nammatumakuru

    Subscribe to Updates

    Get the latest creative news from FooBar about art, design and business.

    What's Hot

    ಇಂದು 50,000 ವರ್ಷಗಳಿಗೊಮ್ಮೆ ನಡೆಯುವ ಆಕಾಶ ವಿದ್ಯಮಾನ

    February 1, 2023

    ಬೆಂಗಳೂರಿನಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ

    February 1, 2023

    ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೆ ಆರ್ ಎಸ್ ಪಕ್ಷದಿಂದ ಜನ ಜಾಗೃತಿ

    February 1, 2023
    Facebook Twitter Instagram
    ಟ್ರೆಂಡಿಂಗ್
    • ಇಂದು 50,000 ವರ್ಷಗಳಿಗೊಮ್ಮೆ ನಡೆಯುವ ಆಕಾಶ ವಿದ್ಯಮಾನ
    • ಬೆಂಗಳೂರಿನಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ
    • ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೆ ಆರ್ ಎಸ್ ಪಕ್ಷದಿಂದ ಜನ ಜಾಗೃತಿ
    • ಕೇಂದ್ರ ಬಜೆಟ್- 2023: ಸ್ವಚ್ಛ ನಗರ ರೂಪಿಸಲು ವಿಶೇಷ ಯೋಜನೆ
    • ಸುಮಲತಾ ಅವರು ಬಿಜೆಪಿ ಸೇರಿದರೇ ಹೆಚ್ಚು ಲಾಭ :ಸಚಿವ ಸುಧಾಕರ್
    • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು 2023-24ನೇ ಸಾಲಿನ ಬಜೆಟ್ ಮಂಡನೆ
    • ರಾಷ್ಟ್ರಗೀತೆಯನ್ನು ಹೇಳುವಾಗ ಕುರ್ಚಿ ಮೇಲೆ ಕುಳಿತುಕೊಂಡು ಫೋನ್‌ ನಲ್ಲಿ ಮಾತನಾಡಿದ್ದಕ್ಕೆ ಪೊಲೀಸ್ ಅಧಿಕಾರಿ ಅಮಾನತು
    • ವರದಕ್ಷಿಣೆ ಕಿರುಕುಳ ತಾಳದೇ ಮಹಿಳೆ ರಾಸಾಯನಿಕ ಕುಡಿದು ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಸ್ಯಾಹಾರ ಮತ್ತು ಮಾಂಸಾಹಾರ -( Veg – Non Veg ) | ವಿವೇಕಾನಂದ. ಹೆಚ್.ಕೆ.
    ಲೇಖನ December 3, 2021

    ಸಸ್ಯಾಹಾರ ಮತ್ತು ಮಾಂಸಾಹಾರ -( Veg – Non Veg ) | ವಿವೇಕಾನಂದ. ಹೆಚ್.ಕೆ.

    By adminDecember 3, 2021No Comments5 Mins Read
    vivekananda hk

    ತುಂಬಾ ಆಳವಾಗಿ ಯೋಚಿಸಿದಾಗ ಯಾರೂ ಸಂಪೂರ್ಣ ಸಸ್ಯಾಹಾರಿಗಳಾಗಿರಲು ಅಥವಾ ಸಂಪೂರ್ಣ ಮಾಂಸಾಹಾರಿಗಳಾಗಿರಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಅಷ್ಟೊಂದು ಆಳಕ್ಕೆ ಈ ಲೇಖನದಲ್ಲಿ ಹೋಗುತ್ತಿಲ್ಲ. ಕೇವಲ ದಿನನಿತ್ಯದ ಆಹಾರ ಕ್ರಮಗಳು ಮತ್ತು ಜನರ ಸಾಮಾನ್ಯ ಅಭಿಪ್ರಾಯ ಆಧರಿಸಿ ಸಸ್ಯಹಾರ ಮತ್ತು ಮಾಂಸಾಹಾರದ ಬಗ್ಗೆ ಒಂದು ಸಣ್ಣ ವಿಶ್ಲೇಷಣೆ.

