nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸರ್ಕಾರಿ ಶಾಲೆಯ ಅಕ್ಷರ ದಾಸೋಹದಿಂದ ಅಕ್ಕಿ ಕದ್ದ ಅಡುಗೆ ಸಿಬ್ಬಂದಿ!

    September 22, 2023

    ದೇಶದ ಜಿಡಿಪಿಗೆ ಕರ್ನಾಟಕ ರಾಜ್ಯದ ಕೊಡುಗೆ ಗಣನೀಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

    September 22, 2023

    ಪ್ರತಿಭಟನೆ ಮಾಡಬಹುದು ಆದರೆ, ಸಾರ್ವಜನಿಕ ಆಸ್ತಿ ನಾಶ ಮಾಡಬಾರದು: ಮಂಡ್ಯ ಬಂದ್ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ

    September 22, 2023
    Facebook Twitter Instagram
    ಟ್ರೆಂಡಿಂಗ್
    • ಸರ್ಕಾರಿ ಶಾಲೆಯ ಅಕ್ಷರ ದಾಸೋಹದಿಂದ ಅಕ್ಕಿ ಕದ್ದ ಅಡುಗೆ ಸಿಬ್ಬಂದಿ!
    • ದೇಶದ ಜಿಡಿಪಿಗೆ ಕರ್ನಾಟಕ ರಾಜ್ಯದ ಕೊಡುಗೆ ಗಣನೀಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
    • ಪ್ರತಿಭಟನೆ ಮಾಡಬಹುದು ಆದರೆ, ಸಾರ್ವಜನಿಕ ಆಸ್ತಿ ನಾಶ ಮಾಡಬಾರದು: ಮಂಡ್ಯ ಬಂದ್ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ
    • ರಾಜ್ಯ ಸರ್ಕಾರ ರೈತರ ಹಿತ ಕಾಯಲು ಸದಾ ಬದ್ದವಾಗಿದೆ: ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ
    • ಕಾವೇರಿ ಸಂಕಷ್ಟ: ರಾಜ್ಯ ಸರ್ಕಾರ ಉಡಾಫೆಯಾಗಿ ನಡೆದುಕೊಳ್ಳುತ್ತಿದೆ: ಬಸವರಾಜ ಬೊಮ್ಮಾಯಿ
    • ಪಶ್ಚಿಮ ಬಂಗಾಳದ ಅಲಿಪುರದಿಂದ ಜಿರಾಫೆ ತರಲು ಯತ್ನ: ಈಶ್ವರ ಖಂಡ್ರೆ
    • ಡಿ-ಸ್ವಾಟ್ ತರಬೇತಿಯಲ್ಲಿ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿದ ತುಮಕೂರಿನ ತಂಡ
    • ಸ್ಯಾನ್ ಫ್ರಾನ್ಸಿಸ್ಕೋ ಇಂಡಿಯನ್ ಕಾನ್ಸುಲೇಟ್ ದಾಳಿ: ಆರೋಪಿಯ ಚಿತ್ರವನ್ನು ಬಿಡುಗಡೆ ಮಾಡಿದ NIA
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೈಸೂರು: ಗಂಟೆಗಟ್ಟಲೇ ಕಾದರೂ ಬಸ್ಸೇ ಇಲ್ಲ ಸಾರಿಗೆ ಇಲ್ಲದೆ ಸೊರಗುತ್ತಿರುವ ‘ಸರಗೂರು’ 
    ರಾಜ್ಯ ಸುದ್ದಿ November 12, 2021

    ಮೈಸೂರು: ಗಂಟೆಗಟ್ಟಲೇ ಕಾದರೂ ಬಸ್ಸೇ ಇಲ್ಲ ಸಾರಿಗೆ ಇಲ್ಲದೆ ಸೊರಗುತ್ತಿರುವ ‘ಸರಗೂರು’ 

