nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್

    January 28, 2023

    ಏರ್ ಶೋ: ಜ. 30ರಿಂದ ಫೆ. 20ರವರೆಗೆ ಮಾಂಸ ಮಾರಾಟಕ್ಕೆ ನಿಷೇಧ

    January 28, 2023

    ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ

    January 28, 2023
    Facebook Twitter Instagram
    ಟ್ರೆಂಡಿಂಗ್
    • ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್
    • ಏರ್ ಶೋ: ಜ. 30ರಿಂದ ಫೆ. 20ರವರೆಗೆ ಮಾಂಸ ಮಾರಾಟಕ್ಕೆ ನಿಷೇಧ
    • ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ
    • ಮಗುವನ್ನು ಅಪಹರಿಸಿ ಹಣದ ಡಿಮ್ಯಾಂಡ್:ಪೊಲೀಸರಿಂದ ಒಂದು ವರ್ಷದ ಮಗುವಿನ ರಕ್ಷಣೆ
    • ಪಾಕಿಸ್ತಾನ ರೂಪಾಯಿ ಕುಸಿತ; ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು
    • 32 ವರ್ಷಗಳ ನಂತರ, ಕಾಶ್ಮೀರದಲ್ಲಿ ಥಿಯೇಟರ್ ಹೌಸ್‌ ಫುಲ್
    • ಜಪಾನ್‌ ನ ಆಕಾಶದಲ್ಲಿ ನೀಲಿ ಬೆಳಕಿನ ಸುರುಳಿ; ಹಾರುವ ತಟ್ಟೆಯಲ್ಲಿ ಏಲಿಯನ್‌ ಗಳು
    • ಮುಂದುವರೆದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹೆಣ್ಣುಮಕ್ಕಳನ್ನು ಋಣಮುಕ್ತರನ್ನಾಗಿ ಮಾಡುತ್ತೇವೆ:  ಪಂಚರತ್ನ ರಥ ಯಾತ್ರೆಯಲ್ಲಿ ಹೆಚ್ ಡಿಕೆ
    ಪಾವಗಡ December 5, 2022

    ಹೆಣ್ಣುಮಕ್ಕಳನ್ನು ಋಣಮುಕ್ತರನ್ನಾಗಿ ಮಾಡುತ್ತೇವೆ:  ಪಂಚರತ್ನ ರಥ ಯಾತ್ರೆಯಲ್ಲಿ ಹೆಚ್ ಡಿಕೆ

    By adminDecember 5, 2022No Comments2 Mins Read
    kumaraswamy

    ಪಾವಗಡ : ರಾಜ್ಯದಲ್ಲಿ 2023 ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಾವಗಡ ತಾಲೂಕು ಸಮಗ್ರ ಅಭಿವೃದ್ಧಿಗೆ ಹಾಗೂ ಆರ್ಥಿಕವಾಗಿ ಸದೃಢವಾಗಲು ಶ್ರಮಿಸುತ್ತೇವೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಶ್ವಾಸನೆ ನೀಡಿದರು.

    ಪಾವಗಡ ಪಟ್ಟಣದ ಮುಖಂಡ ತಿಮ್ಮಾರಾಜುರವರ ಮನೆಯಲ್ಲಿ ಮಧ್ಯಾಹ್ನದ ಊಟ ಸೇವಿಸಿ ನಂತರ ತುಮಕೂರು ರಸ್ತೆಯಲ್ಲಿರುವ ಕನಕದಾಸರ ಪ್ರತಿಮೆಗೆ 42 ಅಡಿವುಳ್ಳ ಬೃಹತ್ ಆಕಾರದ ಕಂಬಳಿ ಹಾರ ಹಾಕಿ ನಂತರ ಶನೇಶ್ವರ ಸರ್ಕಲ್ ಸಾರ್ವಜನಿಕ ಉದ್ದೇಶ ಮಾತನಾಡಿದ ಅವರು ಈ ಭಾಗದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಎಂ. ತಿಮ್ಮರಾಯಪ್ಪ ಅವರಿಗೆ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚಿಸಲು ನಿಮ್ಮೆಲ್ಲರ ಆಶೀರ್ವಾದ ಮುಖ್ಯ ಎಂಬುದಾಗಿ ತಿಳಿಸಿದರು.

    ಪಾವಗಡ ಘಟಕ ಸರ್ಕಾರಿ ನೌಕರರು ಮಾಜಿ ಮುಖ್ಯಮಂತ್ರಿಗಳಿಗೆ  ಹೆಚ್.ಡಿ.ಕುಮಾರ್ ಸ್ವಾಮಿಯವರಿಗೆ ಒ.ಪಿ.ಎಸ್.ವಜಾ ಗೊಳಿಸಲು ಮನವಿ ಪತ್ರ ಸಲ್ಲಿಸಿದರು ನಂತರ ನಮ್ಮ ಸರ್ಕಾರ ಬಂದ ತಕ್ಷಣವೇ ನಿಮ್ಮ ಸಮಸ್ಯೆ ಬಗ್ಗೆ ಹರಿಸುವುದಾಗಿ ಆಶ್ವಾಸನೆ ನೀಡಿದರು.