    ಸಾಮಾನ್ಯವಾಗಿ ಸಸ್ಯಾಹಾರಿ ಗಳಿಗೆ ಮಾಂಸಾಹಾರಿಗಳ ಬಗ್ಗೆ ಒಂದು ಅಭಿಪ್ರಾಯವಿದೆ. ಮಾಂಸಾಹಾರಿಗಳಿಗೆ ಅತಿಹೆಚ್ಚು ವೈವಿಧ್ಯಮಯ ಅಡುಗೆಗಳಿವೆ, ಅವರು ಎಲ್ಲಿ ಹೋದರು, ಯಾವುದೇ ಪ್ರದೇಶಕ್ಕೆ ಹೋದರೂ ಹೇಗೋ ಊಟದ ಸಮಸ್ಯೆಯಾಗುವುದಿಲ್ಲ, ಸಸ್ಯಹಾರಿಗಳಿಗೆ ತುಂಬಾ ಕಷ್ಟ. ಏನೋ ಹಣ್ಣು ಹಂಪಲು ತಿಂದು ಸಮಾಧಾನ ಮಾಡಿಕೊಳ್ಳಬೇಕು ಎಂದು ಗೊಣಗುತ್ತಿರುತ್ತಾರೆ.

    ಇದು ನಿಜವೇ ????

    ಕೂಲಂಕಷವಾಗಿ ಪರಿಶೀಲಿಸಿ ನೋಡಿದಾಗ ವ್ಯಾಪಾರ ವ್ಯವಹಾರದ ಹೋಟೆಲುಗಳ ದೃಷ್ಟಿಯಿಂದ ಸ್ವಲ್ಪ ಮಾತ್ರ ನಿಜವೆನಿಸುತ್ತದೆ. ಆದರೆ ಸಂಪೂರ್ಣ ಸತ್ಯವಲ್ಲ. ಏಕೆಂದರೆ……

    ಭಾರತದ ಮಟ್ಟಿಗೆ, ಸಾಮಾನ್ಯವಾಗಿ ಕೇವಲ ಕುರಿ ( ಮೇಕೆ ) ಕೋಳಿ ಮತ್ತು ಮೀನು ಎಂಬ ಮೂರು  ಮಾತ್ರವೇ ಅತಿಹೆಚ್ಚು ಉಪಯೋಗಿಸಲ್ಪಡುವ ಮಾಂಸಾಹಾರ. ಮೊಟ್ಟೆ ಅರೆ ಮಾಂಸಾಹಾರ. ಇನ್ನು ಹಂದಿ, ನಾಯಿ, ಮೊಲ, ಉಡ, ಕಪ್ಪೆ, ದನ,ಒಂಟೆ, ಮಾಂಸವನ್ನು ಯಾರೋ ಕೆಲವರು ಅಲ್ಪ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.

    ಇದನ್ನು ಹೊರತುಪಡಿಸಿ ಉಳಿದ ಎಲ್ಲಾ ಆಹಾರ ಪದಾರ್ಥಗಳು ಸಸ್ಯಹಾರದ ವ್ಯಾಪ್ತಿಯಲ್ಲಿ ಬರುತ್ತದೆ. ಜೊತೆಗೆ ಯಾವುದೇ ಮಾಂಸಾಹಾರಿ ಮನುಷ್ಯ ಕೇವಲ ಕುರಿ ಕೋಳಿ ಮೀನುಗಳನ್ನು ಮಾತ್ರ ತಿನ್ನುವುದಿಲ್ಲ. ಅದನ್ನು ಮುದ್ದೆ, ಚಪಾತಿ, ರೊಟ್ಟಿ, ಬ್ರೆಡ್, ಅನ್ನ, ತರಕಾರಿಗಳು, ಹಣ್ಣುಗಳು, ಸಿರಿ ಧಾನ್ಯಗಳು, ಬೇಳೆ ಕಾಳುಗಳು, ಸೊಪ್ಪು ಮುಂತಾದ ಸಸ್ಯಹಾರದ ವಸ್ತುಗಳ ಮೇಲೆಯೇ ಅವಲಂಬಿಸಿ ಊಟ ಮಾಡುತ್ತಾನೆ. ಕೇವಲ ಆ ಮೂರು ಪ್ರಾಣಿಗಳು ಮಾತ್ರ ಹೆಚ್ಚುವರಿಯಾಗಿರುತ್ತದೆ.

    ಅದರಲ್ಲೂ ಇತ್ತೀಚಿಗೆ ನೀವು ಮಾಂಸಾಹಾರಿ ವಸ್ತುಗಳನ್ನು ಉಪಯೋಗಿಸಿ ಮಾಡುವ ಎಲ್ಲವನ್ನೂ ಸಸ್ಯಹಾರದಲ್ಲಿ ಅಷ್ಟೇ ಉತ್ತಮವಾಗಿ ಮತ್ತು ರುಚಿಕರವಾಗಿ ಮಾಡಲಾಗುತ್ತಿದೆ. ಮಾಂಸದ ಬದಲು ತರಕಾರಿ ಉಪಯೋಗಿಸುತ್ತಾರೆ ಅಷ್ಟೆ. ಮಸಾಲೆ ಉಪ್ಪು ಖಾರ ಮುಂತಾದ ಎಲ್ಲಾ ಪೂರಕ ವಸ್ತುಗಳು ಸೇಮ್ ಟು ಸೇಮ್.

