ಶ್ರವಣಬೆಳಗೊಳ: ಶ್ರೀ ಕ್ಷೇತ್ರದ ಬಂಡಾರಿ ಬಸದಿಯಲ್ಲಿ 12 ಅಡಿ ಎತ್ತರದ ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿಯನ್ನು ಭಾನುವಾರ ಪ್ರತಿಷ್ಠಾಪಿಸಿ, ವೈಭವದ ಮಸ್ತಕಾಭಿಷೇಕ ನೆರವೇರಿಸಲಾಯಿತು.
ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿರುವ ವಿಶ್ವವಿಖ್ಯಾತ 58 ಅಡಿ ಎತ್ತರದ ಬಾಹುಬಲಿ ಮೂರ್ತಿಯನ್ನು ನೋಡಲು ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಅವರಲ್ಲಿ ವಯೋವೃದ್ದರೂ, ವಿಕಲಚೇತನರು ಸೇರಿದಂತೆ ಅಶಕ್ತರು ವಿಂಧ್ಯಗಿರಿ ಬೆಟ್ಟ ಹತ್ತಿ ಬಾಹುಬಲಿಯ ದರ್ಶನ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಹಿಂದಿನ ಪೀಠಾಧ್ಯಕ್ಷರಾಗಿದ್ದ ಸ್ವಸ್ತಿಶ್ರೀ ಚಾರುಕಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು 8 ವರ್ಷಗಳ ಹಿಂದೆ 12 ಅಡಿ ಮೂರ್ತಿ ಯನ್ನು ಕೆತ್ತಿಸಿದರು. ಆದರೆ ಪ್ರತಿಷ್ಠಾಪನೆ ಮಾಡಲು ಸಾಧ್ಯವಾಗಿರಲಿಲ್ಲ.
ಪ್ರಸ್ತುತ ಶ್ರೀಮಠದ ಪೀಠಾಧ್ಯಕ್ಷರಾಗಿರುವ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ, ಆಚಾರ್ಯ ಶ್ರೀ ಕುಂತುಸಾಗರ ಮಹಾರಾಜರು ಮತ್ತು ಸಂಘಸ್ಥ ಯಾಗಿಗಳು ಹಾಗೂ ಸಮಸ್ತ ಭಟ್ಟಾರಕ ಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಮೂರು ದಿನಗಳಿಂದ ಪಂಚಕಲ್ಯಾಣ ಹಾಗೂ ಪೂಜಾ ವಿಧಿ ವಿಧಾನಗಳು ನೆರವೇರಿಸಲಾಯಿತು.
ಭಾನುವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಸ್ತಕಾಭಿಷೇಕ ಕಾರ್ಯಕ್ರಮವು ವಿವಿಧ ಜಲ, ಗಂಧ, ದ್ರವ್ಯ, ಪುಷ್ಪಗಳ ಅಭಿಷೇಕ ವಿಜೃಂಭಣೆಯಿಂದ ನೆರವೇರಿತು.
ಮೊದಲಿಗೆ ಗುಳ್ಳಕಾಯಿಅಜ್ಜಿ ಕಳಶ, ಚಾವುಂಡರಾಯ ಕಳಶ, ಜಲಾಭಿಷೇಕ, ಎಳನೀರು, ತೆಂಗಿನಕಾಯಿ ತುರಿ, ದಾಳಿಂಬೆರಸ, ಮೋಸಂಬಿರಸ, ಕಿತ್ತಳೆರಸ, ಮಾವಿನರಸ, ಕಬ್ಬಿನರಸ, ಫಲಾಭಿಷೇಕ, ಕಡಲೆಬೇಳೆ, ಹೆಸರುಬೇಳೆ, ಸಕ್ಕರೆ, ಬೆಲ್ಲ, ತುಪ್ಪ, ಹಾಲು, ಮೊಸರು, ಅಕ್ಕಿ ಹಿಟ್ಟು, ಅರಿಶಿನ ಹಿಟ್ಟು, ಅರಿಶಿನ, ರ‍್ವಔಷಧಿ, ಕಷಾಯ, ಚತುಷ್ಕೋನ ಕಳಶ, ರಕ್ತಚಂದನ, ಅಷ್ಟಗಂಧ, ಕೇಸರಿ, ಮಲಯಗಿರಿ ಚಂದನ, ನವರತ್ನ, ಬೆಳ್ಳಿ ಹೂವು, ಬಂಗಾರದ ಹೂವು, ಲವಂಗ, ಮಂಗಳೂರು ಮಲ್ಲಿಗೆ, ಮೈಸೂರು ಮಲ್ಲಿಗೆ, ಸಂಪಿಗೆ, ರ‍್ಲೆ, ಏಳು ಬಗೆಯ ಸೇವಂತಿಗೆ, ಆರು ಬಗೆಯ ಗುಲಾಬಿ, ಕೆಂಪುಕಮಲ, ಬಿಳಿತಾವರೆ, ಪಾರಿಜಾತ, ಕನಕಾಂಬರ, ಕರವೀರ, ಬಿಳಿ ಕಣಗಲೆ, ಅಶೋಕ ಪುಷ್ಪ, ಪಂಚರಂಗಿ ಹಾರ, ಅಷ್ಟವಿಧರ‍್ಚನೆ, ಆರತಿ, ಪಂಚಾರತಿ, ರ‍್ಪೂರದಾರತಿ, ಬೆಳ್ಳಿ ಆರತಿ, ಮುತ್ತುರತ್ನ ಆರತಿ, 108 ಕಳಶಗಳು ಹಾಗೂ ಮಹಾ ಶಾಂತಿದಾರದೊಂದಿಗೆ ಸಂಪನ್ನಗೊಂಡಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4