ಎಲ್ಲರೂ ಉತ್ತಮವಾದ ದೇಹವನ್ನು ಹೊಂದಲು ಇಷ್ಟಪಡುತ್ತಾರೆ. ದೇಹದಲ್ಲಿ ಬೊಜ್ಜು ಬಾರದಂತೆ ತಡೆಯಲು ಕೆಲವರು ಇನ್ನಿಲ್ಲದ ಕಸರತ್ತನ್ನು ನಡೆಸುತ್ತಾರೆ. ಆದರೆ ತಮ್ಮ ದಿನಚರಿಗಳಲ್ಲಿ ಬದಲಾವಣೆ ಮಾಡಿಕೊಳ್ಳದೇ ದೇಹಕ್ಕೆ ಕಸರತ್ತು ನೀಡಿದರೆ ಯಾವುದೇ ಪ್ರಯೋಜನವಿಲ್ಲ.
ಹೌದು..! ನಮ್ಮ ದೇಹ ಬೊಜ್ಜು ಮುಕ್ತವಾಗಬೇಕಾದರೆ, ನಾವು ವ್ಯಾಯಾಮವನ್ನು ಮಾಡಬೇಕು, ಕೇವಲ ವ್ಯಾಯಾಮ ಮಾಡಿದರೆ ಸಾಲದು ನಮ್ಮ ಆಹಾರದಲ್ಲೂ ನಿಯಂತ್ರಣ ಇರಬೇಕು. ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪಾದನೆ ಮಾಡುವ ಆಹಾರಗಳನ್ನು ಸೇವಿಸಲೇ ಬಾರದು. ಅದರ ಜೊತೆಗೆ ನಮ್ಮ ದಿನಚರಿಯನ್ನು ಕೂಡ ಬದಲಾವಣೆ ಮಾಡಬೇಕು.
ತಡವಾಗಿ ಮಲಗುವುದು ಮತ್ತು ಬೆಳಗ್ಗೆ ತಡವಾಗಿ ಏಳುವುದು ನಮ್ಮ ದೇಹಕ್ಕೆ ಉತ್ತಮವಲ್ಲ, ಆದಷ್ಟು ಬೇಗನೇ ಮಲಗಿ ಬೇಗನೇ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಹೆಚ್ಚು ಹೊತ್ತು ಆಲಸ್ಯದಿಂದ ಮಲಗಿಕೊಳ್ಳುವುದು ಉತ್ತಮ ಅಭ್ಯಾಸವಲ್ಲ, ಇದು ನಮ್ಮ ದೇಹದ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ನಮ್ಮ ದೇಹದ ಚಯಾಪಚಯ ವ್ಯವಸ್ಥೆ ಇದರಿಂದ ಕೆಡುತ್ತದೆ.
ನಮ್ಮ ದೇಹಕ್ಕೆ ದಿನಕ್ಕೆ 7 ಲೋಟ ನೀರು ಬೇಕಾಗುತ್ತದೆ. ನೀರು ಕುಡಿಯದೇ ಇದ್ದರೆ, ಹೊಟ್ಟೆಯ ಸುತ್ತ ಕೊಬ್ಬು ಸಂಗ್ರಹವಾಗಲು ಆರಂಭವಾಗುತ್ತದೆ. ನಿಮ್ಮ ಬೆಳಗ್ಗಿನ ದಿನಚರಿಯಲ್ಲಿ ವ್ಯಾಯಾಮವನ್ನು ಮರೆಯಬೇಡಿ, ವ್ಯಾಯಾಮ ಮಾಡುವುದರಿಂದ ನಿಮ್ಮ ಇಡೀ ದಿನವು ಅತ್ಯಂತ ಉಲ್ಲಾಸದಾಯಕವಾಗಿರುತ್ತದೆ. ಆದಷ್ಟು ಸಕ್ಕರೆಯಿಂದ ದೂರವಿರುವುದು ಉತ್ತಮ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1