ಕಾಂಗ್ರೆಸ್ ನವರಿಗೆ ಕರ್ನಾಟಕದಲ್ಲಿ ಹತ್ತು ಸಾವಿರ ಕೋಟಿ ರೂ ಲೂಟಿ ಮಾಡುವ ಎಟಿಎಂ ಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ.
ಬಂಟ್ವಾಳದಲ್ಲಿ ನಡೆದ ಬಿಜೆಪಿ ಶಾಸಕ ರಾಜೇಶ್ ನಾಯಕ್ ಗ್ರಾಮವಿಕಾಸ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಕರ್ನಾಟಕದ ಮೇಲೇ ಕಣ್ಣು. ಲೋಕಸಭಾ ಚುನಾವಣೆಗೆ ಇಲ್ಲಿನ ಹಣ ಬೇಕು, ಅದಕ್ಕಾಗಿ ಏನಾದರೂ ಸುಳ್ಳು ಹೇಳಿ ಕರ್ನಾಟಕ ಗೆಲ್ಲಬೇಕು. ಆ ಮೂಲಕ ಲೋಕಸಭಾ ಚುನಾವಣೆ ಗೆಲ್ಲುವುದು ಕಾಂಗ್ರೆಸ್ ಯೋಜನೆ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಭಾರತದಲ್ಲೇ ಬಿಜೆಪಿಗೆ ಅತೀ ಪ್ರಮುಖ ಜಾಗ. ಬಂಟ್ವಾಳ ಒಂದು ವಿಚಿತ್ರ ಕ್ಷೇತ್ರ, ಇಲ್ಲಿಗೆ ಎರಡು ಇತಿಹಾಸ ಇದೆ. ಮೊದಲ ಇತಿಹಾಸದಲ್ಲಿ ಬಂಟ್ವಾಳವನ್ನು ಕೋಮುಗಲಭೆ ಅಧಿಕ ಇರೋ ಜಾಗ ಅಂತಾರೆ. ಒಂದು ಕೊಲೆಗೆ 48 ಗಂಟೆಯಲ್ಲಿ ರಿವೆಂಜ್ ಮರ್ಡರ್ ಆಗುತ್ತೆ. ಪೊಲೀಸರು ಬರ್ತಾರೆ, ಪೊಲಿಟಿಷಿಯನ್ ಬಂದು ಭಾಷಣ ಮಾಡಿ ಮತ್ತೆ ತುಪ್ಪ ಸುರೀತಾರೆ. ಇದರ ಮಧ್ಯೆ ಆಟೋ ಚಾಲಕರು, ವ್ಯಾಪಾರಿಗಳು ಸೇರಿ ಹಲವರು ಕೋಮು ಗಲಭೆಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಇನ್ನೊಂದು ಇತಿಹಾಸ ಬಂಟ್ವಾಳದಲ್ಲಿ ಈ ಐದು ವರ್ಷದಲ್ಲಿ ಸೃಷ್ಟಿಯಾಗಿದೆ ಎಂದಿದ್ದಾರೆ.
ಕರ್ನಾಟಕದಲ್ಲೂ ಮತ್ತೆ ಬಿಜೆಪಿ ಸರ್ಕಾರ ಬರುತ್ತೆ, ಬಿಜೆಪಿ ಸಿಎಂ ಬರ್ತಾರೆ. ತಮಿಳುನಾಡಿನಲ್ಲಿ ಡಿಎಂಕೆ, ಕಾಂಗ್ರೆಸ್ ಹೇಳಿದ ಸುಳ್ಳುಗಳನ್ನೇ ಇಲ್ಲಿ ಕಾಂಗ್ರೆಸ್ ಹೇಳ್ತಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಹೆಣ್ಮಗಳಿಗೆ ಒಂದು ಸಾವಿರ ಕೊಡ್ತೇವೆ ಅಂತ ಹೇಳಿತ್ತು. ಆದರೆ 21 ತಿಂಗಳಾದರೂ ಒಬ್ಬಳೇ ಹೆಣ್ಮಗಳಿಗೆ ಹಣ ಬಂದಿಲ್ಲ. ಅದೇ ಭರವಸೆಯನ್ನ ಪ್ರಿಯಾಂಕ್ ಗಾಂಧಿ, ಕಾಂಗ್ರೆಸ್ ಇಲ್ಲಿ ಹೆಣ್ಮಗಳಿಗೆ ಎರಡು ಸಾವಿರ ಕೊಡ್ತೀವಿ ಅಂತಿದಾರೆ. ತಮಿಳುನಾಡಿನಲ್ಲಿ ಸಾವಿರಾರು ಕೋಟಿ ಸಾಲದ ಬಜೆಟ್ ಮಂಡಿಸಲಾಗಿದೆ. ಕರ್ನಾಟಕದ ಜನಗಳಿಗೂ ನಾನು ಈ ವಿಚಾರದಲ್ಲಿ ಎಚ್ಚರಿಸ್ತಾ ಇದೀನಿ. ಎರಡು ಸಾವಿರ ಹಣ ಕೊಡಲು ಸಾಧ್ಯವೇ ಇಲ್ಲ. ಮಾತನಾಡೋದು, ಘೋಷಣೆ ಮಾಡೋದು ದೊಡ್ಡ ವಿಷಯವೇ ಅಲ್ಲ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy