12 ವರ್ಷಗಳ ಹಿಂದೆ, ತನ್ನ 18 ನೇ ವಯಸ್ಸಿನಲ್ಲಿ, ಅಮಿತ್ ಚೌಧರಿ ಎಂಬ ವ್ಯಕ್ತಿ ತಾನು ಮಾಡದ ಅಪರಾಧದಲ್ಲಿ ಸಿಕ್ಕಿಹಾಕಿಕೊಂಡು ಜೈಲು ಸೇರಿದ್ದರು.
ಉತ್ತರ ಪ್ರದೇಶದ ಮೀರತ್ ನಲ್ಲಿ ಇಬ್ಬರು ಕಾನ್ಸ್ ಟೇಬಲ್ ಗಳ ಹತ್ಯೆಯ ಆರೋಪ ಇವರ ಮೇಲಿತ್ತು. ಈ ಪ್ರಕರಣದಲ್ಲಿ 17 ಆರೋಪಿಗಳ ಪೈಕಿ ಅಮಿತ್ ಚೌಧರಿ ಹೆಸರು ಕೂಡ ಸೇರಿತ್ತು.
2013ರಲ್ಲಿ ಜಾಮೀನು ಪಡೆದು ಹೊರಬಂದ ಇವರು ತಮ್ಮ ಪ್ರಕರಣವನ್ನು ನ್ಯಾಯಾಲಯದಲ್ಲಿ ವಾದ ಮಾಡಲು ಕಾನೂನು ಅಧ್ಯಯನ ಮಾಡಿದರು. ಕೊನೆಗೂ ತಾನು ನಿರಪರಾಧಿ ಎಂಬುದನ್ನು ಸಾಬೀತು ಪಡಿಸಿದರು.


