ನವದೆಹಲಿ: ಸಣ್ಣ ಮಕ್ಕಳನ್ನು ಬೈಕ್ ನಲ್ಲಿ ಕೂರಿಸಿಕೊಂಡು ಪ್ರಯಾಣಿಸುವವರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ರಸ್ತೆ ಸುರಕ್ಷತಾ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ.
ಈ ಹೊಸ ನಿಯಮದ ಪ್ರಕಾರ, 4 ವರ್ಷ ವಯಸ್ಸಿನೊಳಗಿನ ಮಕ್ಕಳನ್ನು ಬೈಕ್ ನ(ದ್ವಿಚಕ್ರ ವಾಹನ) ಹಿಂಬದಿಯಲ್ಲಿ ಕೂರಿಸಿಕೊಂಡು ಪ್ರಯಾಣಿಸುವವರು ಗಂಟೆಗೆ 40 ಕಿ.ಮೀ. ಮೀರಬಾರದು. 9 ತಿಂಗಳಿನಿಂದ 4 ವರ್ಷದೊಳಗಿನ ಮಕ್ಕಳಿಗೆ ಕ್ರ್ಯಾಶ್ ಹೆಲ್ಮೆಟ್ ತೊಡಿಸಿದ ಬಳಿಕ ಬೈಕ್ ನಲ್ಲಿ ಪ್ರಯಾಣಿಸಬೇಕು ಎಂದು ಹೇಳಲಾಗಿದೆ.
ಇನ್ನೂ ಹಿಂಬದಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುವುದಾದರೆ, ಬೈಕ್ ಸವಾರನನ್ನು ಕೂಡಿಸುವಂತೆ ಸುರಕ್ಷತಾ ಪಟ್ಟಿಯನ್ನು ಒದಗಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.