nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜೀತದಾಳುಗಳನ್ನು ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿ: ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುಷ್ಮಾ

    February 9, 2023

    ಕೋಲಾರದಲ್ಲಿ ತಂದೆ ವರುಣಾದಲ್ಲಿ ಮಗ ಚುನಾವಣೆಲ್ಲಿ ಸ್ಫರ್ಧೆ

    February 9, 2023

    ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು

    February 9, 2023
    Facebook Twitter Instagram
    ಟ್ರೆಂಡಿಂಗ್
    • ಜೀತದಾಳುಗಳನ್ನು ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿ: ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುಷ್ಮಾ
    • ಕೋಲಾರದಲ್ಲಿ ತಂದೆ ವರುಣಾದಲ್ಲಿ ಮಗ ಚುನಾವಣೆಲ್ಲಿ ಸ್ಫರ್ಧೆ
    • ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು
    • ರಬ್ಬರ್ ಆಮದಿಗೆ ಸಂಬಂಧಿಸಿದ ಕೇಂದ್ರ ಬಜೆಟ್ ಘೋಷಣೆಗಳು
    • ಆಂಧ್ರಪ್ರದೇಶದ ಕಾಕಿನಾಡದಲ್ಲಿ ವಿಷಾನಿಲ ಸೇವಿಸಿ ಏಳು ಮಂದಿ ಸಾವು
    • ದಶಕಗಳ ನಂತರ ಶ್ರೀನಗರದ ಚಿತ್ರಮಂದಿರಗಳು ಹೌಸ್‌ಫುಲ್
    • ಪ್ರೇಮಿಗಳ ದಿನವನ್ನು ‘ಹಸು ಅಪ್ಪುಗೆಯ ದಿನ’ ಎಂದು ಆಚರಿಸಬೇಕು; ಕೇಂದ್ರ ಪಶುಸಂಗೋಪನಾ ಇಲಾಖೆ
    • ಮನ ಕಲಕುವ ಘಟನೆ:ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪ ಇಬ್ಬರು ಕಂದಮ್ಮಗಳ ನರಳಾಟ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಮಾಜ ಒಡೆಯುವವರ ವಿರುದ್ಧ ಜೀವ ಇರುವವರೆಗೂ ಹೋರಾಡುತ್ತೇನೆ | ಹೆಚ್.ಡಿ.ದೇವೇಗೌಡ ಗುಡುಗು
    ಗುಬ್ಬಿ December 4, 2021

    ಸಮಾಜ ಒಡೆಯುವವರ ವಿರುದ್ಧ ಜೀವ ಇರುವವರೆಗೂ ಹೋರಾಡುತ್ತೇನೆ | ಹೆಚ್.ಡಿ.ದೇವೇಗೌಡ ಗುಡುಗು

    By adminDecember 4, 2021No Comments3 Mins Read
    hd devegowda

    ಗುಬ್ಬಿ: ಜಿಲ್ಲೆಯಲ್ಲಿ ಯಾವ ಪುಣ್ಯಾತ್ಮ ಜಾತಿ ವಿಷ ಬೀಜ ಬಿತ್ತಿದ್ದಾರೋ ಅವರಿಗೆ ತಕ್ಕ ಉತ್ತರ ನೀಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.

    ಹೆರೂರಿನಲ್ಲಿ ಪಕ್ಷದ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಮಾಜವನ್ನು ಒಡೆದು, ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಅನ್ಯಾಯ ನೋಡಿಕೊಂಡು ಸುಮ್ಮನಿರುವುದಿಲ್ಲ, ಅಂತಹವರ ವಿರುದ್ಧ ಜೀವ ಇರುವವರೆಗೂ ಹೋರಾಡುತ್ತೇನೆ ಎಂದರು.

