ಬಿಎಂಟಿಸಿ ಪ್ರಯಾಣಿಕರಿಗೊಂದು ಸಿಹಿ ಸುದ್ದಿ. ಆ.15ರಂದು ನಗರದಾದ್ಯಂತ ಬಿಎಂಟಿಸಿ ಬಸ್‍ಗಳಲ್ಲಿ ಸಂಚರಿಸಿದರೆ ಟಿಕೆಟ್ ಖರೀದಿಸಬೇಕಾಗಿಲ್ಲ. ಉಚಿತವಾಗಿ ಪ್ರಯಾಣ ಮಾಡಬಹುದು. 75ನೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬಿಎಂಪಿಟಿ ಮಹತ್ವದ ಸೇವೆಯನ್ನು ಘೋಷಿಸಿದೆ.
15ರಂದು ಇಡೀ ದಿನ ಬೆಂಗಳೂರಿನಾದ್ಯಂತ 24 ಗಂಟೆ ಕಾಲ ಸಂಪೂರ್ಣ ಉಚಿತ ಸಂಚಾರವಿರುತ್ತದೆ. ಓಲ್ವೋ ಸೇರಿದಂತೆ ಎಲ್ಲ ಬಿಎಂಟಿಸಿ ಬಸ್‍ಗಳಲ್ಲೂ ಈ ಸೇವೆ ಅನ್ವಯವಾಗಲಿದೆ.
ಇದರಿಂದ ಬಿಎಂಟಿಸಿಗೆ ಸುಮಾರು 3 ಕೋಟಿ ಹೊರೆ ಬೀಳಲಿದೆ. ಆದರೂ ಸಹ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರ ಒಪ್ಪಿಗೆ ಕೊಟ್ಟ ಹಿನ್ನೆಲೆಯಲ್ಲಿ ಉಚಿತ ಪ್ರಯಾಣ ಘೋಷಣೆಯನ್ನು ಮಾಡಲಾಗಿದೆ. ಅಮೃತ ಮಹೋತ್ಸವದ ಅಂಗವಾಗಿ ಆ.14ರಂದು 75 ಎಲೆಕ್ಟ್ರಿಕ್ ಬಸ್‍ಗಳು ರಸ್ತೆಗಿಳಿಯಲಿವೆ. ಈಗಾಗಲೇ ನಗರದಲ್ಲಿ 90 ಎಲೆಕ್ಟ್ರಿಕ್ ಬಸ್‍ಗಳು ಸಂಚರಿಸುತ್ತಿದ್ದು, ಇದರ ಜತೆಗೆ 75 ಬಸ್‍ಗಳು ಸೇರ್ಪಡೆಯಾಗಲಿವೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz