ಕೊರಟಗೆರೆ : ಪಟ್ಟಣದ ಎಸ್ ಎಸ್ ಆರ್ ವೃತದಲ್ಲಿ ತ್ರಿವಿಧ ದಾಸೋಹಿ ನಡೆದಾಡುವ ದೇವರು ಕಾಯಕಯೋಗಿ ಡಾ.ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.
ಬಿಜೆಪಿ ಮುಖಂಡ ಪವನ್ ಕುಮಾರ್ ಮಾತನಾಡಿ, ಪ್ರತಿ ವರ್ಷದಂತೆ ಕೊರಟಗೆರೆಯಲ್ಲಿ ಸಮಸ್ತ ನಾಗರಿಕರ ಸಹಕಾರದಿಂದ ಸ್ವಾಮೀಜಿಯವರ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಹಾಗೆಯೇ ಇಂದು ಕೂಡ ಡಾ.ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತೋತ್ಸವ ಕಾರ್ಯಕ್ರಮವನ್ನು ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆಯನ್ನು ಮಾಡಿ ಹಬ್ಬದ ರೀತಿ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷರಾದ ದರ್ಶನ್ ಮಾತನಾಡಿ, ನಮಗೆ ತಿಳಿದಿರುವ ಹಾಗೆ ಡಾ.ಶಿವಕುಮಾರ್ ಸ್ವಾಮೀಜಿಯವರ ಕೊಡುಗೆ ಏನೆಂಬುದು ನಮ್ಮ ರಾಜ್ಯಕ್ಕೆ ಅಲ್ಲ ಇಡೀ ದೇಶಕ್ಕೆ ತಿಳಿದಿದೆ. ಸ್ವಾಮೀಜಿಗಳು ಎಂದರೆ ಹೀಗಿರಬೇಕು. ಮಠದಲ್ಲಿ ವಾಸಿಸುವ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದರ ಜೊತೆಗೆ ಆ ಮಕ್ಕಳಿಗೆ ಊಟದ ವ್ಯವಸ್ಥೆ ಆ ಮಕ್ಕಳಿಗೆ ಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಇಂದು ಪ್ರಪಂಚದ ಮೂಲೆ ಮೂಲೆಯಲ್ಲಿ ಇಲ್ಲಿ ವಿದ್ಯಾಭ್ಯಾಸದ ಮಾಡಿದ ಮಕ್ಕಳು ಉದ್ಯೋಗದಲ್ಲಿದ್ದಾರೆ. ಇದು ನಮ್ಮ ನಡೆದಾಡುವ ದೇವರ ಕೊಡುಗೆ ಎಂದು ತಿಳಿಸಿದರು..
ಭಕ್ತೆ ಸುಶೀಲಮ್ಮ ಮಾತನಾಡಿ, ಮಠಕ್ಕೆ ಪ್ರತಿದಿನ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಬೆಳಗಿನಿಂದ ರಾತ್ರಿಯ ತನಕ ಊಟದ ವ್ಯವಸ್ಥೆ ಇದೆ. ಮಠದಲ್ಲಿ ಇಂದಿಗೂ ಹಚ್ಚಿರುವ ಹೊಲೆ ಹಾರಿಲ್ಲ ಪ್ರತಿದಿನ ದಾಸೋಹ ನಡೆಯುತ್ತಲೇ ಇರುತ್ತೆ ಅಂತಹ ದೈವ ಪುರುಷರು ನಮ್ಮ ಜಿಲ್ಲೆಯಲ್ಲಿ ಇದ್ದರೂ ಎನ್ನುವುದೇ ನಮ್ಮ ಪುಣ್ಯ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಭಕ್ತಾದಿಗಳಾದ ಪರ್ವತಯ್ಯ, ಪವನ್ ಕುಮಾರ್,ಪ್ರದೀಪ್ ಕುಮಾರ್,ಹೊಳವನಹಳ್ಳಿ ಚೇತನ ಆರಾಧ್ಯ, ಸಿದ್ದರಾಜು, ನಂಜುಂಡಯ್ಯ, ಸುಶೀಲಮ್ಮ, ಸಿದ್ದ ಮಲ್ಲಪ್ಪ, ಕಾಮರಾಜು, ಲಕ್ಷ್ಮೀಶ್, ಜೆಡಿಎಸ್ ಯು ಅಧ್ಯಕ್ಷರಾದ ಕೌಶಿಕ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296