    ಬಿರಿಯಾನಿ, ಕಬಾಬ್, ಮಂಚೂರಿ, ಕಟ್ ಲೆಟ್, ಸ್ಯಾಂಡ್ ವಿಚ್, ಫೀಜಾ  ಇತ್ಯಾದಿ ಎಲ್ಲವೂ ಎರಡೂ ವಿಧದಲ್ಲಿ ಸಿಗುತ್ತದೆ. ಇಲ್ಲಿ ಸಸ್ಯಹಾರ ಮತ್ತು ಮಾಂಸಾಹಾರದಲ್ಲಿ ಯಾವುದು ಉತ್ತಮ ಎಂಬ ಯಾವ ಅಭಿಪ್ರಾಯವನ್ನು ಸಹ ಹೇಳುತ್ತಿಲ್ಲ. ನಾನು ಆಹಾರ ತಜ್ಞನೂ ಅಲ್ಲ. ಆಹಾರ ಸ್ವಾತಂತ್ರ್ಯ ಅವರವರ ಆಯ್ಕೆ. ನಮ್ಮ ನಾಲಿಗೆಯ ರುಚಿ, ಮನೆತನದ ಸಂಪ್ರದಾಯ, ಆರೋಗ್ಯದ ಕಾಳಜಿ, ವೈದ್ಯರ ಸಲಹೆ, ದೇಶದ ಕಾನೂನಿನ ತಿಳಿವಳಿಕೆಯ ಆಧಾರದಲ್ಲಿ ಯಾವುದೇ ಆಹಾರ ಸೇವಿಸಬಹುದು.

    ಆದರೆ ಮಾಂಸಾಹಾರಿಗಳು ಮಾತ್ರ ಏನೋ ವಿಶೇಷ ಖಾದ್ಯಗಳನ್ನು ತಿನ್ನುತ್ತಾರೆ ಎಂದು ಸಸ್ಯಹಾರಿಗಳು ಹೊಟ್ಟೆ ಉರಿ ( ತಮಾಷೆಗಾಗಿ ) ಪಡುವುದು ಬೇಡ. ಸಸ್ಯಹಾರದ ಅವಲಂಬನೆ ಇಲ್ಲದೆ ಮಾಂಸಾಹಾರ ಇಲ್ಲವೇ ಇಲ್ಲ. ಊಟದ ಜೊತೆಗೆ ಉಪ್ಪಿನಕಾಯಿಯಂತೆ ಮಾತ್ರ ಹೆಚ್ಚುವರಿಯಾಗಿ ಮಾಂಸಾಹಾರ ಸೇವಸುತ್ತಾರೆ ಅಷ್ಟೇ……

    ಹಾಗೆಯೇ ಇನ್ನೊಂದು ಮುಖ್ಯ ವಿಷಯ……..

    ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ನೋವಿನ ವಿಷಯವೇ… ಅದು ಹಾವು, ಸೊಳ್ಳೆ, ತಿಗಣೆ, ನಾಯಿ, ಹಸು, ಹುಲಿ, ಜಿಂಕೆ, ಕೋಳಿ, ಮೀನು, ಹಂದಿ, ಮನುಷ್ಯ ಏನೇ ಆಗಿರಲಿ ಅದಕ್ಕೆ ನಾವು ಜೀವ ಕೊಡಲಿಕ್ಕೆ ಸಾಧ್ಯವಿಲ್ಲದಿರುವುದರಿಂದ ಅದನ್ನು ಹತ್ಯೆ ಮಾಡುವ ಯಾವ ಅಧಿಕಾರವೂ ಇಲ್ಲ. ಅದೇ ರೀತಿ ಸಸ್ಯಗಳಿಗೂ ಜೀವ ಇರುವುದರಿಂದ ಅವು ತಮ್ಮ ವಂಶಾಭಿವೃದ್ಧಿಗಾಗಿ ನೀಡುವ ಹೂ ಹಣ್ಣು ಫಸಲುಗಳನ್ನು ಸಹ ನಾವು ಕಿತ್ತು ಕಡಿದು ಉಪಯೋಗಿಸುವುದು ನ್ಯಾಯವಲ್ಲ.

