ಕಳೆದ 12 ದಿನಗಳಿಂದ ದೇಶದಲ್ಲಿ ಪ್ರತಿದಿನ ಪೆಟ್ರೋಲ್ ಡಿಸೇಲ್ ದರ ಏರಿಕೆಯಾಗುತ್ತಲೇ ಇದೆ. ಇಂದು ಕೂಡ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ತಲಾ 80 ಪೈಸೆಯಷ್ಟು ಏರಿಕೆಯಾಗಿದೆ.
ಕಳೆದ 12 ದಿನಗಳಲ್ಲಿ ಉಭಯ ಇಂಧನಗಳ ದರ ಪ್ರತಿ ಲೀಟರ್ ಗೆ 7.20 ರೂ. ನಷ್ಟು ಹೆಚ್ಚಾದಂತಾಗಿದೆ. ರಾಷ್ಟ್ರ ರಾಜಧಾನಿಯಲ್ಲೀಗ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 102.61 ರೂ. ಮತ್ತು 93.87 ರೂ. ಆಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಳೆದ ನಾಲ್ಕೂವರೆ ತಿಂಗಳ ಕಾಲ ಇಂಧನ ದರ ಪರಿಷ್ಕರಿಸಿರಲಿಲ್ಲ. ಮಾರ್ಚ್ 22ರಿಂದ ಪರಿಷ್ಕರಣೆ ಆರಂಭಿಸಿದ್ದವು. ಬಳಿಕ ಈವರೆಗೆ 10 ಬಾರಿ ದರ ಪರಿಷ್ಕರಿಸಲಾಗಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ದರ 108.13 ರೂ. ಮತ್ತು 92.03 ರೂ. ಆಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5