ಚಿರತೆ ದಾಳಿಗೆ 17 ಕುರಿ ಹಾಗೂ 14 ಮೇಕೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ನಡೆದಿದೆ. ಚಂದ್ರು, ಬಸವರಾಜು, ಮಂಜು ಮತ್ತು ಲಕ್ಷ್ಮಣ್ ಎಂಬುವರಿಗೆ ಸೇರಿದ ಕುರಿಗಳು ಸುಶೀಲಮ್ಮ ಎಂಬುವವರ ತೋಟದ ಮನೆಯಲ್ಲಿದ್ದವು. ಈ ವೇಳೆ ಚಿರತೆ ದಾಳಿ ಮಾಡಿದ್ದು, ಅಂದಾಜು 4 ಲಕ್ಷ ರೂ. ಮೌಲ್ಯದ ಕುರಿಗಳ ಸಾವನ್ನಪ್ಪಿವೆ.
ಬಳಿಕ ಪಶು ವೈದ್ಯ ಉಮೇಶ್ ಅವರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


