nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಹಿಳೆ ನದಿಗೆ ಹಾರಿ ಆತ್ಮಹತ್ಯೆ, ಶವ ತೆಗೆಯಲು ಹೋದ ವ್ಯಕ್ತಿಯೂ ನೀರುಪಾಲು

    November 16, 2026

    ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹ: ನಾಳೆ (ನ.17) ಔರಾದ್ ಪಟ್ಟಣ ಬಂದ್ ಗೆ ಕರೆ

    November 16, 2026

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026
    Facebook Twitter Instagram
    ಟ್ರೆಂಡಿಂಗ್
    • ಮಹಿಳೆ ನದಿಗೆ ಹಾರಿ ಆತ್ಮಹತ್ಯೆ, ಶವ ತೆಗೆಯಲು ಹೋದ ವ್ಯಕ್ತಿಯೂ ನೀರುಪಾಲು
    • ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹ: ನಾಳೆ (ನ.17) ಔರಾದ್ ಪಟ್ಟಣ ಬಂದ್ ಗೆ ಕರೆ
    • ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ
    • ರಾಷ್ಟ್ರಮಟ್ಟದ ರೈಫಲ್ ಶೂಟಿಂಗ್‌ ಗೆ ಆಯ್ಕೆಯಾದ ತುಮಕೂರಿನ ಯುವ ಕ್ರೀಡಾಪಟುಗಳಿಗೆ ಡಾ. ಜಿ. ಪರಮೇಶ್ವರ್ ಅಭಿನಂದನೆ
    • ಸಂಘಟನಾತ್ಮಕ ಚಟುವಟಿಕೆಗಳಿಗೆ ವೇಗ: ತುಮಕೂರು–ಚಿತ್ರದುರ್ಗ ಬಿಜೆಪಿ ಸಭೆ
    • ಕನಸುಗಳ ಹಿಂದಿನ ರಹಸ್ಯವೇನು? ಸ್ವಪ್ನ ಶಾಸ್ತ್ರದ ಪ್ರಕಾರ ಈ 7 ಕನಸುಗಳು ನೀಡುತ್ತವೆ ವಿಶೇಷ ಸೂಚನೆ!
    • ತಿಪಟೂರು: ಹಾಲ್ಕುರಿಕೆ ರಸ್ತೆ ಭಾಗದಲ್ಲಿ ನ.16ರಿಂದ ಡಿ.5ರವರೆಗೆ ವಿದ್ಯುತ್ ವ್ಯತ್ಯಯ
    • ಚಳಿಗಾಲದಲ್ಲಿ ಪದೇ ಪದೇ ಹಸಿವಾಗುವುದೇಕೆ? ಸಿಹಿ, ಖಾರ ತಿನ್ನುವ ಬಯಕೆಯ ಹಿಂದಿದೆ ಈ ಕಾರಣಗಳು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾಜ್ಯಾದ್ಯಂತ 136 ವ್ಹಿಲಿಂಗ್ ಪ್ರಕರಣ: 128 ಜನರ ಬಂಧನ: ಡಾ.ಜಿ.ಪರಮೇಶ್ವರ್
    ರಾಜ್ಯ ಸುದ್ದಿ March 6, 2025

    ರಾಜ್ಯಾದ್ಯಂತ 136 ವ್ಹಿಲಿಂಗ್ ಪ್ರಕರಣ: 128 ಜನರ ಬಂಧನ: ಡಾ.ಜಿ.ಪರಮೇಶ್ವರ್

    By adminMarch 6, 2025No Comments2 Mins Read
    g parameshwar

    ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್.ಭೋಜೇಗೌಡ ಅವರು ಇಂದು ಪ್ರಶ್ನೋತ್ತರ ಕಲಾಪ ವೇಳೆ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಕೇಳಿದ ವಿವಿಧ ಪ್ರಶ್ನೆಗಳಿಗೆ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಉತ್ತರಿಸಿರುವ ಪ್ರಮುಖ ಅಂಶಗಳು:-