    By adminNovember 12, 2021No Comments2 Mins Read
    ksrtc

    ವರದಿ: ಚಂದ್ರಹಾದನೂರು

    ಮೈಸೂರು: ಇವತ್ತೇನಾದ್ರೂ ಕೋರೋನಾ ಲಾಕ್ ಡೌನ್ ನಾ ಅಥವಾ ಕರ್ನಾಟಕ ಬಂದ್ ಗಿಂದ್ ಏನಾದ್ರೂ ಆಗಿದ್ದೀಯಾ ಬಸ್ ಸ್ಟ್ಯಾಂಡ್ ನಲ್ಲಿ ಒಂದು ಕೆಂಪು ಬಸ್ ಕೂಡ ಕಾಣ್ತಿಲ್ವಲ್ಲ ಅಂತಿದ್ದೀರಾ. ಆಗಿದ್ರೇ ನಿಮ್ಮ ಊಹೆ ತಪ್ಪು ಸ್ವಾಮಿ. ಈ ತಾಲೂಕಿನಲ್ಲಿ ಬೃಹತ್ ಬಸ್ ನಿಲ್ದಾಣ ಇದೆ ಆದ್ರೂ ಕೂಡ ಪ್ರತಿದಿನ ಲಾಕ್ ಡೌನ್, ಬಂದ್ ಆಗಿರುವ ವಾತಾವರಣವೇ ಕಣ್ಣಿಗೆ ಕಾಣೋದು. ನಿಲ್ದಾಣಕ್ಕೆ ಬಂದೌರೆಲ್ಲ ಗಂಟೆಗಟ್ಟಲೇ ಕಾದರೂ ಬಸ್ಬರಲೇ ಇಲ್ಲ.ಈಗಲಾದ್ರೂ ಬಸ್ ಬರುತ್ತಾ ಸ್ವಾಮಿ ಎಂದು ಕೇಳೋದೇ ಆಯ್ತು.

    ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾರಿಗೆ ಸೌಲಭ್ಯ ಇಲ್ಲ ಅಂತ ಸುದ್ದಿ ಆಗೋದುಂಟು. ಅದ್ರೇ ಇದು ಒಂದು ತಾಲೂಕು ತಾಲೂಕಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲ ಅಂದ್ರೇ ನೀವು ನಂಬುವಿರ. ಆದರೂ ನೀವು ನಂಬಲೇ ಬೇಕು. ಹೌದು ಮೈಸೂರು ಜಿಲ್ಲೆ ಸರಗೂರು ತಾಲೂಕಿನಲ್ಲಿ ಪ್ರತಿದಿನ ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಜನರು ಹೈರಾಣಾಗಿದ್ದಾರೆ.ಅದಕ್ಕೆ ಪ್ರತ್ಯಕ್ಷ ಉದಾಹರಣೆ ಅಂದ್ರೇ ಇದು ನೋಡಿ.

    ಬಸ್ ಸಿಗದೇ ಅನಾರೋಗ್ಯಪೀಡಿತ ಅಪ್ಪನನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲೇ ಇಲ್ಲ. ಹರಸಾಹಸ ಪಟ್ಟು ದುಪ್ಪಟ್ಟು ಹಣ ಕೊಟ್ಟು ಕರೆದುಕೊಂಡು ಹೋದರೂ ಅಪ್ಪನಿಗೆ ನಿಗದಿತ ಸಮಯಕ್ಕಿಂತ ತಡವಾಗಿ ಚಿಕಿತ್ಸೆ ಸಿಕ್ಕಿತು.

    ಅಲ್ಲಿನ ವೈದ್ಯರು ಒಳ್ಳೇಯವರಾಗಿದ್ದರಿಂದ ಆ ದಿನ ತಡವಾಗಿಯಾದರು ಚಿಕಿತ್ಸೆ ದೊರೆಯಿತು. ತಂದೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಲ್ಲಿ ಅನುಭವಿಸಿದ ಕಷ್ಟದ ಕ್ಷಣವನ್ನ ನಾಗರಾಜು. ಎಸ್. ಆರ್ ಅವರು ಹಂಚಿಕೊಂಡಿದ್ದಿಷ್ಟು.