    ಈ ಭಾಗದಲ್ಲಿ ಹದಿನೈದು ಸಾವಿರ ಕುಟುಂಬಗಳಿಗೆ 82 ಕೋಟಿ ಸಾಲ ಮನ್ನಾ ಮಾಡಲಾಗಿದೆ. 15 ಸಾವಿರ ಕುಟುಂಬದ ಸದಸ್ಯರು ಅರವತ್ತು ಸಾವಿರ ಆಗುತ್ತಾರೆ. ಅವರು ಮತ ಹಾಕಿದರೆ ಸಾಕು ಈ ಭಾಗದಲ್ಲಿ  ಜೆಡಿಎಸ್ ಅಭ್ಯರ್ಥಿ ಗೆಲ್ಲುವುದು ಸಾಧ್ಯವಿದೆ ಎಂದು ಅವರು ಹೇಳಿದರು.

    ಪಂಚರತ್ನ ರಥ ಯಾತ್ರೆ ನಂತರ ಎಂದು ಕಾಣದಂತಹ ಮಳೆ  ಈ ಭಾಗದಲ್ಲಿ ಬಂದಿರೋದು ಬಹಳ ಸಂತೋಷ ತಂದಿದೆ. ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ ಎಂದರು.

    ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ನಿರೀಕ್ಷೆಯಿದ್ದು ಸಂಪೂರ್ಣ ಸರ್ಕಾರ ರಚನೆಯಾದ 24 ಗಂಟೆಯಲ್ಲಿ ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ, ಹೆಣ್ಣುಮಕ್ಕಳನ್ನು ಋಣಮುಕ್ತರನ್ನಾಗಿ  ಮಾಡಲಾಗುವುದೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದರು.

    ಪಂಚರತ್ನ ಯೋಜನೆಯ ರಥಯಾತ್ರೆಯೊಂದಿಗೆ ಪಾವಗಡ ಆಗಮಿಸಿದ ಅವರನ್ನು ಗಡಿಭಾಗದಿಂದಲೂ ಮಹಿಳೆಯರು ಆರತಿ ಮಾಡಿದರೆ, ಕಾರ್ಯಕರ್ತರು ಹೂವಿನ ಸುರಿಮಳೆಯೊಂದಿಗೆ ಸ್ವಾಗತಿಸಿದರು. ಪಟ್ಟಣದಲ್ಲಿ   ಮಾತನಾಡಿದ ಕುಮಾರಸ್ವಾಮಿ ಈ ಕ್ಷೇತ್ರದ ಋಣ ನಮ್ಮ ಮೇಲಿದೆ. ಕಳೆದ ಬಾರಿ ಪಾವಗಡ ಅಭಿವೃದ್ಧಿಗೆ ಮುಂದಾಗುವಾಗಲೇ ನನ್ನ ಸರಕಾರವನ್ನು ಕುತಂತ್ರದಿಂದ  ಕಿತ್ತು ಹಾಕಿದರು. ಆದರೂ 25 ಸಾವಿರ ಕೋಟಿ ಸಾಲ ಮನ್ನಾ   ಮಾಡಿದ್ದು ಕ್ಷೇತ್ರಕ್ಕೆ  82  ಕೋಟಿ ಅನುದಾನದ ಜೊತೆಗೆ ಕೈಗಾರಿಕಾ ವಲಯ ಮಂಜೂರು ಮಾಡಿದೆ ಎಂದರು.