    ರಾಜ್ಯಾದ್ಯಂತ 136 ವ್ಹಿಲಿಂಗ್ ಪ್ರಕರಣಗಳನ್ನು ದಾಖಲಿಸಿ, ಈ ಪ್ರಕರಣಗಳಲ್ಲಿ 128 ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. 2024ರಲ್ಲಿ 266 ಪ್ರಕರಣಗಳಲ್ಲಿ 179 ಜನರನ್ನು ಬಂಧಿಸಲಾಗಿದೆ. 2025ರಲ್ಲಿ ಈವರೆಗೆ 47 ಪ್ರಕರಣಗಳಲ್ಲಿ 30 ಜನರನ್ನು ಬಂಧಿಸಲಾಗಿದೆ.

    ಮಾರಕಾಸ್ತ್ರ ಗಳನ್ನು ಹಿಡಿದು ಪುಂಡಾಟಿಕೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. 2023ರಲ್ಲಿ 68 ಪ್ರಕರಣ ದಾಖಲಿಸಿ, 147 ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ 66 ಪ್ರಕರಣಗಳಲ್ಲಿ 187 ಆರೋಪಿಗಳು , 2025ರ ಫೇಬ್ರವರಿವರೆಗೆ 26 ಕೇಸ್ ದಾಖಲಿಸಿ 86 ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಇಂತ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಂಡು, ಕಠಿಣ ಶಿಕ್ಷೆ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

    ಬೆಂಗಳೂರಿನಲ್ಲಿ 2023ರಲ್ಲಿ ವ್ಹಿಲಿಂಗ್ ಮಾಡಿದವರ ವಿರುದ್ಧ 242 ಪ್ರಕರಣಗಳನ್ನು ದಾಖಲಿಸಿ, 264 ಆರೋಪಿತರ ಪೈಕಿ 207 ಜನರನ್ನು ಬಂದಿಸಲಾಗಿದೆ. 2024ರಲ್ಲಿ 532 ಪ್ರಕರಣ ದಾಖಲಿಸಿ 479 ಬಂಧಿಸಿದ್ದೇವೆ. 2025ರಲ್ಲಿ ಈವರೆಗೆ 114 ಪ್ರಕರಣಗಳಲ್ಲಿ 102 ಜನರನ್ನು ಬಂಧಿಸಿ ಕ್ರಮ ಜರುಗಿಸಲಾಗಿದೆ. ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಪೊಲೀಸ್ ಇಲಾಖೆಗೆ ಸಾಧ್ಯವಿಲ್ಲ. ಸಮಾಜಕ್ಕೂ ಸಹ ಇದು ಆಗುವುದಿಲ್ಲ.  ಕಠಿಣವಾದ ಕ್ರಮಗಳನ್ನು ಜರುಗಿಸಲಾಗುತ್ತಿದೆ.

    ಹೊಯ್ಸಳ ವಾಹನ, ಎಎಸ್ ಐ ಗಳಿಗೆ ರಿವಲ್ವಾರ್ ಗಳನ್ನು ಸಹ ನೀಡಲಾಗಿದೆ. 24 ಗಂಟೆ ಬೀಟ್ ವ್ಯವಸ್ಥೆ ಇದೆ. ಬೆಂಗಳೂರು ನಗರದಲ್ಲಿ ಹೆಚ್ಚು ಫೋಕಸ್ ಮಾಡಲಾಗಿದೆ.

    ಬೆಂಗಳೂರಿನಲ್ಲಿ ಈ ಹಿಂದೆಯೂ ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ನಿಯೋಗವನ್ನು ಲಂಡನ್ ಗೆ ಕರೆದೊಯ್ದಿದ್ದೆ. ಲಂಡನ್ ನಗರ ಮೆಟ್ರೋ ಪೊಲೀಸ್ ಜನರ ತುರ್ತು ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡುತ್ತಾರೆ, ಆ ವ್ಯವಸ್ಥೆಯನ್ನು ಬೆಂಗಳೂರು ನಗರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಏರಿಯಾ ವಾರು ತಕ್ಷಣಕ್ಕೆ ಜನರಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಬೆಂಗಳೂರು ನಗರ ಪೊಲೀಸರಿಗೆ ಕಲ್ಪಿಸಲಾಗಿದೆ.  ಏನೇ ಘಟನೆ ಆದರೂ ಸಹ ಪೊಲೀಸರಿಂದ 9 ನಿಮಿಷದಲ್ಲಿ ರೆಸ್ಪೋನ್ಸ್ ಸಿಗುತ್ತಿದೆ. ಇದು ದಿನದ 24 ಗಂಟೆಯೂ ನಡೆಯುವ ಪ್ರಕ್ರಿಯೆ.

