ಕೊರಟಗೆರೆ: ಕರುನಾಡಿನ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಬ್ರಹ್ಮ ರಥೋತ್ಸವ ವೇಳೆ ಗರುಡ ಆಗಮನದ ವೇಳೆ ಭಕ್ತರ ಜೈಕಾರ ಮುಗಿಲು ಮುಟ್ಟಿತು.
ಬ್ರಹ್ಮರಥೋತ್ಸವದಲ್ಲಿ ರಾಮ, ಲಕ್ಷಣ, ಸೀತೆ ಮತ್ತು ಆಂಜನೇಯ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ನಂತರ ಆಕಾಶದಲ್ಲಿ ಗರುಡದೇವರ ಆಗಮನವಾಗಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಗೃಹಸಚಿವ ಡಾ.ಜಿ.ಪರಮೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿದರು.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಸುಪ್ರಸಿದ್ದ ಕಮನೀಯ ಕ್ಷೇತ್ರವಾದ ಶ್ರೀಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ದರ್ಶನಕ್ಕೆ ಕರ್ನಾಟಕ ರಾಜ್ಯಸೇರಿದಂತೆ ಹೊರ ರಾಜ್ಯದಿಂದಲೂ ಸಾವಿರಾರು ಭಕ್ತಾಧಿಗಳು ಆಗಮಿಸಿ ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯ ಸ್ವಾಮಿಯ ದರ್ಶನ ಪಡೆದರು.
5 ಸಾವಿರ ವರ್ಷಗಳ ಇತಿಹಾಸವುಳ್ಳ ಪ್ರಸಿದ್ದ ಕಮನೀಯ ಕ್ಷೇತ್ರ ಶ್ರೀಆಂಜನೇಯ ದೇವಾಲಯದ ರಾಜಗೋಪುರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಗೃಹಸಚಿವ ಡಾ.ಜಿ.ಪರಮೇಶ್ವರ ಚಾಲನೆ ನೀಡಿದರು.
24 ರಾಸುಗಳಿಗೆ ಬಹುಮಾನ ವಿತರಣೆ:
ಕ್ಯಾಮೇನಹಳ್ಳಿ ದನಗಳ ಜಾತ್ರೆಯಲ್ಲಿ ಭಾಗವಹಿಸಿದ್ದ 24 ಉತ್ತಮ ರಾಸುಗಳಿಗೆ ಕೊರಟಗೆರೆ ತಾಲೂಕು ಆಡಳಿತದಿಂದ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ ವಿತರಣೆ ಮಾಡಿದರು.
ರಥೋತ್ಸವ ಮತ್ತು ದೇವಾಲಯಕ್ಕೆ ಹೂವಿನ ಅಲಂಕಾರ:
ಆಂಜನೇಯ ಸ್ವಾಮಿ ದೇವಾಲಯ, ಬ್ರಹ್ಮರಥೋತ್ಸವ ಹೂವಿನ ಅಲಂಕಾರ ಮತ್ತು ಭಕ್ತರಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಮಾಜಿ ಜಿಪಂ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಏರ್ಪಡಿಸಿದ್ದರು.
ಶ್ರೀಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ರಾಮಚಾರ್ ಮಾತನಾಡಿ, ಬ್ರಹ್ಮರಥೋತ್ಸವ ಪ್ರಯುಕ್ತ ದೇವಾಲಯ ಮತ್ತು ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಸೂರ್ಯದೇವ ತನ್ನ ಪಥವನ್ನ ಬದಲಿಸುವ ದಿನ ದೇವರ ದರ್ಶನ ಪಡೆದರೇ ಇಷ್ಠಾರ್ಥ ಸಿದ್ದಿ ಆಗಲಿದೆ ಎಂದರು.
ಮಾಜಿ ಜಿ.ಪಂ. ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಮಾತನಾಡಿ, 19 ವರ್ಷದಿಂದ ಶ್ರೀಆಂಜನೇಯ ಸ್ವಾಮಿಯ ದೇವಾಲಯ ಮತ್ತು ರಥೋತ್ಸವಕ್ಕೆ ವಿಶೇಷ ಹೂವಿನ ಅಲಂಕಾರ ಮಾಡುತ್ತಿದ್ದೇನೆ. ಇದರ ಜೊತೆ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿದ್ದೇನೆ. ದೇವರ ಶಕ್ತಿ ಇರುವ ತನಕ ಸ್ವಾಮಿಯ ಸೇವೆ ಸಲ್ಲಿಸುತ್ತೇನೆ ಎಂದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4