ಸರಗೂರು: ಕಾಳಿಹುಂಡಿ ಗ್ರಾಮಕ್ಕೆ 1 ಕೋಟಿ ರೂ. ಗ್ರಾಮ ವಿಕಾಸ್ ಯೋಜನೆಯಡಿ ಮಂಜೂರಾಗಿದೆ. ಉಳಿಕೆ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಮುಂದಿನ ದಿನಗಳಲ್ಲಿ ರಸ್ತೆ ಡಾಂಬರೀಕರಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು. ಕೋಟೆ ದೊಡ್ಡ ತಾಲೂಕು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದೇನೆ. ತಂದೆಯ ಶ್ರಮದ ಫಲವಾಗಿ ಉಸಿರು ಇರುವರೆಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ನಮ್ಮ ತಂದೆ ದಿ ಚಿಕ್ಕಮಾದುರವರು ಗುದ್ದಲಿ ಪೂಜೆ ಸಲ್ಲಿಸಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಮಾರ್ಚ್ ತಿಂಗಳಲ್ಲಿ ನಡೆಯುವ ಬಜೆಟ್ ಮಂಡನೆ ಮುಗಿದ ಮೇಲೆ ಅನುದಾನವನ್ನು ಬಿಡುಗಡೆಗೊಳಿಸಿ ಪೂರ್ಣ ಮಾಡಲಾಗುವುದು ಎಂದರು.
ಅಂಬೇಡ್ಕರ್ ಭವನದ ಸುತ್ತ ಕಾಂಪೌಂಡ್ ನಿರ್ಮಾಣ ಹಾಗೂ ಗ್ರಂಥಾಲಯ ಮಾಡಲು ಮನವಿ ಗ್ರಾಮಸ್ಥರು ಮಾಡಿದ್ದಾರೆ. ನನ್ನ ಶಾಸಕರ ಅನುದಾನದಲ್ಲಿ ಮಾಡುತ್ತೇನೆಂದು ಭರವಸೆ ನೀಡಿದರು.
ನಮ್ಮ ಕುಟುಂಬಕ್ಕೆ ಮೂರು ಬಾರಿ ತಾಲೂಕಿನ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಿರಾ ಅದರಂತೆ ವರ್ಷದ 365 ದಿನಗಳಲ್ಲಿ ನಮ್ಮ ಕುಟುಂಬದವರು ತಾಲೂಕಿನ ಜೊತೆ ಯಾವಾಗಲೂ ಇರುತ್ತವೆ. ನಾನು ತಂದೆ ಕಾಲದಿಂದಲೂ ರಾಜಕೀಯ ಮಾಡಿಕೊಂಡು ಬಂದಿಲ್ಲ. ಏಕೆಂದರೆ ನಾನು ಜನರ ಜೊತೆಯಲ್ಲಿ ನಾನು ಒಬ್ಬರು ಅಂತ ತಿಳಿದುಕೊಂಡು ಅಭಿವೃದ್ಧಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ತಂದೆ ಮತ್ತು ನನ್ನ ರಾಜಕೀಯ ಗುರುಗಳಾದ ಆರ್.ಧ್ರುವನಾರಾಯಣ್ ರವರು ಹೇಳಿಕೊಟ್ಟ ಹಾದಿಯಲ್ಲಿ ಹೋಗುತ್ತಿದ್ದಾನೆ. ತಾಲ್ಲೂಕಿನ ಅಭಿವೃದ್ಧಿ ಕಡಗೆ ಹೆಚ್ಚು ಮಾನ್ಯತೆ ನೀಡುತ್ತಾ ಬಂದಿದ್ದಾನೆ ಎಂದು ಹೇಳಿದರು.