    ಇದು ಒಂದು ರೀತಿಯ ವಾದ ಮತ್ತು ಮೇಲ್ನೋಟಕ್ಕೆ ಸರಿ ಎನಿಸುತ್ತದೆ. ಜೀವಿಗಳಿಗೆ ಗಾಳಿ ನೀರು ಆಹಾರ ಜೀವನಾವಶ್ಯಕ ಅಂಶಗಳು. ಅದು ಇಲ್ಲದೇ ಒಂದು ಕ್ಷಣವೂ ಮುಂದುವರಿಯಲು ಸಾಧ್ಯವಿಲ್ಲ. ಹಾಗಾದರೆ ಪ್ರಾಣಿ ಪಕ್ಷಿ ಮನುಷ್ಯ ಏನನ್ನು ತಿನ್ನಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.

    ವಾದದ ದೃಷ್ಟಿಯಿಂದ ಸಸ್ಯಗಳನ್ನು ಇದರಿಂದ ಹೊರಗಿಡೋಣ. ಅವುಗಳನ್ನು ನಿರ್ಜೀವ ವಸ್ತುಗಳೆಂದು ಪರಿಗಣಿಸೋಣ. ಅಂದ ಮೇಲೆ ಈ ಭೂಮಿಯಲ್ಲಿನ ಎಲ್ಲಾ ಜೀವಿಗಳು ಕೇವಲ ಸಸ್ಯಗಳು ಮತ್ತು ಆ ಜಾತಿಗೆ ಸೇರಿದ ಹಣ್ಣು, ತರಕಾರಿ ಮುಂತಾದುವುಗಳನ್ನು  ಮಾತ್ರ ಸೇವಿಸಿ ಬದುಕುವುದು ಸಹಜ ಮತ್ತು ಸ್ವಾಭಾವಿಕ ನ್ಯಾಯ ಮತ್ತು ಜೀವನ ಕ್ರಮ ಎಂಬ ತೀರ್ಮಾನಕ್ಕೆ ಬರೋಣವೇ ?

    ಇಲ್ಲಿ ಇನ್ನೂ ಒಂದು ರಿಯಾಯಿತಿ ಕೊಡಬಹುದು. ಅನೇಕ ಪ್ರಾಣಿಗಳಿಗೆ ಮನುಷ್ಯರಿಗಿರುವ ಬುದ್ದಿಶಕ್ತಿ, ಯೋಚನಾ ಕ್ರಮ, ನಾಗರಿಕತೆ, ರೂಪಿತ ನೀತಿ ನಿಯಮಗಳು ಇಲ್ಲದಿರುವುದರಿಂದ ಅದಕ್ಕೆ ಸಿಕ್ಕ ಸಸ್ಯವೋ ಪ್ರಾಣಿಯೋ ಯಾವುದೋ ಆ ಕ್ಷಣದ ಆಹಾರದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಿಂದ ಅದಕ್ಕೆ ತಿಳಿವಳಿಕೆ ಹೇಳಲು ಸಾಧ್ಯವಿಲ್ಲ. ಅದು ಅವುಗಳ ಸಹಜ ಆಹಾರ ಎಂದು ನಿರ್ಲಕ್ಷಿಸಬಹುದು. ಕೆಲವು ಕಾಡು ಪ್ರಾಣಿಗಳು ಮನುಷ್ಯರನ್ನು ತಿನ್ನುತ್ತವೆ. ಅದಕ್ಕೆ ಬುದ್ದಿ ಹೇಳಲು ಆಗುವುದಿಲ್ಲ. ಹೇಳಿದರೂ ಅದಕ್ಕೆ ಅರ್ಥವಾಗುವುದಿಲ್ಲ. ನಮ್ಮ ರಕ್ಷಣೆ ಮಾಡಿಕೊಂಡು ಅವುಗಳನ್ನು ಅದರ ಪಾಡಿಗೆ ಬಿಟ್ಟು ಬಿಡೋಣ.

    ಈಗ ಮನುಷ್ಯ ಪ್ರಾಣಿಯ ಆಹಾರದ ಬಗ್ಗೆ ಯೋಚಿಸೋಣ.