    ಈಗ 2 ಬಾರಿ ಹೃದಯ ಚಿಕಿತ್ಸೆಯಾಗಿದ್ದರೂ ಬಡವರ ಬದುಕು ಹಸನುಗೊಳಿಸಲು ದಿನದ 18 ಗಂಟೆ ಹೋರಾಟ ಮಾಡುತ್ತಿದ್ದೇನೆ. ಪಂಚರತ್ನ ಯೋಜನೆಯ ಮೂಲಕ ಎಲ್ಲರಿಗೂ 50 ಲಕ್ಷದವರೆಗೂ ಉಚಿತ ಆರೋಗ್ಯ ರಕ್ಷೆ, ಮಕ್ಕಳಿಗೆ 1 ರಿಂದ 12 ತರಗತಿಯವರೆಗೂ ಉಚಿತ ಶಿಕ್ಷಣ, ಯುವ ಜನತೆಗೆ ಉದ್ಯೋಗ, ಪ್ರತಿ ಕುಟುಂಬಕ್ಕೂ 10 ಲಕ್ಷದ ಮನೆ, ಹಾಗೂ ಪ್ರತಿ ಗ್ರಾ.ಪಂ.ಮಟ್ಟದಲ್ಲಿ 24/7 ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ಬಗ್ಗೆ ಸರಕಾರಕ್ಕೆ ಚಾಟಿ ಬೀಸುತ್ತೇನೆ ಎಂದರು. ಈ ಬಾರಿ ಧರ್ಮ ಜಾತಿಬಿಟ್ಟು ಈ ನಿಮ್ಮ ಮನೆ ಮಗನಿಗೆ ಈ ಯೋಜನೆಗಳ ಜಾರಿಗೆ ನನಗೆ ಆಶೀರ್ವಾದವನ್ನು ಮಾಡಿ ಎಂದರು.

    ಈ ವೇಳೆ ಮಾಜಿ ಶಾಸಕ ಕೆ.ಎಂ.ತಿಮ್ಮಾರಾಯಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ಸೊಗಡು ವೆಂಕಟೇಶ್, ತಿಮ್ಮರೆಡ್ಡಿ. ವೈ ಎನ್.ಎಚ್, ಹೋಬಳಿ ಅಧ್ಯಕ್ಷ ಸತ್ಯ ನಾರಾಯಣ, ಲೆಫ್ಟ್ ನಾಗರಾಜ, ರಾಮಚಂದ್ರಪ್ಪ, ಗ್ರಾಪಂ ಅಧ್ಯಕ್ಷ ಹನುಮಕ್ಕ , ಮುಖಂಡರುಗಳಾದ ನಾಗಲಾಪುರ ರೆಡ್ಡಿ ಮಂಜುನಾಥ, ಲೆಜೆಂಡ್ ವೆಂಕಟೇಶ್, ಓಬಳೇಶ್ ಸೇರಿದಂತೆ  ಸಾವಿರಾರು ಜನ ನಾಗಲಾಪುರ   ಹಾಗೂ ತಾಲೂಕಿನ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದರು.

    ವರದಿ: ನಂದೀಶ್ ನಾಯ್ಕ್, ಪಾವಗಡ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಪಾವಗಡ: ನದಿಗೆ ಬಿದ್ದು ಯುವಕನ ದಾರುಣ ಸಾವು

    January 27, 2023

    ಗಣರಾಜ್ಯೋತ್ಸವ: ಅಂಬೇಡ್ಕರ್ ಫೋಟೋ ಇಡದೇ ಪುರಸಭಾ ಅಧಿಕಾರಿಗಳ ಉದ್ಧಟತನದ ವರ್ತನೆ

    January 26, 2023

    ರಸ್ತೆ ನಿಯಮ ಪಾಲಿಸಿ, ಅಮೂಲ್ಯವಾದ ಜೀವಗಳನ್ನು ಉಳಿಸಿ: ಸಿ.ಐ.ಅಜಯ್ ಸಾರಥಿ ಕರೆ

    January 23, 2023
    Our Picks

    ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ

    January 28, 2023

    ಪಾಕಿಸ್ತಾನ ರೂಪಾಯಿ ಕುಸಿತ; ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು

    January 28, 2023

    32 ವರ್ಷಗಳ ನಂತರ, ಕಾಶ್ಮೀರದಲ್ಲಿ ಥಿಯೇಟರ್ ಹೌಸ್‌ ಫುಲ್

    January 28, 2023

    ಜಪಾನ್‌ ನ ಆಕಾಶದಲ್ಲಿ ನೀಲಿ ಬೆಳಕಿನ ಸುರುಳಿ; ಹಾರುವ ತಟ್ಟೆಯಲ್ಲಿ ಏಲಿಯನ್‌ ಗಳು

    January 28, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್

    January 28, 2023

    ತುಮಕೂರು: ಕುರುಬ ಸಮುದಾಯದ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಶ್ವಥ್ ನಾರಾಯಣ್ ರವರು ಕಾಂಗ್ರೆಸ್…

    ಏರ್ ಶೋ: ಜ. 30ರಿಂದ ಫೆ. 20ರವರೆಗೆ ಮಾಂಸ ಮಾರಾಟಕ್ಕೆ ನಿಷೇಧ

    January 28, 2023

    ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ

    January 28, 2023

    ಮಗುವನ್ನು ಅಪಹರಿಸಿ ಹಣದ ಡಿಮ್ಯಾಂಡ್:ಪೊಲೀಸರಿಂದ ಒಂದು ವರ್ಷದ ಮಗುವಿನ ರಕ್ಷಣೆ

    January 28, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.