    ಒಕ್ಕಲಿಗ ಸಮುದಾಯದ ಗಂಗಟಕಾರ, ಕುಂಚಿಟಿಗ, ಮೊರಸು ಒಕ್ಕಲಿಗರೆಲ್ಲಾ ಒಂದೇ. ಆದರೆ ಕೆಲವರು ನಮ್ಮ ಸಮುದಾಯದ ಒಗ್ಗಟ್ಟು ಮುರಿದು, ನಮ್ಮ ಶಕ್ತಿ ನಾಶ ಮಾಡಲು ಹೊರಟಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರ ಸಮುದಾಯದವರನ್ನೇ ಅಭ್ಯರ್ಥಿ ಮಾಡಿದ್ದೇನೆ. ನನ್ನ ಸೋಲಿನ ನೋವು ಮರೆಯಬೇಕಾದರೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

    ಕೇವಲ ಒಕ್ಕಲಿಗ ಸಮುದಾಯದವರಲ್ಲ ನಾನು ಈ ದೇಶದ ಎಲ್ಲಾ ಸಮುದಾಯ ನಾಯಕನಾಗಿ ರಾಜಕೀಯ ಜೀವನದಲ್ಲಿ ಮಹತ್ವದ ಕೆಲಸವನ್ನು ಮಾಡಿದ್ದೇನೆ. ದೇವೇಗೌಡರ ಶಕ್ತಿ ಏನು ಎಂಬುದನ್ನು ತಿಳಿಯದ ಜನರಿಗೆ ತುಮಕೂರು ಜಿಲ್ಲೆಯ ಜನತೆ ಸರಿಯಾದ ಪಾಠವನ್ನು ಕಲಿಸಬೇಕು ಎಂದು ನಾನು ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ. ನನ್ನ ಎಲ್ಲಾ ಪ್ರೀತಿಯ ಮುಖಂಡರಿಗೆ ಹೇಳುತ್ತೇನೆ ಮನುಷ್ಯನಿಗೆ  ಬರಿ ಹಣ ಮುಖ್ಯವಲ್ಲಾ ಮಾನವೀಯತೆ ಮುಖ್ಯ ಈ ನಿಟ್ಟಿನಲ್ಲಿ ನಾವೆಲ್ಲರೂ  ಸಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು

    ತುಮಕೂರು ಜಿಲ್ಲೆಯ ಕೆಲವು ತಾಲೂಕಿನಲ್ಲಿ ನನ್ನ ಬಗ್ಗೆ ಹಗುರವಾಗಿ ಮಾತಾನಾಡಿದ  ವ್ಯಕ್ತಿಗಳ ನಡುವೆ ನಾನಿನ್ನೂ ಬದುಕಿದ್ದೇನೆ. ನನಗೆ ಈ ರಾಜ್ಯದ ಜನತೆಯ ಪರ ಹೋರಾಟ ಮಾಡುವಂತ ಶಕ್ತಿ ಇನ್ನೂ ನನ್ನಲ್ಲಿದೆ. ನಾನು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ನನ್ನ ಬಗ್ಗೆ ಇಲ್ಲಾದ ಅಪಪ್ರಚಾರ ಮಾಡಿ ನನ್ನ ಸೋಲಿಗೆ ಕಾರಣರಾದವರಿಗೆ ಈ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ  ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ನಮ್ಮ ಪಕ್ಷದ ಅಭ್ಯರ್ಥಿ   ಆರ್.ಅನಿಲ್ ಕುಮಾರ್ ರವರಿಗೆ ಮತ ಚಲಾಯಿಸಿ ಜಯಗಳಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.

