ವಾಷಿಂಗ್ಟನ್: ಮಹಿಳೆಯರು ಮತ್ತು ಮಕ್ಕಳ ನಗ್ನ ವಿಡಿಯೋಗಳನ್ನು ರಹಸ್ಯವಾಗಿ ಮಾಡಿಟ್ಟುಕೊಂಡಿದ್ದ ಆರೋಪದ ಮೇಲೆ ಭಾರತ ಮೂಲದ ವೈದ್ಯನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.
ಒಮೈರ್ ಐಜಾಜ್ ಬಂಧಿತ ವೈದ್ಯನಾಗಿದ್ದು, ಆಗಸ್ಟ್ 8ರಂದು ಈತನನ್ನು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಬಂಧಿಸಿದ್ದು, ಈತನ ಬಳಿಯಲ್ಲಿ 13,000ಕ್ಕೂ ಹೆಚ್ಚು ಮಹಿಳೆಯರು, ಮಕ್ಕಳ ವಿಡಿಯೋಗಳು ಪತ್ತೆಯಾಗಿವೆ.
ಆಸ್ಪತ್ರೆಯ ವಿವಿಧ ಭಾಗಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಟ್ಟು ಈತ ವಿಡಿಯೋ ಮಾಡಿಕೊಳ್ಳುತ್ತಿದ್ದ. ಶೌಚಾಲಯ, ಆಸ್ಪತ್ರೆ ಕೊಠಡಿ, ಬಟ್ಟೆ ಬದಲಿಸುವ ಸ್ಥಳಗಳಲ್ಲಿ ಈತ ರಹಸ್ಯ ಕ್ಯಾಮರಾ ಇಟ್ಟು ವಿಡಿಯೋ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಇಷ್ಟೇ ಅಲ್ಲದೇ ತನ್ನ ಸ್ವಂತ ಮನೆಯಲ್ಲೇ ಕ್ಯಾಮರಾ ಇಟ್ಟು ತನ್ನ 2 ವರ್ಷದ ಹೆಣ್ಣು ಮಗುವಿನ ಬೆತ್ತಲೆ ವಿಡಿಯೋವನ್ನು ಈತ ಇಟ್ಟುಕೊಂಡಿದ್ದು, ಈತನ ಕೃತ್ಯ ಗೊತ್ತಾದ ಬಳಿಕ ಸ್ವತಃ ಈತನ ಪತ್ನಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಲ್ಲ ಸಾಕ್ಷ್ಯಗಳನ್ನು ಪೊಲೀಸರಿಗೆ ತಲುಪಿಸಿದ್ದಾಳೆ.
ಈತನ ಕಂಪ್ಯೂಟರ್, ಫೋನ್ ಸೇರಿದಂತೆ ಸುಮಾರು 15 ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಹಾರ್ಡ್ ಡ್ರೈವ್‌ನಲ್ಲಿಯೇ 13,000 ವಿಡಿಯೋಗಳಿದ್ದವು. ಕ್ಲೌಡ್ ಸ್ಟೋರೇಜ್‌ನಲ್ಲಿಯೂ ವಿಡಿಯೋಗಳನ್ನು ಸಂಗ್ರಹಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q