    ಸಹಜವೋ, ಅಸಹಜವೋ, ಸ್ವಾಭಾವಿಕವೋ, ಕೃತಕವೋ, ಪ್ರಾರಂಭದಿಂದಲೇ ಇದು ಇತ್ತೋ ಅಥವಾ ಅನಂತರ ಬೆಳವಣಿಗೆ ಹೊಂದಿತೋ ಏನೋ ಒಟ್ಟಿನಲ್ಲಿ ವಿಶ್ವದ ಆಹಾರ ಕ್ರಮದಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಎಂದು ಎರಡು ವಿಭಾಗಗಳು ಸೃಷ್ಟಿಯಾಗಿದೆ. ನನಗಿರುವ ಮಾಹಿತಿಯಂತೆ ವಿಶ್ವ ಜನಸಂಖ್ಯೆಯ ಸುಮಾರು ಶೇಕಡಾ 75/80% ಜನರು ಸಸ್ಯಗಳನ್ನು ಒಳಗೊಂಡ ಮಾಂಸಹಾರವನ್ನು ಮತ್ತು ಉಳಿದವರು ಸಸ್ಯಹಾರವನ್ನು ಸೇವಿಸುತ್ತಾರೆ. ( ಸಂಪೂರ್ಣ ಸಸ್ಯಹಾರ ಸಾಧ್ಯವೇ ಇಲ್ಲ ಎಂಬ ವಾದವೂ ಇದೆ. ಅದನ್ನು  ಆಹಾರ ತಜ್ಞರಿಗೆ ಬಿಟ್ಟುಬಿಡೋಣ )

    ಭಾರತದ ಮಟ್ಟಿಗೆ ಈ ಆಹಾರ ಸಂಸ್ಕೃತಿ ದುರಾದೃಷ್ಟವಶಾತ್ ಇಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯ ಜೊತೆ ತಳುಕು ಹಾಕಿಕೊಂಡು ಒಂದಷ್ಟು ಸಂಕೀರ್ಣ ಸಮಸ್ಯೆ ಸೃಷ್ಟಿಸಿದೆ. ಅದರಲ್ಲೂ ಹಸುವಿನ ಮಾಂಸ ಸೇವನೆ ಸದ್ಯದ ಮಟ್ಟಿಗೆ ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿದೆ.

    ಈ ಹಿನ್ನೆಲೆಯಲ್ಲಿ ನಾವು ಆಹಾರ ಸ್ವಾತಂತ್ರ್ಯ, ಹಕ್ಕು, ಬಹುಸಂಖ್ಯಾತರ ಭಾವನೆ, ಗೋವಿನ ವಿಶಿಷ್ಟ ಸ್ಥಾನ ಮುಂತಾದ ರಾಜಕೀಯ – ಧರ್ಮ ಪ್ರೇರಿತ ವಿಚಾರಗಳನ್ನು ವಿಮರ್ಶಿಸಬೇಕಿದೆ.

    ಕುರಿ ಕೋಳಿ ಮೀನು ಹಂದಿಗಳ ಆಹಾರದ ಬಗ್ಗೆ ಹೆಚ್ಚಿನ ಪ್ರತಿರೋಧ ಇಲ್ಲ.  ಸಸ್ಯಹಾರ ಒಳ್ಳೆಯದು, ಮಾಂಸಾಹಾರ ಒಳ್ಳೆಯದಲ್ಲ, ಪ್ರಾಣಿ ವಧೆ ಮಹಾಹಿಂಸೆ ಮುಂತಾದ ವಾದಗಳನ್ನು ಜಾತಿಯ ಮೇಲ್ವರ್ಗದವರು, ಜೈನರು ಮುಂತಾದವರು ಪ್ರತಿಪಾದಿಸುತ್ತಾರೆ. ಆದರೆ ಗೋವಿನ ಮಾಂಸದ ವಿಷಯದಲ್ಲಿ ಇತ್ತೀಚೆಗೆ ಅದನ್ನು  ಹಿಂಸಾತ್ಮಕವಾಗಿ ಪ್ರತಿಭಟಿಸುವಷ್ಟು ಮುಂದುವರಿದಿದ್ದಾರೆ.

    ಇದಕ್ಕೆ ಪ್ರತಿಯಾಗಿ ಹಸುವನ್ನು ಸೇರಿ ಮಾಂಸಹಾರ ಕೂಡ ಮಾನವನ ಸಹಜ ಆಹಾರ ಪದ್ದತಿ, ಅದು ಮನುಷ್ಯನ ಈ ಕ್ಷಣದ ಆಹಾರ ಸಮತೋಲನದ ಅತ್ಯವಶ್ಯಕ ವಿಧಾನ, ಈಗಿನ ಜನಸಂಖ್ಯೆಯ ದೃಷ್ಟಿಯಿಂದ ಸಸ್ಯಾಹಾರ ಸಾಕಾಗುವುದಿಲ್ಲ ಮತ್ತು ಪೌಷ್ಟಿಕಾಂಶ ದೊರೆಯುವುದಿಲ್ಲ. ಪ್ರಾಣಿ ವಧೆ ಹಿಂಸೆಯಾದರೂ ಮನುಷ್ಯ ಪ್ರಕೃತಿಯ ಮೇಲೆ ಸಾಧಿಸಿರುವ ನಿಯಂತ್ರಣದ ಕಾರಣಕ್ಕೆ ಮತ್ತು ಬಹುಸಂಖ್ಯಾತರ ಆಯ್ಕೆ ಮಾಂಸಹಾರ ಆಗಿರುವುದರಿಂದ ಆತನ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು ಮತ್ತು ಇದು ಅನಿವಾರ್ಯ ಎಂಬ ವಾದ ಮಂಡಿಸುತ್ತಾರೆ.

    ವಾದಗಳೇನೋ ಸರಿ. ಸತ್ಯ ಸಹ ಎಲ್ಲೋ ಅಡಗಿದೆ. ಆದರೆ ವಾಸ್ತವ……….

    ಭಾರತದ ಈಗಿನ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಗಮನಿಸಿದಾಗ………

    ಸಂಪೂರ್ಣ ಸಸ್ಯಹಾರದ ಸಂಪನ್ಮೂಲಗಳ ಕ್ರೋಡೀಕರಣ ಸಾಧ್ಯವಿಲ್ಲ ಮತ್ತು ಅದಕ್ಕಾಗಿ ಒತ್ತಾಯ ಒಳ್ಳೆಯದಲ್ಲ. ಹಾಗಾದರೆ ಮಾಂಸಹಾರ ಪ್ರೋತ್ಸಾಹಿಸಬೇಕೆ. ಅದೂ ಒಳ್ಳೆಯದಲ್ಲ.

    ಈ ಕ್ಷಣದಲ್ಲಿ ನಿಂತು ಯೋಚಿಸಿದರೆ…….

    ಆಹಾರ ಅವರವರ ಆಯ್ಕೆ. ಕಾನೂನಿನ ಅಡಿಯಲ್ಲಿ ನಿಷೇಧವಿಲ್ಲದ ಏನನ್ನಾದರೂ ತಿನ್ನಲಿ. ಆ ಸ್ವಾತಂತ್ರ್ಯ ಅವರಿಗಿದೆ. ಮುಖ್ಯವಾಗಿ ದನದ ಮಾಂಸದ ಬಗ್ಗೆ ಕೆಲವರಿಗೆ ಅಸಮಾಧಾನ ಮತ್ತು ಆಕ್ರೋಶವಿದೆ. ಗೋ ರಕ್ಷಣೆಗಾಗಿ ಮನುಷ್ಯರನ್ನು ಕೊಲ್ಲುವಷ್ಟು ಕ್ರೌರ್ಯವಿದೆ. ಇದು ಸರಿಯೇ ಎಂಬುದು ‌ಈಗ ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ.

    ಎಲ್ಲಾ ಪ್ರಾಣಿಗಳಂತೆ ಹಸು ಕೂಡ ಒಂದು ಪ್ರಾಣಿ. ಮನುಷ್ಯನ ಉಪಯೋಗದ ದೃಷ್ಟಿಯಿಂದ ಒಂದಷ್ಟು ಹೆಚ್ಚು ಪ್ರಾಮುಖ್ಯತೆ ಪಡೆದಿರಬಹುದು ಮತ್ತು ಗಾತ್ರದಲ್ಲಿ ದೊಡ್ಡದು ಸಹ. ಅದನ್ನು ಆಹಾರಕ್ಕಾಗಿ ಉಪಯೋಗಿಸುತ್ತಾರೆ ಎಂದಾಗ ಕೆಲವರು ಭಾವುಕರಾಗಬಹುದು.

    ಆದರೆ ನಮ್ಮದೇ ಕೆಲವೇ ಕೆಲವು ಜನರು  ರುಚಿಗಾಗಿ, ಪೌಷ್ಟಿಕಾಂಶಕ್ಕಾಗಿ, ಬಡತನಕ್ಕಾಗಿ, ಆಹಾರ ಸ್ವಾತಂತ್ರ್ಯದ ರಕ್ಷಣೆಗಾಗಿ, ಎಲ್ಲ ಜಾತಿ ಮತ ಧರ್ಮಗಳ ಸೌಹಾರ್ದಕ್ಕಾಗಿ ಮತ್ತು ಇಂದಿನ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಗೋಮಾಂಸ ಸೇವಿಸುವುದನ್ನು ಒಪ್ಪಿಕೊಳ್ಳಲೇ ಬೇಕಿದೆ. ಇಲ್ಲದಿದ್ದರೆ ಇದು ನಮ್ಮ ಸಮಾಜದ ವಿಭಜನೆಗೆ ಕಾರಣವಾಗಬಹುದು.

    ಗೋಮಾಂಸ ವಿರೋಧಿಸುವವರಿಗೆ ಇನ್ನೂ ಒಂದು ಆಯ್ಕೆ ಇದೆ. ಅವರು ಗೋಮಾಂಸದ ವಿರುದ್ಧ ಜನಜಾಗೃತಿ ಮೂಡಿಸಬಹುದು. ಗೋವುಗಳ ಎಲ್ಲಾ ತಳಿಗಳನ್ನು ಮತ್ತಷ್ಟು ಮತ್ತಷ್ಟು ಬೆಳೆಸಬಹುದು. ಗೋವುಗಳನ್ನು ತಮ್ಮ ಮನೆಯಲ್ಲಿ ಸಾಕಿ ಸಲುಹಿ ಪೂಜೆ ಪುನಸ್ಕಾರ ಏನು ಬೇಕಾದರೂ ಮಾಡಬಹುದು. ಆ ಎಲ್ಲಾ ಸ್ವಾತಂತ್ರ್ಯ,ಅವಕಾಶ ಮತ್ತು ಹಕ್ಕು ಅವರಿಗಿದೆ ಮತ್ತು ಅದು ಹೆಚ್ಚು ಪ್ರಜಾಸತ್ತಾತ್ಮಕವೂ ಹೌದು.

    ಅದು ಬಿಟ್ಟು ಗೋಮಾಂಸ ಸೇವಿಸುವವರನ್ನು ಧರ್ಮ ದ್ರೋಹಿಗಳು, ದೇಶದ್ರೋಹಿಗಳು ಎಂದು ಅವರನ್ನು ಶಿಕ್ಷಿಸುವುದು ನಮ್ಮ ಸಮಾಜದ ನೆಮ್ಮದಿಯನ್ನು ನಾವೇ ಹಾಳು ಮಾಡಿಕೊಂಡಂತ್ತಾಗುತ್ತದೆ.

    ನಾನು ಗೋಮಾಂಸ ತಿನ್ನುವುದಿಲ್ಲ. ನನ್ನನ್ನು ಯಾರಾದರೂ ಕೇಳಿದರೆ ಅದಕ್ಕಿಂತ ಉತ್ತಮ ಆಹಾರವನ್ನು ಸೂಚಿಸುತ್ತೇನೆ. ಆದರೆ ಗೋಮಾಂಸ ತಿನ್ನುವವರ ಸ್ವಾತಂತ್ರ್ಯಕ್ಕೆ ಎಂದು ಅಡ್ಡಿಪಡಿಸುವುದಿಲ್ಲ. ಅವರ ಸ್ವಾತಂತ್ರ್ಯ ಮತ್ತು ಹಕ್ಕನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಗೌರವಿಸುತ್ತೇನೆ.

    ನನಗೆ ಗೋವಿಗಿಂತ ಮನುಷ್ಯ, ಅವನ ಆಸೆ ಆಕಾಂಕ್ಷೆ, ಅವನೊಡನೆ ಒಡನಾಟ, ಪ್ರೀತಿಯ ಸಂಬಂಧ ಬಹಳ ಮುಖ್ಯ. ಮನುಷ್ಯರಿಂದ ನನಗೆ ಸಾಕಷ್ಟು ನೋವು ಸಂಕಷ್ಟಗಳ ಅನುಭವ ಆಗಿದೆ. ಗೋವುಗಳಿಂದ ಒಂದಷ್ಟು ಉಪಕಾರ ಆಗಿದೆ. ಆದರೂ ಗೋವು ಮತ್ತು ಮನುಷ್ಯನ ಆಯ್ಕೆಯಲ್ಲಿ ನಾನು ಮನುಷ್ಯರನ್ನೇ ಆಯ್ದುಕೊಳ್ಳುತ್ತೇನೆ.

    ಹಾಗೆಯೇ ಗೋವು ಮತ್ತು ದೇಶದ ಆಯ್ಕೆಯಲ್ಲಿ ದೇಶವನ್ನೇ ಆಯ್ಕೆಮಾಡಿಕೊಳ್ಳುತ್ತೇನೆ. ಏಕೆಂದರೆ ನನ್ನ ಬದುಕು ಮುನ್ನಡೆಯುತ್ತಿರುವುದೇ ಮನುಷ್ಯರಾದ ನಿಮ್ಮೊಂದಿಗೆ ಮತ್ತು ಈ ದೇಶದೊಂದಿಗೆ.

    ಹಸುವಿಲ್ಲದೆ ಬದುಕಬಲ್ಲೆ. ನೀವಿಲ್ಲದೆ ನಾನಿಲ್ಲ.

    ಹಸುವಿಲ್ಲದೇ ಬದುಕಬಲ್ಕೆ. ಈ ದೇಶ ನೆಮ್ಮದಿಯಾಗಿರದೆ ನನ್ನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ.

    ಒಟ್ಟಿನಲ್ಲಿ ಇದು ಒಂದು ಸಹಜ ಸ್ವಾಭಾವಿಕ ಅಭಿಪ್ರಾಯ. ಇದಕ್ಕಿಂತ ಭಿನ್ನ ಅಭಿಪ್ರಾಯ ನಿಮ್ಮದಾಗಿದ್ದರೆ ಅದನ್ನೂ ಗೌರವಿಸುತ್ತಾ…………..

     

    ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

    ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

    ಮನಸ್ಸುಗಳ ಅಂತರಂಗದ ಚಳವಳಿ.

    ವಿವೇಕಾನಂದ. ಹೆಚ್.ಕೆ.

    9844013068.

    admin
    • Website

    Related Posts

    ಬದುಕು ಧೈರ್ಯಕ್ಕೆ ಕಾರಣ

    January 29, 2023

    ಅಂತರಾಷ್ಟ್ರೀಯ ಪರ್ವತ ದಿನ – ಪ್ರಕೃತಿಯ ಭದ್ರವಾದ ಪರ್ವತ

    December 10, 2022

    ವಿಶ್ವದ ಮೊಟ್ಟ ಮೊದಲ ಡಾ. ಅಂಬೇಡ್ಕರ್ ಪ್ರತಿಮೆ.

    December 10, 2022
    Our Picks

    ಇಂದು 50,000 ವರ್ಷಗಳಿಗೊಮ್ಮೆ ನಡೆಯುವ ಆಕಾಶ ವಿದ್ಯಮಾನ

    February 1, 2023

    ಕೇಂದ್ರ ಬಜೆಟ್- 2023: ಸ್ವಚ್ಛ ನಗರ ರೂಪಿಸಲು ವಿಶೇಷ ಯೋಜನೆ

    February 1, 2023

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು 2023-24ನೇ ಸಾಲಿನ ಬಜೆಟ್ ಮಂಡನೆ

    February 1, 2023

    ಇಂದು ಕೇಂದ್ರ ಬಜೆಟ್—2023 | ರಾಷ್ಟ್ರಪತಿಯನ್ನು ಭೇಟಿ ಮಾಡಿದ ನಿರ್ಮಲ ಸೀತಾರಾಮನ್

    February 1, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಇಂದು 50,000 ವರ್ಷಗಳಿಗೊಮ್ಮೆ ನಡೆಯುವ ಆಕಾಶ ವಿದ್ಯಮಾನ

    February 1, 2023

    ಖಗೋಳಶಾಸ್ತ್ರಜ್ಞರಿಗೆ ಒಳ್ಳೆಯ ಸುದ್ದಿ. ಇಂದು ನೀವು 50,000 ವರ್ಷಗಳಿಗೊಮ್ಮೆ ಆಕಾಶದ ವಿದ್ಯಮಾನವನ್ನು ವೀಕ್ಷಿಸಬಹುದು. ಹಸಿರು ಧೂಮಕೇತು C/2022 E3 (ZTF)…

    ಬೆಂಗಳೂರಿನಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ

    February 1, 2023

    ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೆ ಆರ್ ಎಸ್ ಪಕ್ಷದಿಂದ ಜನ ಜಾಗೃತಿ

    February 1, 2023

    ಕೇಂದ್ರ ಬಜೆಟ್- 2023: ಸ್ವಚ್ಛ ನಗರ ರೂಪಿಸಲು ವಿಶೇಷ ಯೋಜನೆ

    February 1, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.