ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ಅಡಿಕೆ ವ್ಯಾಪಾರಿ ಎಚ್. ಎಸ್. ಉಮೇಶ್ ಅವರಿಗೆ ಸೇರಿದ್ದ ಕೆ 1 ಕೋಟಿ ನಗದು ಕಳ್ಳತನ ಪ್ರಕರಣ ಭೇದಿಸಿರುವ ಉಪ್ಪಾರಪೇಟೆ ಠಾಣೆ ಪೊಲೀಸರು, ಕಾರಿನ ಚಾಲಕ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದ ಸ್ವಾಮಿ ಪಿ. ಬಿ. (34), ಬೆಂಗಳೂರು ಮಹದೇವಪುರ ಲಕ್ಷ್ಮಿಸಾಗರ ಬಡಾವಣೆಯ ಅನುಪಮ ಎನ್. ಎಂ. (38), ಚಿತ್ರದುರ್ಗ ಜಿಲ್ಲೆಯ ಕೆಳಗೋಟೆಯ ಪವನ್ ಎನ್. (30) ಹಾಗೂ ಸಕಲೇಶಪುರ ಮಹೇಶ್ವರಿನಗರದ ಎಸ್. ಆರ್. ಕಾರ್ತಿಕ್ (27) ಬಂಧಿತರು.


