nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕುಳಿತು ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಜನ ಜಾಗೃತಿ

    February 1, 2023

    ಕೇಂದ್ರ ಬಜೆಟ್- 2023: ಸ್ವಚ್ಛ ನಗರ ರೂಪಿಸಲು ವಿಶೇಷ ಯೋಜನೆ

    February 1, 2023

    ಸುಮಲತಾ ಅವರು ಬಿಜೆಪಿ ಸೇರಿದರೇ ಹೆಚ್ಚು ಲಾಭ :ಸಚಿವ ಸುಧಾಕರ್

    February 1, 2023
    Facebook Twitter Instagram
    ಟ್ರೆಂಡಿಂಗ್
    • ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕುಳಿತು ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಜನ ಜಾಗೃತಿ
    • ಕೇಂದ್ರ ಬಜೆಟ್- 2023: ಸ್ವಚ್ಛ ನಗರ ರೂಪಿಸಲು ವಿಶೇಷ ಯೋಜನೆ
    • ಸುಮಲತಾ ಅವರು ಬಿಜೆಪಿ ಸೇರಿದರೇ ಹೆಚ್ಚು ಲಾಭ :ಸಚಿವ ಸುಧಾಕರ್
    • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು 2023-24ನೇ ಸಾಲಿನ ಬಜೆಟ್ ಮಂಡನೆ
    • ರಾಷ್ಟ್ರಗೀತೆಯನ್ನು ಹೇಳುವಾಗ ಕುರ್ಚಿ ಮೇಲೆ ಕುಳಿತುಕೊಂಡು ಫೋನ್‌ ನಲ್ಲಿ ಮಾತನಾಡಿದ್ದಕ್ಕೆ ಪೊಲೀಸ್ ಅಧಿಕಾರಿ ಅಮಾನತು
    • ವರದಕ್ಷಿಣೆ ಕಿರುಕುಳ ತಾಳದೇ ಮಹಿಳೆ ರಾಸಾಯನಿಕ ಕುಡಿದು ಸಾವು
    • ರಮೇಶ್, ಡಿಕೆಶಿ, ಲಕ್ಷ್ಮೀ ವೈಯಕ್ತಿಕ ಟೀಕೆ ಬಿಟ್ಟು ಪಾಲಿಟಿಕ್ಸ್ ಮಾಡಲಿ:ಬಾಲಚಂದ್ರ ಜಾರಕಿಹೊಳಿ
    • ಇಂದು ಕೇಂದ್ರ ಬಜೆಟ್—2023 | ರಾಷ್ಟ್ರಪತಿಯನ್ನು ಭೇಟಿ ಮಾಡಿದ ನಿರ್ಮಲ ಸೀತಾರಾಮನ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಫಲಾನುಭವಿಗಳಿಗೆ ಸವಲತ್ತು ವಿತರಣೆ, ಆರ್.ರಾಜೇಂದ್ರ ಅವರಿಗೆ ಅಭಿನಂದನಾ ಕಾರ್ಯಕ್ರಮ
    ಮಧುಗಿರಿ January 11, 2022

    ಫಲಾನುಭವಿಗಳಿಗೆ ಸವಲತ್ತು ವಿತರಣೆ, ಆರ್.ರಾಜೇಂದ್ರ ಅವರಿಗೆ ಅಭಿನಂದನಾ ಕಾರ್ಯಕ್ರಮ

    By adminJanuary 11, 2022No Comments2 Mins Read
    rajendra

    ಮಧುಗಿರಿ : ಜಿಲ್ಲೆಯ ಎಲ್ಲಾ ಹಿರಿಯ ಸಹಕಾರಿಗಳ ಸಹಕಾರದಿಂದ ವಿಧಾನಪರಿಷತ್ ಚುನಾವಣೆಯಲ್ಲಿ ನನ್ನ ಗೆಲುವು ಸಾಧ್ಯವಾಯಿತು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.

    ಪಟ್ಟಣದ ತುಮುಲ್ ಉಪ ಕೇಂದ್ರದ ಕ್ಷೀರಭವನದಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ಗೆ ಆಯ್ಕೆಯಾದ ಆರ್.ರಾಜೇಂದ್ರ ರವರಿಗೆ ಅಭಿನಂದನಾ ಕಾರ್ಯಕ್ರಮ, ಡೈರಿ-ಕ್ಯಾಲೆಂಡರ್ ಬಿಡುಗಡೆ ಹಾಗೂ ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿಗಳ ಮೂಲಕ ಯುವ ಸಹಕಾರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿರುವುದು ಖುಷಿ ತಂದಿದೆ ಎಂದರು.

