ಸೂಪರ್ ಟ್ರಾನ್ಸ್‌ಪೋರ್ಟರ್ ಏರ್‌ಬಸ್ ಬೆಲುಗಾ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಸಿಎಸ್‌ಎಂಐಎ) ಬಂದಿಳಿದಾಗ ಸಿಬ್ಬಂದಿ ಮತ್ತು ಪ್ರಯಾಣಿಕರು ಅಚ್ಚರಿಗೊಂಡು ಇದೇನು ತಿಮಿಂಗಿಲ ಆಕಾರದ ವಿಮಾನ ಎಂದು ಹುಬ್ಬೇರಿಸಿದ್ದಾರೆ.
ಒಟ್ಟಾರೆ ಈ ವಿಮಾನ ಈ ವಿಮಾನ ಎಲ್ಲರನ್ನೂ ಸೆಳೆಯುವಂತೆ ಮಾಡಿದೆ.ಈ ಏರ್‌ಬಸ್ ಬೆಲುಗಾ ಏರ್ ಕಾರ್ಗೋವನ್ನು ಸಾಗಣೆಗೆ ಬಳಕೆಯಾಗಿದೆ. ಈ ವಿಮಾನಗಳು 1990ರ ದಶಕದ ಮಧ್ಯಭಾಗದಿಂದ ಕಂಪನಿಯ ಸ್ವಂತ ಕೈಗಾರಿಕಾ ಏರ್‌ಲಿಫ್ಟ್ ಅಗತ್ಯಗಳಿಗಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಕ್ರಮೇಣ ಆರು ಹೊಸ ಬೆಲುಗಾಎಕ್ಸ್‌ಎಲ್ ಆವೃತ್ತಿಗಳ ಫ್ಲೀಟ್‌ನಿಂದ ಬದಲಾವಣೆಗೊಂಡಿದೆ ಎಂದು ಅದಕ್ಕೆ ಸಂಬಂಧಿಸಿದ ವೆಬ್ ಸೈಟ್ ಮಾಹಿತಿ ಒಳಗೊಂಡಿದೆ.
ಸಿಎಸ್‌ಎಂಎ ಟ್ವಿಟರ್ ಪೇಜ್ ನಲ್ಲಿ ಈ ಬೃಹತ್ ವಿಮಾನದ ಕೆಲವು ಫೋಟೋ ಪೋಸ್ಟ್ ಮಾಡಿ, ಇದು ಎಲ್ಲರಿಗೂ ವಿಸ್ಮಯ ಎಂದು ಟ್ವೀಟ್ ಮಾಡಿದೆ. ಏರ್‌ಬಸ್ ಬೆಲುಗಾ ಸೂಪರ್ ಟ್ರಾನ್ಸ್‌ಪೋರ್ಟರ್ ಮುಂಬೈ ಏರ್‌ಪೋರ್ಟ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ನಮ್ಮೆಲ್ಲರನ್ನು ಬೆರಗುಗೊಳಿಸಿದೆ ಎಂದು ಟ್ವೀಟ್ನಲ್ಲಿ ಹೇಳಿದೆ.
ಬೆಲುಗಾ ವಿಮಾನದ ಮೂಗು ತಿಮಿಂಗಿಲದ ಆಕಾರದಲ್ಲಿದೆ, ಇದು ವಿಶ್ವದ ಅತಿದೊಡ್ಡ ಸರಕು ವಿಮಾನಗಳಲ್ಲಿ ಒಂದಾಗಿದೆ. ಬಾಹ್ಯಾಕಾಶ, ಮಿಲಿಟರಿ, ಏರೋನಾಟಿಕ್ಸ್, ಸಮುದ್ರ ಮತ್ತು ಮಾನವೀಯ ಕ್ಷೇತ್ರಗಳನ್ನು ಒಳಗೊಂಡಂತೆ ವಿವಿಧ ವಲಯಗಳಿಗೆ ದೊಡ್ಡ ಸರಕುಗಳನ್ನು ಸಾಗಿಸುತ್ತದೆ. ಏರ್‌ಬಸ್ ವೆಬ್‌ಸೈಟ್ ಪ್ರಕಾರ ವಿಮಾನವು 56 ಮೀಟರ್ ಉದ್ದ ಮತ್ತು 45 ಮೀಟರ್ ಅಗಲವಿದೆ. ಭಾನುವಾರ, ವಿಮಾನವು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇಳಿದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz