ಮೊನ್ನೆಯಷ್ಟೇ ನಮ್ಮ ದೇಶದಲ್ಲಿ ಕುಬೇರ, ಆಗರ್ಭ ಶ್ರೀಮಂತ, ಕೋಟ್ಯಾಧೀಶ್ವರ ಎಂದು ಕರೆಸಿಕೊಳ್ಳುವ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಸಾವಿರಾರು ಜನ ಬಂದು ಅನಂತ್ ಹಾಗೂ ರಾಧಿಕಾರನ್ನು ಶುಭ ಹಾರೈಸಿದ್ದರು. ಅಂತೆಯೇ ಅಜ್ಜಿಯೊಬ್ಬರು ಬಂದು ರಾಧಿಕಾಗೆ ಹೂಗುಚ್ಛ ನೀಡಿದರೆ, ಅನಂತ್ ಗೆ 100 ರೂ. ಮುಯ್ಯಿ ನೀಡುತ್ತಾರೆ. ಆದರೆ, ಈ ಹಣವನ್ನು ಸ್ವಲ್ಪವೂ ಗರ್ವ ತೋರಿಸದೇ ಗೌರವವಾಗಿ ಸ್ವೀಕರಿಸಿದ ಅನಂತ್ ಅಂಬಾನಿ ನಡೆ ಹಾಗೂ ಅಜ್ಜಿಯ ಮದುವೆಗೆ ಉಡುಗೊರೆ ಕೊಡುವ ಸಂಪ್ರದಾಯ ನೋಡಿದ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು, ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮವನ್ನು ನೋಡಿದವರು ಜನರೇ ಬೆರಗಾಗಿ ಹೋಗಿದ್ದರು. ಇದು ಕುಬೇರರ ಕಾರ್ಯಕ್ರಮವೆಂದೇ ಹೇಳಬಹುದು. ಈ ಸಮಾರಂಭಕ್ಕೆ ದೇಶದ ಬಹುತೇಕ ಹಾಗೂ ಜಗತ್ತಿನ ಹಲವು ಸೆಲೆಬ್ರಿಟಿಗಳು ಮತ್ತು ಶ್ರೀಮಂತರು ಬಂದು ಪಾಲ್ಗೊಂಡಿದ್ದಾರೆ. ಇನ್ನು ನಮ್ಮ ದೇಶದ ಎಲ್ಲ ಖ್ಯಾತ ಚಿತ್ರ ತಾರೆಯರು ಮತ್ತು ಕ್ರೀಡಾ ಪಟುಗಳು ಭಾಗವಹಿಸಿ ಕುಣಿದು ಕುಪ್ಪಳಿಸಿದ್ದರು. ಇನ್ನು ಸ್ವತಃ ಮುಖೇಶ್ ಅಂಬಾನಿ ಅವರು ಗುಜರಾತ್ ನ ತಮ್ಮ ಗ್ರಾಮದ ಎಲ್ಲ ಜನಸಾಮಾನ್ಯರಿಗೂ ಆಹ್ವಾನವನ್ನೂ ಕೊಟ್ಟಿದ್ದಾರೆ. ಇನ್ನು ಮದುವೆ ಪೂರ್ವ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲ ಅತಿಥಿಗಳು ಕೂಡ ಅವರ ಸಾಮರ್ಥ್ಯಾನುಸಾರ ಉಡುಗೊರೆಯನ್ನು ನೀಡಿದ್ದಾರೆ.
ಅಜ್ಜಿಯೊಬ್ಬರು ವೇದಿಕೆಯ ಮೇಲೆ ಬಂದು ವಿವಾಹವಾಗುವ ಜೋಡಿಯಾದ ಅನಂತ್ ಅಂಬಾನಿ ಹಾಗೂ ರಾಧಿಕಾಗೆ ಆಶೀರ್ವಾದ ಮಾಡಿದ್ದಾರೆ. ಈ ವೇಳೆ ರಾಧಿಕಾ ಮರ್ಚೆಂಟ್‌ಗೆ ಹೂಗುಚ್ಛವನ್ನು ನೀಡಿ ಶುಭಾಶಯ ಕೋರಿದ್ದಾರೆ. ಪಕ್ಕದಲ್ಲಿಯೇ ನಿಂತಿದ್ದ ಕೋಟ್ಯಾಧೀಶ್ವರ ಅನಂತ್ ಗೆ 100 ರೂ. ನೋಟನ್ನು ಮುಯ್ಯಿಯಾಗಿ ನೀಡಿ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದಾರೆ. ಈ ವೇಳೆ ಅನಂತ್ ಒಂದಿನಿತೂ ತಾನು ಶ್ರೀಮಂತನೆಂಬ ಗರ್ವವನ್ನು ತೋರಿಸದೇ ನಗು-ನಗುತ್ತಲೇ ಗೌರವ ಪೂರ್ವಕವಾಗಿ ಮುಯ್ಯಿ ಹಣವನ್ನು ಪಡೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296