ತಮಿಳುನಾಡು ಚಿತ್ರರಂಗದ ಹಿರಿಯ ಚಿತ್ರಕಥೆಗಾರ ಅರೂರ್ ದಾಸ್ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ತಮಿಳುನಾಡು ಚಿತ್ರರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದ ಅರೂರ್ ದಾಸ್ ತಮ್ಮ ವೃತ್ತಿಜೀವನದಲ್ಲಿ ಸುಮಾರು 1000 ಚಿತ್ರಗಳಿಗೆ ಚಿತ್ರಕತೆ ಬರೆದ ದಾಖಲೆ ಹೊಂದಿದ್ದರು. ಅರೂರ್ ದಾಸ್ ನಿಧನಕ್ಕೆ ಮುಖ್ಯಮಂತ್ರಿ ಸ್ಟಾಲಿನ್ ಶೋಕ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ತಿರುವೂರ್ ನಲ್ಲಿ ಜನಿಸಿದ್ದ ಅರೂರ್ ದಾಸ್ ತಮ್ಮ ಹೆಸರಿಗೆ ತಿರುವೂರ್ ಹೆಸರನ್ನು ಸೇರಿಸಿಕೊಂಡಿದ್ದರು. 16ನೇ ವಯಸ್ಸಿಗೆ ಬರವಣಿಗೆ ಬಗ್ಗೆ ಆಸಕ್ತಿ ಹೊಂದಿದ್ದ ಆರೂರ್ ನಾಟಕಗಳನ್ನು ಬರೆಯಲು ಆರಂಭಿಸಿದ್ದರು.
ನಂತರ ಡಬ್ಬಿಂಗ್ ಸಹಾಯಕರಾಗಿ ವೃತ್ತಿ ಆರಂಭಿಸಿದರು. ನಂತರ ಕೈದಿ ಮುಂತಾದ ಡಬ್ಬಿಂಗ್ ಚಿತ್ರಗಳಿಗೆ ಸಂಭಾಷಣೆ ಭಾಷಾಂತರ ಮಾಡುವ ಕೆಲಸ ಮಾಡಿದರು. ಜೆಮಿನಿ ಗಣೇಶನ್ ಮತ್ತು ಬಿ. ಸರೋಜಾದೇವಿ ಅಭಿನಯದ ವಜಾ ವೈತಾ ದೇವಿಯಂ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಚಿತ್ರಕಥೆಗಾರನಾಗಿ ಗುರುತಿಸಿಕೊಂಡರು.
ತಮಿಳುನಾಡಿನ ಸ್ಟಾರ್ ಗಳಾಗಿದ್ದ ಎಂಜಿಆರ್, ಶಿವಾಜಿ ಗಣೇಶನ್ ಅವರಿಗೆ ನಿರ್ದಿಷ್ಟವಾಗಿ ಅರೂರ್ ಬೇಕಿದ್ದರು. ಶಿವಾಜಿ ಗಣೇಶನ್ ಅಭಿನಯದ ಪಾಸಮಲರ್ ನಿಂದ ಇಂದಿಗೂ ಆರೂರ್ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ.
ವರದಿ : ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy