ತುರುವೇಕೆರೆ: ಎರಡನೇ ತರಗತಿಯ ವಿದ್ಯಾರ್ಥಿಯೋರ್ವನಿಗೆ ಶಿಕ್ಷಕ ಕೋಲಿನಿಂದ ಬಾಸುಂಡೆ ಬರುವಂತೆ ಹಲ್ಲೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿ ಕಲ್ಕೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆದಿದೆ.
ಈ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಜೆ.ರಂಗಸ್ವಾಮಿ ತರಗತಿಯ ಸಮಯದಲ್ಲಿ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಮ್ರಾನ್ ಗೆ ಕೋಲಿನಿಂದ ಬಾಸುಂಡೆ ಬರುವ ರೀತಿಯಲ್ಲಿ ಬೆನ್ನು ಮತ್ತು ಬುಜದ ಮೇಲೆ ಹೊಡೆದಿದ್ದಾನೆ.
ಶಿಕ್ಷಕ ಅಮಾನವೀಯವಾಗಿ ಥಳಿಸಿರುವ ವಿಚಾರವನ್ನು ಬಾಲಕ ಪೋಷಕರ ಗಮನಕ್ಕೆ ತಂದಿದ್ದು, ಈ ಬಗ್ಗೆ ಪೋಷಕರು ಊರಿನ ಸಾರ್ವಜನಿಕರೊಂದಿಗೆ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಸಭೆ ಕರೆದು ಶಿಕ್ಷಕ ರಂಗಸ್ವಾಮಿಯನ್ನು ತರಾಟೆ ತೆಗೆದುಕೊಂಡರು.
ಶಾಲಾ ಆವರಣ ಮುಂದೆ ಸುಮಾರು ನೂರಾರು ಸಾರ್ವಜನಿಕರು, ಜಮಾಮಣೆಗೊಂಡು ಘಟನೆಯನ್ನು ಖಂಡಿಸಿದ್ದು, ಇದರ ಬೆನ್ನಲ್ಲೇ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಮತ್ತು ಸಿ ಆರ್ ಪಿ ಅವರ ಗಮನಕ್ಕೆ ತಂದು ಇದರ ಈ ಬಗ್ಗೆ ಪೂರ್ಣ ಪ್ರಮಾಣದ ಪರಿಶೀಲನೆ ನಡೆಸಿ ತುಮಕೂರು ಸಾರ್ವಜನಿಕ ಉಪನಿರ್ದೇಶಕರ ಕಚೇರಿಗೆ ವರದಿಯನ್ನು ನೀಡಿದ್ದು. ಈ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಆಧರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ನಂಜಯ್ಯ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ವರದಿ: ಸುರೇಶ್ ಬಾಬು ಎಂ, ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy