ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರುನಗರ ಘಟಕದ ವತಿಯಿಂದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಮೂರುವರೆ ಕೋಟಿ(3.5) ಅನುದಾನ ಮೀಸಲು ಇಡಬೇಕು ಎಂದು ಮನವಿ ಸಲ್ಲಿಸಿದರು.
ಬೆಂಗಳೂರುನಗರ ಘಟಕದ ಅಧ್ಯಕ್ಷರಾದ ಕೆ.ಸತ್ಯನಾರಾಯಣ್ ರವರು, ಕಾರ್ಯಾಧ್ಯಕ್ಷರಾದ ಹುಲಿ ಅಮರ್ ನಾಥ್, ಸಂಘದ ಜಕ್ರಿಯ, ಕೆ.ಲಕ್ಷ್ಮಣ ಹರೀಶ್, ನಾಗರಾಜ್ ಶೆಟ್ಟಿ, ಬಿ.ಟಿ.ಎಸ್.ಶ್ರೀನಿವಾಸ್, ವಿಜಯಕುಮಾರ್, ಡಾ.ಸಿ.ಎಸ್.ರಘು, ಬಿ.ಕೆ.ಪ್ರಸನ್ನ, ಜೆ.ಹೆಚ್.ಆನಿಲ್ ಕುಮಾರ್, ಒಂಟಿ ಚಿರತೆ ಮಹದೇವ್,ಚಂದ್ರಶೇಖರ್, ರಾಮರಾವ್, ಹರೀಶ್, ವಿಜಯಕುಮಾರ್, ಶಿವಾನಂದ್, ವೆಂಕಟೇಶ್ ಪೈ, ಬಿ.ಕೆ.ಸುಂದರೇಶ್, ಮಹೇಶ್ ,
ಜೆಮ್ಸ್, ರಾಕೇಶ್, ಶ್ರೀನಿವಾಸ್, ಕವಿತಾ, ವೇದ, ಲಿಂಗರಾಜು, ಸಂತೋಷ್ ಕುಮಾರ್, ಮಸೂದ್ ,ಅದಿ, ಬೊಮ್ಮೆಗೌಡರವರು ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ತುಷಾರ್ ಗಿರಿನಾಥ್ ರವರು ಮಾತನಾಡಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಬೆಳಸಲು ಪ್ರತಿ ವರ್ಷ 1ಕೋಟಿ ರೂಪಾಯಿ ಜಾಹಿರಾತು ನೀಡಲಾಗುತ್ತಿದೆ.
ಈ ಬಾರಿ ಪತ್ರಕರ್ತರ ಸಂಘವು ಸಲ್ಲಿಸಿದ ಮನವಿ ಮೇರೆಗೆ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಜಾಹಿರಾತು ನೀಡಲು 2ಕೋಟಿ ಅನುದಾನ ನೀಡಲಾಗುವುದು ಎಂದು ಹೇಳಿದರು.
ಕೆ.ಸತ್ಯನಾರಾಯಣ್ ರವರು ಮಾತನಾಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರ ಜೊತೆಯಲ್ಲಿ ಇಂದು ಮುಖ್ಯ ಆಯುಕ್ತರನ್ನು ಭೇಟಿ ಮಾಡಿ. 8ಜಾಹಿರಾತು ತಲಾ 10ಸಾವಿರರೂಪಾಯಿಯಂತೆ , ಮೂರುವರೆ ಕೋಟಿ ನೀಡಬೇಕು ಮನವಿ ಸಲ್ಲಿಸಲಾಗಿದೆ.
ಪತ್ರಕರ್ತರ ಸಮಸ್ಯೆಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘವು ಸತತ ಶ್ರಮಿಸುತ್ತಿದೆ. ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಉಳಿಸಿ,ಬೆಳಸಲು ಸರ್ಕಾರ ಮತ್ತು ಬಿಬಿಎಂಪಿ ಸಂಸ್ಥೆಗಳು ಜಾಹಿರಾತು ನೀಡಿದಾಗ ಪತ್ರಿಕೆಗಳು ಉಳಿಯಲು ಸಾಧ್ಯ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


