ಒಂದು ಕೋಳಿ ಸಾಮಾನ್ಯವಾಗಿ ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆಗಳನ್ನು ಇಡುತ್ತದೆ. ಆದರೆ ಉತ್ತರಾಖಂಡ ರಾಜ್ಯದ ಕೋಳಿಯೊಂದು 12 ಗಂಟೆಗಳಲ್ಲಿ ಏಕಕಾಲಕ್ಕೆ 31 ಮೊಟ್ಟೆಗಳನ್ನು ಇಟ್ಟಿದೆ. ಅಲ್ಮೋರಾ ಜಿಲ್ಲೆಯ ಬಸೋತ್ ಗ್ರಾಮದ ಗಿರೀಶ್ ಚಂದ್ರ ಬುಧಾನಿ ಕೋಳಿ ಸಾಕಿದ್ದಾರೆ. ಈ ಕೋಳಿ ಸಾಮಾನ್ಯವಾಗಿ ದಿನಕ್ಕೆ ಎರಡು ಮೊಟ್ಟೆಗಳನ್ನು ಇಡುತ್ತದೆ.
ಆದರೆ ಇದೇ ತಿಂಗಳ 25ರಂದು ಬೆಳಗ್ಗೆ 10ರಿಂದ ರಾತ್ರಿ 10 ಗಂಟೆಯೊಳಗೆ 31 ಮೊಟ್ಟೆ ಇಟ್ಟಿವೆ ಎಂದು ಗಿರೀಶ್ ತಿಳಿಸಿದರು. ಗಿರೀಶ್ ಅವರ ಮನೆಗೆ ಬಂದ ಪಶುಸಂಗೋಪನೆ ಅಧಿಕಾರಿಗಳು ವಿವರ ತಿಳಿದು ಅಚ್ಚರಿ ವ್ಯಕ್ತಪಡಿಸಿದರು. ಇದರಿಂದ ನೋಡಲು ಗಿರೀಶ್ ಮನೆಗೆ ಹಲವರು ಬರುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


