2 ಲಕ್ಷ ಮೌಲ್ಯದ ನೋಟುಗಳನ್ನು ಇಲಿಗಳು ತಿಂದು ಹಾಕಿವೆ. ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಪರಿಗಿಯ ಶಿವಲೀಲಾ ಎಂಬ ಮಹಿಳೆ ತಾನು ಕಷ್ಟಪಟ್ಟು ದುಡಿದ 2 ಲಕ್ಷ ರೂ. ಮೌಲ್ಯದ ನೋಟುಗಳನ್ನು ಪಡಿತರ ಅಕ್ಕಿಯ ಚೀಲದಲ್ಲಿ 8 ತಿಂಗಳ ಹಿಂದೆ ಬಚ್ಚಿಟ್ಟಿದ್ದರು. ಈ ಕ್ರಮದಲ್ಲಿ ಇಲಿಗಳು ಅಕ್ಕಿಯ ಜೊತೆಗೆ ನೋಟುಗಳನ್ನೂ ಕೂಡ ತಿಂದು ಹಾಕಿವೆ.
ಇದರಿಂದ ಅರೆಬರೆ ತಿಂದ ನೋಟುಗಳೊಂದಿಗೆ ಬ್ಯಾಂಕ್ ಗಳಿಗೆ ಹೋದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಮಹಿಳೆ ಗೋಳಾಡಿದ್ದಾರೆ. ಆಕೆಯ ಪತಿ ನರಸಿಲ್ಲು ಕೊರೋನಾ ಸಮಯದಲ್ಲಿ ನಿಧನರಾಗಿದ್ದಾರೆ.