    ನಮ್ಮ ತಾಲೂಕು ಉಪವಿಭಾಗವಾಗಿದ್ದು, ತುಮುಲ್ ವತಿಯಿಂದ ವಿದ್ಯಾರ್ಥಿನಿಯರ ಹಾಸ್ಟೆಲ್ ನ್ನು ಮಧುಗಿರಿಯಲ್ಲಿ ನಿರ್ಮಿಸಿ ವಿದ್ಯಾಭ್ಯಾಸಕ್ಕೆ ಅನೂಕೂಲ ಮಾಡಿಕೊಡಬೇಕಾಗಿದೆ ಎಂದ ಅವರು, ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಬದ್ಧವಾಗಿದ್ದೇನೆ. ಜಿಲ್ಲಾ ಬ್ಯಾಂಕ್ ನ ವತಿಯಿಂದ ಹಸು ಸಾಕಾಣಿಕೆಗಾಗಿ 32 ಜನರಿಗೆ 1ಕೋಟಿ 75 ಲಕ್ಷ ರೂ. ಗಳ ಸಾಲ ಮಂಜೂರು ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಪಡೆದು ಮೃತಪಟ್ಟವರಿಗೆ ನೀಡಲಾಗುತ್ತಿದ್ದ 1 ಲಕ್ಷ ರೂ. ಗಳ ಹಣವನ್ನು 2022 ರ ಏಪ್ರಿಲ್ 1 ರಿಂದ ಅನ್ವಯ ವಾಗುವಂತೆ 50 ಸಾವಿರ ರೂ ಗಳನ್ನು ಬ್ಯಾಂಕ್ ನ ಸ್ಥಿತಿಗತಿಗಳನ್ನು ನೋಡಿಕೊಂಡು ಇಳಿಕೆ ಮಾಡಲು ಉದ್ದೇಶಿಸಲಾಗಿದೆ ಎಂದರು.

    ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ತುಮುಲ್ ವತಿಯಿಂದ ಸುಮಾರು 61 ಲಕ್ಷ 5 ಸಾವಿರ ರೂ ಗಳ ಚೆಕ್ ಗಳನ್ನು ವಿವಿಧ ಯೋಜನೆಗಳಡಿಯಲ್ಲಿ ಆರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಸುಮಾರು 19 ಕೋಟಿ ಬಟವಾಡೆ ಹಣವನ್ನು ವಾರಕ್ಕೊಮ್ಮೆ ಹಾಲು ಉತ್ಪಾದಕರಿಗೆ ನೇರವಾಗಿ ಅವರ ಖಾತೆಗಳಿಗೆ ಪಾವತಿಸಲಾಗುತ್ತಿದೆ. ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ನವರ ಸಹಕಾರದಿಂದ ನಾನು ಅಧ್ಯಕ್ಷನಾಗಿ ಹೈನುಗಾರರಿಗೆ ಅನೇಕ ರೀತಿಯ ಜನಪರ ಕಾರ್ಯಕ್ರಮಗಳನ್ನು ಅಂದು ಜಾರಿಗೊಳಿಸಿದ್ದು, ಇಂದು ಆ ಕಾರ್ಯಕ್ರಮಗಳಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.

    ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿ, ಹೈನುಗಾರಿಕೆಯು ಸಹಕಾರ ಕ್ಷೇತ್ರದ ಅವಿಭಾಜ್ಯ ಅಂಗವಾಗಿದೆ. ತಾಲ್ಲೂಕಿನಲ್ಲಿ ಹೆಚ್ಚು ಹೈನುಗಾರರನ್ನು ಒಳಗೊಂಡಿರುವುದರಿಂದ ಡಿಸಿಸಿ ಬ್ಯಾಂಕ್ ನ ಮೂಲಕ ಸಾಲ ಸೌಲಭ್ಯ ಕಲ್ಪಿಸಿಕೊಟ್ಟು ಹೈನುಗಾರರನ್ನು ಆರ್ಥಿಕವಾಗಿ ಸದೃಢರಾಗಿಸಬೇಕೆಂದರು.

    ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ರಾಜೇಂದ್ರ ರಾಜಣ್ಣ ರವರು ವಿಧಾನಪರಿಷತ್ ಸದಸ್ಯರಾಗಿ ರೈತರ ಹಾಗೂ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ನಮ್ಮ ಸಹಕಾರಿ ಕ್ಷೇತ್ರವನ್ನು ಮತ್ತಷ್ಟೂ ಬಲಪಡಿಸುವ ಆಶಯ ಇದೆ ಎಂದರು. 

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ರಾಜ್ ಗೋಪಾಲ್, ಪುರಸಭಾ ಸದಸ್ಯರಾದ ಎಂ.ಎಸ್.ಚಂದ್ರಶೇಖರ್, ಮಂಜುನಾಥ್ ಆಚಾರ್, ಗರಣಿ ರಾಮಾಂಜಿ, ಮಾಲೀಮರಿಯಪ್ಪ, ಮುಖಂಡರಾದ ಪಿ.ಸಿ.ಕೃಷ್ಣರೆಡ್ಡಿ, ಎಂ.ಜಿ.ಶ್ರೀನಿವಾಸ ಮೂರ್ತಿ, ಚಿಕ್ಕೋಬಳರೆಡ್ಡಿ, ಪಿ.ಟಿ.ಗೋವಿಂದಪ್ಪ, ಆದಿನಾರಾಯಣ ರೆಡ್ಡಿ, ಕೆ.ಪ್ರಕಾಶ್, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಸಾಧಿಕ್, ಹೆಂಜಾರಪ್ಪ, ಶನಿವಾರಂ ರೆಡ್ಡಿ, ಸದಾಶಿವರೆಡ್ಡಿ , ಸೀತಾರಾಂ, ಟಿ.ನರಸಿಂಹಮೂರ್ತಿ ಹಾಗೂ ಡೇರಿಯ ಉಪ ವ್ಯವಸ್ಥಾಪಕ ಬೀರಣ್ಣ, ವಿಸ್ತರಣಾಧಿಕಾರಿಗಳಾದ ಶಂಕರ್ ನಾಗ್, ಗಿರೀಶ್, ಧರ್ಮವೀರ್ ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತಿತರರು ಇದ್ದರು.