    ವಿಶೇಷವಾಗಿ ತುಮಕೂರು ಜಿಲ್ಲೆಯನ್ನು ಜೆಡಿಎಸ್ ಪಕ್ಷವು ಮರೆಯುವಂತಿಲ್ಲ. ನಮ್ಮ ಪಕ್ಷ ಬಲವಾಗಿ ಬೆಳೆಯಲು ಈ ಜಿಲ್ಲೆ ನಮಗೆ  ತವರೂರು ಆಗಿದೆ. ನನ್ನ ರಾಜಕೀಯ ಜೀವನದಲ್ಲಿ ವಿಶೇಷ ಗೌರವವನ್ನು ನಾನು ಈ ಜಿಲ್ಲೆಯ ಮೇಲೆ ಇಟ್ಟಿದ್ದೇನೆ.  ಆದರೆ ಇತ್ತೀಚಿನ ದಿನಗಳಲ್ಲಿ ಈ ಜಿಲ್ಲೆಯ ರಾಜಕೀಯ ಕೆಲವು ಚಟುವಟಿಕೆಗಳು ನನಗೆ ಸಾಕಷ್ಟು ನೋವನ್ನುಂಟು ಮಾಡಿದೆ. ನಮ್ಮವರಿಂದಲೇ ಆಗುತ್ತಿರುವ ನೋವು ಹೇಳತೀರದು. ನಮ್ಮಿಂದ ಯಾವುದೇ ಅನ್ಯಾಯವಾಗಿಲ್ಲ.  ನನ್ನ ರಾಜಕೀಯ ಜೀವನದಲ್ಲಿ ಸರ್ವ ಜನಾಂಗವನ್ನು ಸಮಾನ ರೀತಿಯಲ್ಲಿ ನೋಡುವಂತ ಪಕ್ಷ  ನಮ್ಮದಾಗಿದೆ . ಜೆಡಿಎಸ್ ಪಕ್ಷ ಪ್ರಾದೇಶಿಕ ಪಕ್ಷವಾಗಿ   ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮ  ನೀಡಿದೆ ಅಧಿಕಾರ ವಿಕೇಂದ್ರೀಕರಣ ಮಾಡುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳಿಗೆ ಬಲ ತುಂಬಲು  ಜೆಡಿಎಸ್ ಪಕ್ಷ ಮತ್ತಷ್ಟು ಕೆಲಸ ಮಾಡಲು ಈ ವಿಧಾನ ಪರಿಷತ್ತಿನ ಚುನಾವಣೆ ಫಲಿತಾಂಶ ನಿರ್ಣಾಯಕವಾಗಲಿದೆ. ಈ ಹಿನ್ನಲೆ ಆರ್.ಅನಿಲ್ ಗೆ ಮತ ಹಾಕುವಂತೆ ಮನವಿ ಮಾಡಿದರು.

    ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಸಾರ್ವತ್ರಿಕ ಚುನಾವಣೆಯಂತೆ ಮೆರೆಗು ಪಡೆದ ವಿಧಾನ ಪರಿಷತ್ ಚುನಾವಣೆ ಸಲ್ಲದ ಕುತಂತ್ರ ರಾಜಕಾರಣಕ್ಕೆ ಸಾಕ್ಷಿಯಾಗುತ್ತಿದೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು ಗೆಲುವು ಸಾಧಿಸುವಷ್ಟಿದೆ. ಚುರುಕಿನ ಕೆಲಸ ಮಾಡಿ ದೇವೇಗೌಡರನ್ನು ನಾನೇ ಸೋಲಿಸಿದೆ ಎಂದು ಹೇಳಿಕೊಂಡವರನ್ನು ಸೋಲಿಸೋಣ. ಜೊತೆಗೆ ಮುಂದಿನ 2023ಕ್ಕೆ ಕುಮಾರಣ್ಣನವರ ಸರ್ಕಾರ ಸ್ಥಾಪಿಸೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

    ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಗ್ರಾಮ ಸ್ವರಾಜ್ಯ ಕನಸು ದೇವೇಗೌಡರ ಕನಸಾಗಿದೆ. ಇದರ ಸಕಾರಕ್ಕೆ ಈ ಚುನಾವಣೆ ಗೆಲುವು ಸಾಕ್ಷಿಯಾಗಬೇಕಿದೆ. ಸಾಮಾಜಿಕ ನ್ಯಾಯ ಕಲ್ಪಿಸುವ ಶಕ್ತಿ ಜೆಡಿಎಸ್ ಪಕ್ಷಕ್ಕೆ ಮಾತ್ರ ಇದೆ. ಈಗಾಗಲೇ ಜನರಿಗೆ ಬೇಸರ ತಂದ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

    ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್ ಮಾತನಾಡಿ, ಗ್ರಾಮೀಣ ಜನರ ಸಮಸ್ಯೆಗೆ ಉತ್ತರ ನೀಡಬಲ್ಲ ಜೆಡಿಎಸ್ ಪಕ್ಷಕ್ಕೆ ನಿಮ್ಮ ಬೆಂಬಲ ನೀಡಿ ಎಂದು ಮತಯಾಚನೆ ಮಾಡಿದರು.

    ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಜಿ.ಪಂ. ಮಾಜಿ ಸದಸ್ಯರಾದ ಯಶೋಧಮ್ಮ ಶಿವಣ್ಣ, ಜಿ.ರಾಮಾಂಜಿನಪ್ಪ, ಮುಖಂಡರಾದ ಎಂ.ಗಂಗಣ್ಣ, ಬಿ.ಎಸ್.ನಾಗರಾಜು, ಶಿವಲಿಂಗಯ್ಯ, ಕೊಂಡ್ಲಿ ಕರಿಯಪ್ಪ, ಕಳ್ಳಿಪಾಳ್ಯ ಲೋಕೇಶ್, ಬೆಳ್ಳಿ ಲೋಕೇಶ್, ನರಸೇಗೌಡ, ನರಸಿಂಹಮೂರ್ತಿ ಇತರರು ಇದ್ದರು.

     

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

    admin
    • Website

    Related Posts

    ಅಂತ್ಯಸಂಸ್ಕಾರಕ್ಕೆ ಶಾಸಕ ಬರಬೇಕು: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

    December 8, 2022

    ಪತ್ನಿ ಮತ್ತು 6 ವರ್ಷದ ಮಗನನ್ನು ಹಾರೆಯಿಂದ ಹೊಡೆದು ಬರ್ಬರ ಹತ್ಯೆ

    October 19, 2022

    ಕೆರೆಗೆ ಬಿದ್ದು ನಾಪತ್ತೆಯಾಗಿದ್ದ ಇಬ್ಬರ ಪೈಕಿ ಓರ್ವನ ಮೃತದೇಹ ಪತ್ತೆ

    October 17, 2022
    Our Picks

    ರಬ್ಬರ್ ಆಮದಿಗೆ ಸಂಬಂಧಿಸಿದ ಕೇಂದ್ರ ಬಜೆಟ್ ಘೋಷಣೆಗಳು

    February 9, 2023

    ದಶಕಗಳ ನಂತರ ಶ್ರೀನಗರದ ಚಿತ್ರಮಂದಿರಗಳು ಹೌಸ್‌ಫುಲ್

    February 9, 2023

    ಮನ ಕಲಕುವ ಘಟನೆ:ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪ ಇಬ್ಬರು ಕಂದಮ್ಮಗಳ ನರಳಾಟ

    February 9, 2023

    ಸಿರಿಯಾ, ಟರ್ಕಿ ಭೂಕಂಪಗಳು; ಸಾವಿನ ಸಂಖ್ಯೆ 15,000 ದಾಟಿದೆ

    February 9, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಜೀತದಾಳುಗಳನ್ನು ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿ: ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುಷ್ಮಾ

    February 9, 2023

    ಸರಗೂರು: ಜೀತದಾಳುಗಳನ್ನು ಗುರುತಿಸಿ ಅವರಿಗೆ ಪುನರ್‌ ವಸತಿ ಹಾಗೂ ಸರಕಾರದ ಇತರ ಸೌಲಭ್ಯ ಒದಗಿಸುವ ಮೂಲಕ ಮುಖ್ಯವಾಹಿನಿಗೆ ತರುವ ಜವಾಬ್ದಾರಿ…

    ಕೋಲಾರದಲ್ಲಿ ತಂದೆ ವರುಣಾದಲ್ಲಿ ಮಗ ಚುನಾವಣೆಲ್ಲಿ ಸ್ಫರ್ಧೆ

    February 9, 2023

    ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು

    February 9, 2023

    ರಬ್ಬರ್ ಆಮದಿಗೆ ಸಂಬಂಧಿಸಿದ ಕೇಂದ್ರ ಬಜೆಟ್ ಘೋಷಣೆಗಳು

    February 9, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.