    ಆರೋಗ್ಯ ಸರಿ ಇಲ್ಲದ ಕಾರಣ ನಮ್ಮ ತಂದೆ ರಾಮನಾಯಕ ಅವರನ್ನು ಮೈಸೂರಿನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಬೇಕಿತ್ತು. ಆಸ್ಪತ್ರೆಯಲ್ಲಿ ವೈದ್ಯರ ಭೇಟಿಗಾಗಿ ಸಮಯ ನಿಗದಿಯಾಗಿತ್ತು. ಆದ್ದರಿಂದ ತಂದೆಯವರನ್ನು ಕರೆದುಕೊಂಡು ಸರಗೂರು ಬಸ್ ನಿಲ್ದಾಣಕ್ಕೆ ಆಗಮಿಸಿದ್ದೆ. ಒಂದು ಗಂಟೆ ಆಯ್ತು, ಎರಡು ಗಂಟೆ ಆಯ್ತು, ಮೂರು ಗಂಟೆ ಕಾಲ ಕಾದರೂ ಯಾವುದೇ ಬಸ್ ಗಳು ಬಸ್ ನಿಲ್ದಾಣಕ್ಕೆ ಬರಲಿಲ್ಲ.

    ಕೊನೆಗೆ ಖಾಸಗಿ ವಾಹನದ ಮೂಲಕ ಹ್ಯಾಂಡ್ಪೋಸ್ಟ್ ತಲುಪಿದೆ. ಅಲ್ಲೂ ಸಹ ಮೈಸೂರಿಗೆ ಹೋಗುವ ಬಸ್ ಗಾಗಿ ಕಾದು ಕಾದು ಸುಸ್ತಾದೆ. ಅಂತಿಮವಾಗಿ ದುಬಾರಿ ಹಣ ನೀಡಿ ಮತ್ತೊಂದು ಖಾಸಗಿ ವಾಹನದ ಮೂಲಕ ಮೈಸೂರಿನ ಆಸ್ಪತ್ರೆಗೆ ತೆರಳಿದೆ. ಆದರೆ ಅಷ್ಟರಲ್ಲಾಗಲೇ ಆಸ್ಪತ್ರೆಯಲ್ಲಿ ನಮಗೆ ನೀಡಿದ್ದ ನೊಂದಣಿ ಸಮಯ ಮುಗಿದಿತ್ತು. ಒಳ್ಳೇಯ ವೈದ್ಯರು ಇದ್ದ ಕಾರಣ ತಡವಾದರೂ ತಂದೆಗೆ ಚಿಕಿತ್ಸೆ ನೀಡಿದರು.

    ಹಲವು ತಿಂಗಳಿನಿಂದಲೂ ಸರಗೂರು ಹಾಗೂ ಹ್ಯಾಂಡ್ಪೋಸ್ಟ್ ನಲ್ಲಿ ಬಸ್ ಗಳು ಸಮಯಕ್ಕೆ ಬಾರದಿದ್ದರಿಂದ ಸಾಕಷ್ಟು ಜನ ಅದರಲ್ಲೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಸರಗೂರಿನಿಂದ ಮೈಸೂರಿಗೆ ಅಲ್ಲದೇ ಮೈಸೂರು ಕಡೆಯಿಂದ ಸರಗೂರಿಗೂ ಬಸ್ ವ್ಯವಸ್ಥೆ ಇಲ್ಲ. ಸಂಬಂಧಪಟ್ಟವರು ಈ ಬಗ್ಗೆ ಯಾವುದೇ ಗಮನ ಹರಿಸದಿರುವುದರಿಂದ ಜನಸಾಮಾನ್ಯರು, ಪ್ರಯಾಣಿಕರು ಅತೀವ ತೊಂದರೆ ಅನುಭವಿಸುವಂತಾಗಿದೆ.

    ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬೇಕಿದೆ. ಕೂಡಲೇ ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸಬೇಕಿದೆ ಎಂದು ಕಾನೂನು ವಿದ್ಯಾರ್ಥಿ ಮನೋಜ್ ಒತ್ತಾಯಿಸಿದ್ದಾರೆ