    ಮಹಿಳಾ ಸುರಕ್ಷತೆಗೆ ಪಿಂಕ್ ಹೊಯ್ಸಳ ಇದೆ. ಬೆಂಗಳೂರು ನಗರದಲ್ಲಿ ಶಾಂತಿ ಇದೆ. ಯಾವುದೇ ಘಟನೆಗಳದಾಗ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ.

    ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗುವ ರೌಡಿಶೀಟರ್ ಗಳ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಲಾಗಿದೆ. . 2022ರಲ್ಲಿ 44, 2023ರಲ್ಲಿ 53 ಪ್ರಕರಣ,  2024ರಲ್ಲಿ 34, 2025ರಲ್ಲಿ  8 ಪ್ರಕರಣ ದಾಖಲಿಸಲಾಗಿದೆ.

    ಬೆಂಗಳೂರು ನಗರದಲ್ಲಿ 7 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು 1640 ಸ್ಥಳಗಳಲ್ಲಿ ಅಳವಡಿಸಲಾಗಿದೆ. ಹೈ ರೆಸೂಲುಷನ್ ಕ್ಯಾಮೆರಾಗಳನ್ನು ಹಾಕಿದ್ದೇವೆ. ಈ ಕ್ಯಾಮೆರಾಗಳಿಗೆ ಎಐ ತಂತ್ರಜ್ಞಾನವನ್ನು ಅಳವಡಿಸಿದ್ದೇವೆ. ಪೊಲೀಸರಿಗೆ ಬಾಡಿವೊರ್ನ್ ಕ್ಯಾಮೆರಾಗಳನ್ನು ಒದಗಿಸಿದ್ದೇವೆ. ಏನೆಲ್ಲಾ ಟೆಕ್ನಾಲಜಿಗಳಿವೆಯೋ ಅದೆಲ್ಲವನ್ನು ಬೆಂಗಳೂರು ನಗರ ಪೊಲೀಸ್ ಸೇರಿದಂತೆ ರಾಜ್ಯದ ಎಲ್ಲ ಪೊಲೀಸರಿಗೆ ಒದಗಿಸಲಾಗಿದೆ. ಕರ್ನಾಟಕ ಪೊಲೀಸರು ಟೆಕ್ನಾನಾಲಾಜಿ ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದೆ.

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿರೋಧ ಪಕ್ಷದ ಮುಖಂಡರು ನಿರಾದರವಾಗಿ ಆರೋಪಿಸುತ್ತಿದ್ದಾರೆ. ಆ ರೀತಿಯ ಸಮಸ್ಯೆ ಉದ್ಭವಿಸಿಲ್ಲ. ರಾಜ್ಯದಾದ್ಯಂತ 2020ರಲ್ಲಿ 1315 ಕೊಲೆ ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ 1340, 2022ರಲ್ಲಿ 1346, 2023ರಲ್ಲಿ 1294, 2024ರಲ್ಲಿ 1208 ಪ್ರಕರಣಗಳು, 2025 ಜನವರಿ ಇಂದ ಈವರೆಗೆ 100 ಪ್ರಕರಣಗಳು ವರದಿಯಗಿವೆ. ಕೊಲೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ. ಅಪರಾಧ ಪ್ರಕಾರಣಗಳನ್ನನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ರಾಜ್ಯ ಪೊಲೀಸ್ ಇಲಾಖೆಯು ಹೆಚ್ಚು ಒತ್ತು ನೀಡಲಾಗುತ್ತಿದೆ. ಸೈಬರ್ ಘಟಕ ಆರಂಭಿಸಿ ಡಿಜಿ ಶ್ರೇಣಿಯ ಅಧಿಕಾರಿಯನ್ನು ನೇಮಿಸಲಾಗಿದೆ. ಸೈಬರ್ ವಂಚಕರು ದಿನನಿತ್ಯ  ಕೋಟ್ಯಾಂತರ ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗಳಿಂದ ದೋಚುತ್ತಿದ್ದಾರೆ. ಡೇಟಾ ಕದಿಯುತ್ತಿದ್ದಾರೆ. ಸೈಬರ್ ಅಪರಾಧಗಳನ್ನು ಮತ್ತ ಹಾಕಲು ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಕೆಕೆಆರ್ ಟಿಸಿ ನಿರ್ದೇಶಕ ಸ್ಥಾನಕ್ಕೆ ಚಂದ್ರಕಾಂತ ಹಿಪ್ಪಳಗಾಂವ ರಾಜೀನಾಮೆ ಘೋಷಣೆ

