ಬಿಜಾಪುರ: ಛತ್ತೀಸ್ ಗಢದ ಬಿಜಾಪುರದಲ್ಲಿ ಗುರುವಾರ 17 ನಕ್ಸಲಿಯರು ಶರಣಾಗಿದ್ದು, ಶರಣಾದ ನಕ್ಸಲಿಯರ ಪೈಕಿ 9 ಮಂದಿ ನಕ್ಸಲಿಯರ ತಲೆಗೆ ರೂ. 24 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಒಂದು ದಂಪತಿ ಸೇರಿದಂತೆ ಎಲ್ಲಾ 17 ಮಂದಿ ಬಿಜಾಪುರದಲ್ಲಿ ಹಿರಿಯ ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಅಧಿಕಾರಿಗಳ ಮುಂದೆ ಶರಣಾದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಳ್ಳು, ಅಮಾನವೀಯ ನಕ್ಸಲ್ ಸಿದ್ಧಾಂತದಿಂದ ನಿರಾಶೆ, ಹಿರಿಯ ನಕ್ಸಲೀಯರಿಂದ ಅಮಾಯಕ ಆದಿವಾಸಿಗಳ ಶೋಷಣೆ ಮತ್ತು ಭದ್ರತಾ ಪಡೆಗಳ ಪ್ರಭಾವ ಹೆಚ್ಚಳ ಶರಣಾಗತಿಗೆ ಕಾರಣವೆಂದು ನಕ್ಸಲೀಯರು ಹೇಳಿರುವುದಾಗಿ ಬಿಜಾಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4