ಎರಡು ಮೂರು ದಿನಗಳ ಹಿಂದೆ ಅಕ್ರಮ ಸಕ್ರಮ ಸಮಿತಿ ಸಭೆ ಮಾಡಿ ಕಾಡಂಚಿನ ಭಾಗದಲ್ಲಿರುವ ರೈತರಿಗೆ ಸಾಗುವಳಿ ಪತ್ರ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆಸಲಾಗಿದೆ, ಮುಂದಿನ ದಿನಗಳಲ್ಲಿ ರೈತರಿಗೆ ಸಾಗುವಳಿ ಪತ್ರ ನೀಡಲಾಗುವುದು.ಕಾಡಂಚಿನ ಭಾಗದಲ್ಲಿ ಇರುವ ಜಮೀನು ಖಾತೆದಾರರಿಗೆ ಅರಣ್ಯ ಮತ್ತು ಕಂದಾಯ ಇಲಾಖೆಯವರು ಜಂಟಿ ಸರ್ವೆ ನಡೆಸಿ ವಿತರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮೈ ಮುಲ್ ಅಧ್ಯಕ್ಷ ಕೆ.ಈರೇಗೌಡ ಮಾತನಾಡಿ, ಹಾಲಿಗೆ ನೀರು ಹಾಕದೆ ಗುಣಮಟ್ಟ ಕಾಯ್ದುಕೊಳ್ಳಿ. ಹಸುಗಳಿಗೆ ರೋಗಬರದಂತೆ ಮುನ್ನೆಚ್ಚರಿಕೆ ಕ್ರಮವಹಿಸಿಕೊಂಡು ಆರೋಗ್ಯ ಕಾಪಾಡಿ. ಮುಂದಿನ ದಿನಗಳಲ್ಲಿ ಉತ್ಪಾದಕರು ಸಬಲರಾಗಲು ಹೆಚ್ಚು ಹಾಲು ಉತ್ಪಾದನೆಗೆ ಮುಂದಾಗಬೇಕು” ಎಂದರು.
ಜನರು ಹಾಲಿನಲ್ಲಿ ನೀರನ್ನು ಬೆರಸದೆ ಶುದ್ಧ ಹಾಲನ್ನು ಡೈರಿಗೆ ಹಾಕಬೇಕು.ಡೈರಿಯಲ್ಲಿ ಜಾತಿ ಮತ ಧರ್ಮ ಇಲ್ಲ ಎಲ್ಲರೂ ಒಂದೇ.ಅದರಂತೆ ಹಾಲನ್ನು ಕೂಡ ಹಾಕಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟ ಅಧ್ಯಕ್ಷ ಕೆ.ಈರೇಗೌಡ, ಮೈಮುಲ್ ನಿರ್ದೇಶಕ ದ್ರಾಕ್ಷಾಯಿಣಿ ಬಸವರಾಜಪ್ಪ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಮೋದ್ ನಾಗರಾಜು, ಅಡಳಿತ ಮಂಡಳಿ ಉಪಾಧ್ಯಕ್ಷ ಭಾಗ್ಯ ಕೆ.ಸಿ.ಕೆಂಪರಾಜು, ಸದಸ್ಯರುಗಳಾದ ಶಿವಮ್ಮ ಸ್ವಾಮಿಗೌಡ, ಹಲಗಮ್ಮ ಸಿದ್ದೇಗೌಡ, ಜಯಶ್ರೀ ಕೆ ಎಸ್ ಮಂಜುನಾಥ್, ಸಾವಿತ್ರಮ್ಮ ಚಿನ್ನೇಗೌಡ, ರಾಜೇಶ್ವರಿ ರಮೇಶ್, ಸವಿತಾ ಕೆ.ಪಿ. ಚಂದ್ರು, ಪವಿತ್ರ ವೆಂಕಟೇಶ್, ಅನಿತಾ ಕೆ.ಪಿ.ಅನಂತಕುಮಾರ್, ಸುಮಿತ್ರಾ ಚಲುವರಾಜು, ವ್ಯವಸ್ಥಾಪಕರಾದ ಎಲ್.ಆರ್.ಕರಿಬಸವರಾಜು, ಜಿ.ಎನ್.ಸಂತೋಷ್, ವಿಸ್ತರಣಾಧಿಕಾರಿಗಳಾದ ಆರೀಫ್ ಇಕ್ಬಾಲ್,ರಾಮಪ್ಪ ಬಾರ್ಕಿ, ಮುಖಂಡರು ನಾಗೇಂದ್ರ, ಮಂಜುನಾಥ, ಸುರೇಶ್, ನವೀನ್, ಮಲ್ಲೇಶ್, ವನಸಿರಿ ಉಮೇಶ್, ಕಾರ್ಯದರ್ಶಿ ಜಿ. ಶೈಲಜಾ ಸ್ವಾಮಿಗೌಡ, ಹಾಲು ಪರೀಕ್ಷಕರು ರತ್ನ ಶ್ರೀನಿವಾಸ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


