ಚಲಿಸುತ್ತಿರುವ ದ್ವಿಚಕ್ರ ವಾಹನದ ಮೇಲೆ ಯುವಕ ಮತ್ತು ಯುವತಿ ತಬ್ಬಿಕೊಂಡಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಮುಂಬೈನ ಬಾಂದ್ರಾ ರಿಕ್ಲಮೇಶನ್ ಏರಿಯಾದಲ್ಲಿ ನಡೆದಿದೆ.
ಸ್ಕೂಟರ್ ನಲ್ಲಿ ಪ್ರೇಮಿಗಳು ಮುಖಾಮುಖಿ ಕುಳಿತು ಪರಸ್ಪರ ಅಪ್ಪಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋವನ್ನು ಪ್ರಯಾಣಿಕರೊಬ್ಬರು ಚಿತ್ರೀಕರಿಸಿದ್ದಾರೆ. ವಿಡಿಯೋದಲ್ಲಿ ಯುವತಿ ಮತ್ತು ಯುವಕ ಸ್ಕೂಟರ್ ನಲ್ಲಿ ಮುಖಾಮುಖಿಯಾಗಿ ಕುಳಿತು ಒಬ್ಬರನ್ನೊಬ್ಬರು ಬಿಗಿಯಾಗಿ ಅಪ್ಪಿಕೊಳ್ಳುತ್ತಿದ್ದಾರೆ. ಯುವತಿ ವಿಡಿಯೋಗ್ರಾಫರ್ ನತ್ತ ತಿರುಗಿ ಸ್ಮೈಲ್ ಕೊಡುತ್ತಿರುವುದು ಸಹ ವಿಡಿಯೋದಲ್ಲಿ ಕಾಣಬಹುದು. ಹೆಲ್ಮೆಟ್ ಕೂಡ ಧರಿಸದೇ ಈ ಪ್ರೀತಿಯ ಪ್ರದರ್ಶನ ಮಾಡಲಾಗಿದೆ.
ವಿಡಿಯೋ ವೈರಲ್ ಆದ ನಂತರ ವಿಡಿಯೋದಲ್ಲಿದ್ದ ಯುವತಿ ಮತ್ತು ಯುವಕನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಯುವಕ ಹಾಗೂ ಯುವತಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


