ಬ್ಯಾಂಕ್ ಆಫ್ ಬರೋಡಾದಲ್ಲಿ ಸೀನಿಯರ್ ರಿಲೇಶನ್ ಶಿಪ್ ಮ್ಯಾನೇಜರ್, ಇ-ವೆಲ್ತ್ ರಿಲೇಶನ್ ಶಿಪ್ ಮ್ಯಾನೇಜರ್, ಪ್ರಾಂತ್ಯ ಮುಖ್ಯಸ್ಥ, ಗ್ರೂಪ್ ಹೆಡ್, ಪ್ರಾಡಕ್ಟ್ ಹೆಡ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಪ್ರಕಟಿಸಲಾಗಿದೆ.
ಸೀನಿಯರ್ ರಿಲೇಶನ್ ಶಿಪ್ ಮ್ಯಾನೇಜರ್- (407 ಹುದ್ದೆಗಳು), ಎ-ವೆಲ್ತ್ ರಿಲೇಶನ್ ಶಿಪ್ ಮ್ಯಾನೇಜರ್-(50 ಹುದ್ದೆಗಳು), , ಪ್ರಾಂತ್ಯ ಮುಖ್ಯಸ್ಥ-(44 ಹುದ್ದೆಗಳು), ಗ್ರೂಪ್ ಹೆಡ್-(06 ಹುದ್ದೆಗಳು), ಪ್ರಾಡಕ್ಟ್ ಹೆಡ್-(01 ಹುದ್ದೆ), ಮುಖ್ಯಸ್ಥ-(01 ಹುದ್ದೆ), ಡಿಜಿಟಲ್ ಸೇಲ್ಸ್ ಮ್ಯಾನೇಜರ್-(01 ಹುದ್ದೆಗಳು), ಐಟಿ ಫಂಕ್ಷನಲ್ ಅನಾಲಿಸ್ಟ್ ( 01 ಹುದ್ದೆ)ಗಳು ಖಾಲಿ ಇವೆ.
ಅಭ್ಯರ್ಥಿಗಳು ಕನಿಷ್ಠ 24ರಿಂದ ಗರಿಷ್ಠ 45 ವರ್ಷದೊಳಗಿನವರಾಗಿರಬೇಕು. ಇನ್ನೂ ಸಾಮಾನ್ಯ ಅಭ್ಯರ್ಥಿ, ಒಬಿಸಿ ಅಭ್ಯರ್ಥಿಗಳು ಅರ್ಜಿ ಶುಲ್ಕ 600 ರೂ. ಪಾವತಿಸಬೇಕು. ಎಸ್ ಸಿ, ಎಸ್ ಟಿ, ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್, ಮೊಬೈಲ್ ವ್ಯಾಲೆಟ್ ಮೂಲಕವೂ ಅರ್ಜಿ ಶುಲ್ಕವನ್ನು ಪಾವತಿಸಬಹುದು.
ಅರ್ಜಿ ಸಲ್ಲಿಸಲು ಏಪ್ರಿಲ್ 29 ಕೊನೆಯ ದಿನಾಂಕವಾಗಿದೆ. ಪದವಿ ಶಿಕ್ಷಣ ಪೂರೈಸಿದವರು ಹಾಗೂ ಕಾರ್ಯಾನುಭವ ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಹೆಚ್ಚಿನ ಮಾಹಿತಿಗಳಿಗಾಗಿ www.bankofbaroda.in ವೆಬ್ ಸೈಟ್ ನಲ್ಲಿ ಮಾಹಿತಿ ಪಡೆದುಕೊಳ್ಳಬಹುದು.