    ಒಟ್ಟಾರೆ ಹೇಳೋದಾಗರೇ ಸರಗೂರಿನ ಜನ ಸರ್ಕಾರಕ್ಕೆ ಸಾರಿಗೆ ಮೂಲಕ ಹಣ ಕೊಡ್ತೇವೆ ಅಂದರೂ ಸಹ ಸರಿಯಾದ ಸಮಯಕ್ಕೆ ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿಲ್ಲ. ಪ್ರತಿದಿನ ಸರಗೂರಿನಲ್ಲಿ ಸಾರಿಗೆ ವ್ಯವಸ್ಥೆಯದ್ದೇ ಒಂದು ಗೋಳು ಆಗಿಬಿಟ್ಟಿದೆ.ಉಳ್ಳವರು ದುಪ್ಪಟ್ಟು ಹಣಕೊಟ್ಟು ಖಾಸಗೀ ವಾಹನದಲ್ಲಿ ತೆರಳುತ್ತಾರೆ. ಇಲ್ಲದವರು ಅಷ್ಟೊಂದು ಹಣ ಕೊಡಕಾಗುತ್ತಾ ನೀವೇ ಹೇಳಿ ಸ್ವಾಮಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

    admin
    • Website

    Related Posts

    ದೇಶದ ಜಿಡಿಪಿಗೆ ಕರ್ನಾಟಕ ರಾಜ್ಯದ ಕೊಡುಗೆ ಗಣನೀಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

    September 22, 2023

    ಪ್ರತಿಭಟನೆ ಮಾಡಬಹುದು ಆದರೆ, ಸಾರ್ವಜನಿಕ ಆಸ್ತಿ ನಾಶ ಮಾಡಬಾರದು: ಮಂಡ್ಯ ಬಂದ್ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ

    September 22, 2023

    ರಾಜ್ಯ ಸರ್ಕಾರ ರೈತರ ಹಿತ ಕಾಯಲು ಸದಾ ಬದ್ದವಾಗಿದೆ: ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ

    September 22, 2023
    Our Picks

    ಸ್ಯಾನ್ ಫ್ರಾನ್ಸಿಸ್ಕೋ ಇಂಡಿಯನ್ ಕಾನ್ಸುಲೇಟ್ ದಾಳಿ: ಆರೋಪಿಯ ಚಿತ್ರವನ್ನು ಬಿಡುಗಡೆ ಮಾಡಿದ NIA

    September 22, 2023

    ನಿಷೇಧಿತ ಸಂಘಟನೆಗಳಿಗೆ ಸೇರಿದವರಿಗೆ ವೇದಿಕೆ ನೀಡಬಾರದು: ಕೇಂದ್ರ ಸರ್ಕಾರದ ಹೊಸ ನಿರ್ದೇಶನ

    September 22, 2023

    ಶಿವನ ಥೀಮ್ ಆಧಾರಿತ ಕ್ರಿಕೆಟ್ ಸ್ಟೇಡಿಯಂ: ಸೆಪ್ಟೆಂಬರ್ 23 ರಂದು ಶಂಕುಸ್ಥಾಪನೆ

    September 22, 2023

    17 ಲಕ್ಷ ಹಿಂಬಾಲಕರನ್ನು ಹೊಂದಿರುವ ಮೋದಿ ವಾಟ್ಸಾಪ್ ಚಾನೆಲ್

    September 22, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಸರ್ಕಾರಿ ಶಾಲೆಯ ಅಕ್ಷರ ದಾಸೋಹದಿಂದ ಅಕ್ಕಿ ಕದ್ದ ಅಡುಗೆ ಸಿಬ್ಬಂದಿ!

    September 22, 2023

    ಕೊರಟಗೆರೆ: ತಾಲ್ಲೂಕಿನ ವಡ್ಡಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಅಡುಗೆ ಸಿಬ್ಬಂದಿಗಳೆ ಮಕ್ಕಳಿಗೆ ನೀಡುವ ಊಟದ ಅಕ್ಕಿ…

    ದೇಶದ ಜಿಡಿಪಿಗೆ ಕರ್ನಾಟಕ ರಾಜ್ಯದ ಕೊಡುಗೆ ಗಣನೀಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

    September 22, 2023

    ಪ್ರತಿಭಟನೆ ಮಾಡಬಹುದು ಆದರೆ, ಸಾರ್ವಜನಿಕ ಆಸ್ತಿ ನಾಶ ಮಾಡಬಾರದು: ಮಂಡ್ಯ ಬಂದ್ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ

    September 22, 2023

    ರಾಜ್ಯ ಸರ್ಕಾರ ರೈತರ ಹಿತ ಕಾಯಲು ಸದಾ ಬದ್ದವಾಗಿದೆ: ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ

    September 22, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.