವಾಗಿದೆ. ಇಂತಹ ಸಂದರ್ಭದಲ್ಲಿ ಅವರ ಪ್ರೀತಿ ಪಾತ್ರರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಸರಿಯಲ್ಲ. ಎಲ್ಲರಿಗೂ ಅವರದ್ದೇ ಆದ ಕುಟುಂಬಗಳಿವೆ ಎನ್ನುವುದನ್ನು ಯೋಚಿಸಬೇಕಿದೆ. ಸಾವು ಪ್ರಕೃತಿದತ್ತವಾಗಿ ಬರುತ್ತದೆ. ಆತ್ಮಹತ್ಯೆ ಎಂದಿಗೂ ಸೂಕ್ತವಾದ ನಿರ್ಧಾರವಾಗಲು ಅಥವಾ ಅಭಿಮಾನವಾಗಲು ಸಾಧ್ಯವಿಲ್ಲ. ಹಾಗಾಗಿ ಯಾರೂ ಕೂಡ ದುಡುಕಿನ ನಿರ್ಧಾರ ಕೈಗೊಳ್ಳದಿರಿ.