    November 15, 2026

    ಬಾಕಿ ಸಂಬಳ ಕೇಳಿದ್ದಕ್ಕೆ ಚಾಲಕನ ಅಪಹರಣ, ಮಾರಣಾಂತಿಕ ಹಲ್ಲೆ: ಮಾಲೀಕ ಸೇರಿ ಮೂವರ ಬಂಧನ

    November 15, 2026

    ಆಸ್ತಿ ಖರೀದಿದಾರರ ಜೇಬಿಗೆ ಕತ್ತರಿ! ರಾಜ್ಯಾದ್ಯಂತ ಮಾರ್ಗಸೂಚಿ ದರ ಏರಿಕೆಗೆ ಸಿದ್ಧತೆ

    November 15, 2026

    Comments are closed.

    Our Picks

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026

    ರಾಮಾಯಣದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ಯಾರು? ರಾವಣನ ಕೈಗೆ ಸಿಕ್ಕಿದ್ದು ಹೇಗೆ? ಪುರಾಣ ಮತ್ತು ವಿಜ್ಞಾನ ಹೇಳುವುದೇನು?

    November 15, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    ಯೋಗವು ರೋಗಮುಕ್ತಿ ಮಾತ್ರವಲ್ಲ, ಭೋಗಮುಕ್ತಿಯನ್ನೂ ನೀಡುತ್ತದೆ; ಪ್ರತಿಯೊಬ್ಬರಿಗೂ ಆಯುರ್ವೇದ ತಲುಪಿಸುವುದೇ ಸರ್ಕಾರದ ಗುರಿ: ಪ್ರಧಾನಿ ಮೋದಿ

    November 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಮಹಿಳೆ ನದಿಗೆ ಹಾರಿ ಆತ್ಮಹತ್ಯೆ, ಶವ ತೆಗೆಯಲು ಹೋದ ವ್ಯಕ್ತಿಯೂ ನೀರುಪಾಲು

    November 16, 2026

    ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮುಗಳೂರು ಸಮೀಪದ ದಕ್ಷಿಣ ಪಿನಾಕಿನಿ ನದಿಯಲ್ಲಿ ಹೃದಯವಿದ್ರಾವಕ ದುರಂತವೊಂದು ಸಂಭವಿಸಿದೆ. ಕೌಟುಂಬಿಕ…

    ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹ: ನಾಳೆ (ನ.17) ಔರಾದ್ ಪಟ್ಟಣ ಬಂದ್ ಗೆ ಕರೆ

    November 16, 2026

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026

    ರಾಷ್ಟ್ರಮಟ್ಟದ ರೈಫಲ್ ಶೂಟಿಂಗ್‌ ಗೆ ಆಯ್ಕೆಯಾದ ತುಮಕೂರಿನ ಯುವ ಕ್ರೀಡಾಪಟುಗಳಿಗೆ ಡಾ. ಜಿ. ಪರಮೇಶ್ವರ್ ಅಭಿನಂದನೆ

    November 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.