nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹೊತ್ತಿ ಉರಿದ ಪಾವಗಡ ತಾಲೂಕಿನ ಪೊನ್ನಸಮುದ್ರ ಗ್ರಾ.ಪಂ. ಕಚೇರಿ

    May 28, 2023

    ಟಿ.ಬಿ.ಜಯಚಂದ್ರಗೆ ಸಚಿವ ಸ್ಥಾನ ನೀಡಲು ಮೊಮ್ಮಗಳಿಂದ ರಾಹುಲ್ ಗಾಂಧಿಗೆ ಪತ್ರ

    May 28, 2023

    ಸಚಿವರಾದ ಬಳಿಕ ಮೊದಲ ಬಾರಿಗೆ ತುಮಕೂರಿಗೆ ಆಗಮಿಸಿದ ಕೆ.ಎನ್.ರಾಜಣ್ಣ: ಗೆದ್ದವರು ಸೋತಂತೆ, ಸೋತವರು ಸತ್ತಂತೆ ಎಂದ ಸಚಿವರು!

    May 28, 2023
    Facebook Twitter Instagram
    ಟ್ರೆಂಡಿಂಗ್
    • ಹೊತ್ತಿ ಉರಿದ ಪಾವಗಡ ತಾಲೂಕಿನ ಪೊನ್ನಸಮುದ್ರ ಗ್ರಾ.ಪಂ. ಕಚೇರಿ
    • ಟಿ.ಬಿ.ಜಯಚಂದ್ರಗೆ ಸಚಿವ ಸ್ಥಾನ ನೀಡಲು ಮೊಮ್ಮಗಳಿಂದ ರಾಹುಲ್ ಗಾಂಧಿಗೆ ಪತ್ರ
    • ಸಚಿವರಾದ ಬಳಿಕ ಮೊದಲ ಬಾರಿಗೆ ತುಮಕೂರಿಗೆ ಆಗಮಿಸಿದ ಕೆ.ಎನ್.ರಾಜಣ್ಣ: ಗೆದ್ದವರು ಸೋತಂತೆ, ಸೋತವರು ಸತ್ತಂತೆ ಎಂದ ಸಚಿವರು!
    • ಅದ್ಧೂರಿಯಾಗಿ ನೆರವೇರಿದ ಹೊಸ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮ
    • ತಮಿಳುನಾಡಿನಲ್ಲಿ ಸಿ ಆರ್‌ ಪಿ ಎಫ್ ಜವಾನ್ ಸಾವು; ಇದು ಆತ್ಮಹತ್ಯೆ ಎಂದು ತೀರ್ಮಾನ
    • ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಸಿದ್ಧರಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
    • ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ‘ಡ್ರೆಸ್ ಕೋಡ್’ ಕಡ್ಡಾಯ’: ಮಹಾರಾಷ್ಟ್ರ ಅಸೋಸಿಯೇಷನ್ ​​ಆಫ್ ಟೆಂಪಲ್ಸ್
    • ಕುಸ್ತಿಪಟುಗಳ ಮಹಿಳಾ ಮಹಾ ಪಂಚಾಯತ್: ಬಿಗಿ ಭದ್ರತೆಯಲ್ಲಿ ದೆಹಲಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯಕ್ಕೆ ಸ್ವಂತ ನಿವೇಶನ ಮಂಜೂರು ಮಾಡಲು ಮನವಿ
    ತುಮಕೂರು November 6, 2021

    ತುಮಕೂರು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯಕ್ಕೆ ಸ್ವಂತ ನಿವೇಶನ ಮಂಜೂರು ಮಾಡಲು ಮನವಿ

    By adminNovember 6, 2021No Comments2 Mins Read
    tumakur

    ತುಮಕೂರು: ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯಕ್ಕೆ ಸ್ವಂತ ನಿವೇಶನ ಮಂಜೂರು ಮಾಡಿ  ಸೂಕ್ತ ಕಟ್ಟಡ  ನಿರ್ಮಿಸಿ ಕೊಡುವ ಬಗ್ಗೆ  ಉನ್ನತ ಶಿಕ್ಷಣ ಇಲಾಖೆಯ ಸಚಿವರು ಡಾ. ಸಿ.ಎನ್. ಅಶ್ವಥ್‍ನಾರಾಯಣ್, ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜ್, ಶಾಸಕ ಜ್ಯೋತಿಗಣೇಶ್ ಹಾಗೂ ಜಿಲ್ಲಾಧಿಕಾರಿಗಳಿಗೆ ಅವರಿಗೆ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ ಪತ್ರ ಬರೆದು ಮನವಿ ಮಾಡಿದೆ.

    ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತುಮಕೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 1993 ರಿಂದ ಪ್ರಾರಂಭಗೊಂಡಿರುವ “ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ”ವು ಕಳೆದ 27 ವರ್ಷಗಳಿಂದ ಇದೇ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿರುತ್ತದೆ. ಜೊತೆಗೆ ಗುಣಮಟ್ಟದ ಚಿತ್ರಕಲಾ ಶಿಕ್ಷಣವನ್ನು ನೀಡುತ್ತಿದೆ. ಮತ್ತು ಈ ಕಾಲೇಜಿನಲ್ಲಿ ಚಿತ್ರಕಲಾಭ್ಯಾಸ ಮಾಡಿದ ವಿದ್ಯಾರ್ಥಿಗಳು “ತುಮಕೂರು ವಿಶ್ವವಿದ್ಯಾನಿಲಯದ ಬಿ.ಎಫ್.ಎ. (ಬ್ಯಾಚುಲರ್ ಆಫ್ ಫೈನ್ ಆರ್ಟ್) ಪದವಿ ಪರೀಕ್ಷೆಯಲ್ಲಿ ಪ್ರಥಮ ಮತ್ತು ತೃತೀಯ ರ್ಯಾಂಕ್ ನೊಂದಿಗೆ ಗೋಲ್ಡ್‍ ಮೆಡಲ್ ಪಡೆದುಕೊಂಡಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ”.

    ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಖಾಸಗಿ ಕಂಪನಿಗಳ ಡಿಸೈನರ್‍ಗಳಾಗಿ ಉದ್ಯೋಗ ಮಾಡುತ್ತಾ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅತ್ಯುತ್ತಮ ಕಲಾವಿದರಾಗಿ ನಮ್ಮ ನಾಡಿಗೆ ಕಲಾಸೇವೆ ಸಲ್ಲಿಸುತ್ತಿದ್ದಾರೆ.

    ತುಮಕೂರಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಕಲಿತ ಚಿತ್ರಕಲಾವಿದರಿಗೆ “ರಾಜ್ಯ ಮತ್ತು ರಾಷ್ಟ್ರೀಯ ಪುರಸ್ಕøತ ಪ್ರಶಸ್ತಿಗಳು” ಲಭಿಸಿರುವುದು ತುಮಕೂರು ನಗರಕ್ಕೆ ಹೆಮ್ಮೆಯ ವಿಷಯ. ಈ ಮೇಲ್ಕಂಡ ಎಲ್ಲಾ ಅಂಶಗಳಿಂದ ಈ ಸರ್ಕಾರಿ ಚಿತ್ರಕಲಾ ಕಾಲೇಜು ಮಹತ್ವ ಪಡೆದಿದೆ.

    ಕರ್ನಾಟಕ ರಾಜ್ಯದಲ್ಲಿ 105 ಚಿತ್ರಕಲಾ ಮಹಾವಿದ್ಯಾಲಯಗಳಿವೆ. ಇವುಗಳಲ್ಲಿ ಧಾರವಾಡ ಮತ್ತು ತುಮಕೂರು ನಗರಗಳಲ್ಲಿ ಮಾತ್ರ ಕೇವಲ 2 ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯಗಳಿವೆ. ಆದರೆ ತುಮಕೂರಿನ ಸರ್ಕಾರಿ ಚಿತ್ರಕಲಾ  ಮಹಾವಿದ್ಯಾಲಯಕ್ಕೆ 27 ವರ್ಷಗಳಿಂದ ಸ್ವಂತ ನಿವೇಶನ ಮತ್ತು ಸ್ವಂತ ಕಟ್ಟಡಗಳು ಇರುವುದಿಲ್ಲ ಎಂಬ ಸಂಗತಿ ವಿಷಾದನೀಯ ಸಂಗತಿಯಾಗಿದೆ.

    ಸದ್ಯ ತುಮಕೂರು ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಡಿಸಿರುವುದರಿಂದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇದೇ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಮಕೂರಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ನಡೆಯುತ್ತಿರುವ ಕಟ್ಟಡವನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಿಗೆ ಪತ್ರದ ಮೂಲಕ ಕಟ್ಟಡ ತೆರವುಗೊಳಿಸಲು ತಿಳಿಸಿರುತ್ತಾರೆ ಮತ್ತು ಮೇಲಿಂದ ಮೇಲೆ ಕಟ್ಟಡ ತೆರವುಗೊಳಿಸುವಂತೆ ಒತ್ತಡ ತರುತ್ತಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ.

    ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ಹಿರಿಯ ವಿದ್ಯಾರ್ಥಿಗಳಾದ ನಮಗೆ ನಮ್ಮ ಬದುಕು ಕಟ್ಟಿಕೊಳ್ಳಲು ಅನ್ನದ ಮಾರ್ಗ ತೋರಿಸಿದ ಈ ಸಂಸ್ಥೆಯನ್ನು ಕಟ್ಟಡದಿಂದ ಹೊರಹಾಕುವ ಸಂಗತಿ ನಮಗೆಲ್ಲರಿಗೆ ಮತ್ತು ಚಿತ್ರಕಲಾಕ್ಷೇತ್ರದ ಎಲ್ಲರಲ್ಲೂ ಅತೀವ ನೋವುಂಟು ಮಾಡುವ ಸಂಗತಿಯಾಗಿದೆ.