    (ಜನಪ್ರತಿನಿಧಿಗಳು ಎಷ್ಟೇ ಸಮಾಜ ಸೇವೆ ಮಾಡಿದರೂ ಚುನಾವಣಾ ಸಂದರ್ಭದಲ್ಲಿ ಹಣ ಹಂಚಿ ಗೆಲ್ಲುವ ವಾತಾವರಣ ಸೃಷ್ಠಿಯಾಗಿದ್ದು, ಇಂತಹ ವ್ಯವಸ್ಥೆ ನಿರ್ಮಾಣವಾಗಿರುವುದು ದುರಾಧೃಷ್ಟಕರ. ಉತ್ತಮ ಜನಸೇವಕರನ್ನು ಜನರೇ ಆಯ್ಕೆ ಮಾಡಿಕೊಳ್ಳುವಂತಹ ಕಾಲ ಬರಬೇಕು.)

    – ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ 

     

    ವರದಿ: ಅಬಿದ್ ಮಧುಗಿರಿ

     

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಅವಕಾಶವಂಚಿತರಾಗಿ ಹತಾಶರಾಗುವ ಬದಲು, ಸಾಧನೆಗೆ ಹಾತೊರೆಯಬೇಕು: ಡಾ.ಕೆ.ಜಯಲಕ್ಷ್ಮಮ್ಮ

    January 23, 2023

    ಮಧುಗಿರಿ: ಭೂತಪ್ಪ ದೇವಾಲಯದ ಬೆಟ್ಟದಲ್ಲಿ ಕರಡಿ ಪತ್ತೆ: ಆತಂಕದಲ್ಲಿ ಸಾರ್ವಜನಿಕರು!

    January 20, 2023

    ಅಲ್ಪಸಂಖ್ಯಾತರ ಮುರಾರ್ಜಿ ಶಾಲೆಯ ಲೋಕಾರ್ಪಣೆಗೊಳಿಸಿದ ಶಾಸಕ ಎಂ.ವಿ.ವೀರಭದ್ರಯ್ಯ

    January 19, 2023
    Our Picks

    ಕೇಂದ್ರ ಬಜೆಟ್- 2023: ಸ್ವಚ್ಛ ನಗರ ರೂಪಿಸಲು ವಿಶೇಷ ಯೋಜನೆ

    February 1, 2023

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು 2023-24ನೇ ಸಾಲಿನ ಬಜೆಟ್ ಮಂಡನೆ

    February 1, 2023

    ಇಂದು ಕೇಂದ್ರ ಬಜೆಟ್—2023 | ರಾಷ್ಟ್ರಪತಿಯನ್ನು ಭೇಟಿ ಮಾಡಿದ ನಿರ್ಮಲ ಸೀತಾರಾಮನ್

    February 1, 2023

    ಸಮಾಜದ ಪ್ರತಿಯೊಂದು ವರ್ಗಕ್ಕೂ ಯಾವುದೇ ಭೇದವಿಲ್ಲದೇ ಕೆಲಸ ಮಾಡಿದೆ ನಮ್ಮ ಸರ್ಕಾರ : ರಾಷ್ಟ್ರಪತಿ ದ್ರೌಪದಿ ಮುರ್ಮು

    January 31, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕುಳಿತು ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಜನ ಜಾಗೃತಿ

    February 1, 2023

    ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ಮತದಾರರಿಗೆ ಆಮೀಷ ಒಡ್ಡುವ ರಾಜಕಾರಣಿಗಳ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಕೆ.ಆರ್.ಎಸ್ ಪಕ್ಷ…

    ಕೇಂದ್ರ ಬಜೆಟ್- 2023: ಸ್ವಚ್ಛ ನಗರ ರೂಪಿಸಲು ವಿಶೇಷ ಯೋಜನೆ

    February 1, 2023

    ಸುಮಲತಾ ಅವರು ಬಿಜೆಪಿ ಸೇರಿದರೇ ಹೆಚ್ಚು ಲಾಭ :ಸಚಿವ ಸುಧಾಕರ್

    February 1, 2023

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು 2023-24ನೇ ಸಾಲಿನ ಬಜೆಟ್ ಮಂಡನೆ

    February 1, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.