ತುಮಕೂರು: ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಧಾರ್ಮಿಕ ಗುರುಗಳಾದ ಅಲ್ ಹಾಜ್ ಹಫೀಜ್ ಮೊಹಮ್ಮದ್ ಆಜಂ ಶಾ ಖಾದ್ರಿ (ರ) ಇವರ ಸ್ಮರಣಾರ್ಥ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ತುಮಕೂರು ನಗರದ ಚಿಕ್ಕಪಟೆಯ ಅತ್ತಿಮಬ್ಬೆ ವಿದ್ಯಾ ಮಂದಿರ ಹೈಯರ್ ಪ್ರೈಮರಿ ಶಾಲೆಯಲ್ಲಿಆಯೋಜಿಸಲಾಯಿತು.
ಜಯ ಕರ್ನಾಟಕ ಜನಪರ ವೇದಿಕೆ ಹಾಗೂ ಟಿ.ಹೆಚ್.ಎಸ್. ಆಸ್ಪತ್ರೆ ಮತ್ತು ನೇತ್ರದೀಪ ಹೈ ಆಸ್ಪತ್ರೆ ಇವರ ಸಹಾಯದಿಂದ ಹಮ್ಮಿಕೊಳ್ಳಲಾದ ಈ ಬೃಹತ್ ಉಚಿತ ಆರೋಗ್ಯ ಶಿಬಿರವನ್ನುದ್ದೇಶಿಸಿ ಮಾತನಾಡಿದ ಜಯ ಕರ್ನಾಟಕ ಜನಪರ ವೇದಿಕೆಯ ಮುಖಂಡರು ಮಾತನಾಡಿ, ಟಿ.ಹೆಚ್.ಎಸ್. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟಿ.ಹೆಚ್.ಎಸ್.ಡಯಾಸ್ಕೋಸ್ಟಿಕ್ ಸೆಂಟರ್ ಮತ್ತು ನೇತ್ರದೀಪ್ ಕಣ್ಣಿನ ಆಸ್ಪತ್ರೆ ಮತ್ತು ವಿವಿಧ ತಜ್ಞ ವೈದ್ಯಕೀಯ ಸೌಲಭ್ಯವಿರುವ ಎಲ್ಲಾ ವರ್ಗದ ಜನರಿಗೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡುತ್ತಿರುವ ಆಸ್ಪತ್ರೆಯಾಗಿದೆ. ಈ ಸಂಸ್ಥೆಯಿಂದ ಹಲವಾರು ರೋಗಿಗಳು ಇದರ ಸೌಲಭ್ಯ ಪಡೆದಿರುತ್ತಾರೆ, ಆದ್ದರಿಂದ ಶಿಬಿರದ ಪ್ರಯೋಜನ ಪಡೆದು ಶಿಬಿರ ಯಶಸ್ವಿಯಗಲು ಸಹಕರಿಸಬೇಕಾಗಿ ಕೋರುತ್ತೇವೆ ಎಂದರು.
ಆರೋಗ್ಯ ಶಿಬಿರದಲ್ಲಿ ಬಿ.ಪಿ, ಬ್ಲಡ್ ಶುಗರ್, ವೈಟಲ್ಸ್, ಎತ್ತರ, ತೂಕ, ಸ್ಟಾಸುರೇಶನ್(ಆಕ್ಸಿಜನ್ ಲೆವೆಲ್), ಪಲ್ಸ್ ಹಾಗೂ ಇಸಿಜಿ ಮತ್ತು ಜನರಲ್ ಮೆಡಿಸಿನ್, ಮಧುಮೇಹ ತಜ್ಞರು(ಶುಗರ್), ಸ್ತ್ರೀ ರೋಗ ಮತ್ತು ಪ್ರಸೂತಿಶಾಸ್ತ್ರ ತಜ್ಞರು, ಚರ್ಮರೋಗ ವೈದ್ಯರು, ಕಿವಿ ಮೂಗು ಗಂಟಲು ತಜ್ಞರು, ನೇತ್ರ ತಜ್ಞರು, ಹೃದ್ರೋಗ ತಜ್ಞರು (ಹಾರ್ಟ್), ಮೂತ್ರಶಾಸ್ತ್ರಜ್ಞರು, ಗ್ಯಾಸ್ಟೋಎಂಟರಾಲಜಿಸ್ಟ್, ಮೂಳೆ ತಜ್ಞರು, ಮೂತ್ರಪಿಂಡ ಕಾಯಿಲೆ ತಜ್ಞರು(ಕಿಡ್ನಿ ಸ್ಟೋನ್), ದಂತ ವೈದ್ಯರು ಇನ್ನು ಮುಂತಾದ ತಜ್ಞರು ಲಭ್ಯವಿದ್ದರು.
ಆರೋಗ್ಯ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಾಸಕರದ ಜ್ಯೋತಿ ಗಣೇಶ್, ಕೆಪಿಸಿಸಿ ಮುಖಂಡರಾದ ಮುರುಳಿಧರ್ ಹಾಲಪ್ಪ, ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್, ಜಲ್ಜಾ ಜೈನ್, ಡಾ. ಸುರೇಶ್ ಬಾಬು, ಕ್ರೈಂ ಸಬ್ ಇನ್ಸ್ ಪೆಕ್ಟರ್ ಭಾರತಿ ಹಾಗೂ 4ನೇ ವಾರ್ಡಿನ ಮುಖಂಡರಾದ ಮಹೇಶ್ ಬಾಬು ಆಗಮಿಸಿದರು.
ಜಯ ಕರ್ನಾಟಕ ಜನಪರ ವೇದಿಕೆಯ ಯುವ ಮುಖಂಡರಾದ ಜಯಪ್ರಕಾಶ್ ಜೆ.ಪಿ., ಪ್ರವೀಣ್ ಶಿಂಧೆ, ಶ್ರೀಧರ್ ಟಿ.ಎಂ., ಮೊಹಮ್ಮದ್ ಯೂನುಸ್, ಕಿರಣ್, ವೆಂಕಿ ಪಾವಗಡ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1