    ಕಳೆದ 27 ವರ್ಷಗಳಿಂದ ನಡೆದುಕೊಂಡು ಬಂದಿರುವ ಸರ್ಕಾರಿ ಚಿತ್ರಕಲಾ ಕಾಲೇಜಿಗೆ ಜಿಲ್ಲಾಡಳಿತ ಪರವಾಗಿ ಇದೇ ಆವರಣದಲ್ಲಿ ಸ್ವಂತ ನಿವೇಶನವನ್ನು ಮಂಜೂರು ಮಾಡಿಕೊಡಲು ತಮ್ಮಲ್ಲಿ ಸಮಗ್ರ ಚಿತ್ರಕಲಾವಿದರ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಹಾಗೂ ಸ್ಮಾರ್ಟ್ ಸಿಟಿಯ ಯೋಜನೆಯಡಿಯಲ್ಲಿ ಇತರೆ ಶಿಕ್ಷಣ ಸಂಸ್ಥೆಗಳಂತೆ ಚಿತ್ರಕಲಾ ಶಿಕ್ಷಣಕ್ಕೂ ಪ್ರಾಧ್ಯಾನ್ಯತೆ ನೀಡಿ ಈ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯಕ್ಕೆ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಸೂಕ್ತ ಕಟ್ಟಡವನ್ನು ಸಹಿತ ನಿರ್ಮಿಸಿಕೊಡಲು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ ಮನವಿ ಮಾಡಿಕೊಂಡಿದೆ.

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    admin
    • Website

    Related Posts

    ಟಿ.ಬಿ.ಜಯಚಂದ್ರಗೆ ಸಚಿವ ಸ್ಥಾನ ನೀಡಲು ಮೊಮ್ಮಗಳಿಂದ ರಾಹುಲ್ ಗಾಂಧಿಗೆ ಪತ್ರ

    May 28, 2023

    ಸಚಿವರಾದ ಬಳಿಕ ಮೊದಲ ಬಾರಿಗೆ ತುಮಕೂರಿಗೆ ಆಗಮಿಸಿದ ಕೆ.ಎನ್.ರಾಜಣ್ಣ: ಗೆದ್ದವರು ಸೋತಂತೆ, ಸೋತವರು ಸತ್ತಂತೆ ಎಂದ ಸಚಿವರು!

    May 28, 2023

    ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ದೌರ್ಜನ್ಯ: ಶಿಕ್ಷಕನಿಗೆ 5 ವರ್ಷ ಜೈಲು 1 ಲಕ್ಷ ರೂ. ದಂಡ

    May 27, 2023
    Our Picks

    ಅದ್ಧೂರಿಯಾಗಿ ನೆರವೇರಿದ ಹೊಸ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮ

    May 28, 2023

    ತಮಿಳುನಾಡಿನಲ್ಲಿ ಸಿ ಆರ್‌ ಪಿ ಎಫ್ ಜವಾನ್ ಸಾವು; ಇದು ಆತ್ಮಹತ್ಯೆ ಎಂದು ತೀರ್ಮಾನ

    May 28, 2023

    ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಸಿದ್ಧರಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

    May 28, 2023

    ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ‘ಡ್ರೆಸ್ ಕೋಡ್’ ಕಡ್ಡಾಯ’: ಮಹಾರಾಷ್ಟ್ರ ಅಸೋಸಿಯೇಷನ್ ​​ಆಫ್ ಟೆಂಪಲ್ಸ್

    May 28, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಹೊತ್ತಿ ಉರಿದ ಪಾವಗಡ ತಾಲೂಕಿನ ಪೊನ್ನಸಮುದ್ರ ಗ್ರಾ.ಪಂ. ಕಚೇರಿ

    May 28, 2023

    ತುಮಕೂರು: ಶಾರ್ಟ್ ಸರ್ಕ್ಯೂಟ್ ‌ನಿಂದ ಗ್ರಾಮ ಪಂಚಾಯತ್ ನ ಕಚೇರಿ ಹೊತ್ತಿ ಉರಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ…

    ಟಿ.ಬಿ.ಜಯಚಂದ್ರಗೆ ಸಚಿವ ಸ್ಥಾನ ನೀಡಲು ಮೊಮ್ಮಗಳಿಂದ ರಾಹುಲ್ ಗಾಂಧಿಗೆ ಪತ್ರ

    May 28, 2023

    ಸಚಿವರಾದ ಬಳಿಕ ಮೊದಲ ಬಾರಿಗೆ ತುಮಕೂರಿಗೆ ಆಗಮಿಸಿದ ಕೆ.ಎನ್.ರಾಜಣ್ಣ: ಗೆದ್ದವರು ಸೋತಂತೆ, ಸೋತವರು ಸತ್ತಂತೆ ಎಂದ ಸಚಿವರು!

    May 28, 2023

    ಅದ್ಧೂರಿಯಾಗಿ ನೆರವೇರಿದ ಹೊಸ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮ

    May 28, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.