ಬೆಳಗಾವಿ: ಪ್ರಜಾಪ್ರಭುತ್ವದ ಅಡಿಯಲ್ಲಿ 2 ಬಾರಿ ಮುಖ್ಯಮಂತ್ರಿಗಳಾಗಿ ರಾಜ್ಯವನ್ನಾಳಿದ ಕುಮಾರಸ್ವಾಮಿಯವರ ಬಾಯಿಯಲ್ಲಿ ಜಾತಿಯವಾಸನೆ ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಅಕ್ರೋಶ ವ್ಯಕ್ತಪಡಿಸಿದ್ದಾರೆ
ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ಜಾತಿ ಮತ ಪಂಥ ಬಡವ ಬಲ್ಲಿದ ಎಂಬವದನ್ನು ಮೀರಿ ಜನಸಾಮಾನ್ಯರೆ ಸೇವೆ ಮಾಡುವ ಮೂಲಕ ಕೇಂದ್ರ ಸಚಿವರಾದ ಪ್ರಲ್ಲಾದ ಜೋಶಿಯವರು ಬಿಜೆಪಿಯಲ್ಲಿ ಅಗ್ರ ನಾಯಕರ ಪಂಕ್ತಿಯಲ್ಲಿ ಇದ್ದಾರೆ ಇದನ್ನು ಸಹಿಸದೆ ಹಾಗೂ ಸೋಲಿನ ಭಯದಲ್ಲಿ ಹತಾಷರಾಗಿ ಜಾತಿಯನ್ನು ವಿನಕಾರಣ ರಾಜಕೀಯದಲ್ಲಿ ಏಳೆದು ತಂದಿದ್ದಾರೆ.
ರಾಜಕಾರಣದಲ್ಲಿ ಟೀಕೆಗಳು ಸಾಮಾನ್ಯ ಆದರೆ ಜಾತಿಗಳನ್ನು ನಿಂದಿಸುವದು ರಾಜಕಾರಣಕ್ಕೆ ಬಳಸಿಕೊಳ್ಳುವದು ಸರಿಯಾದ ಮಾರ್ಗವಲ್ಲ. ಜನಪ್ರತಿನಿಧಿಗಳು ಆದವರು ಇವುಗಳನೆಲ್ಲ ಮೀರಿ ಬೆಳೆಯಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೆಂದು ಬಾಯಿ ಚಪಲಕ್ಕಾಗಿ ಇನ್ನೊಬ್ಬರನ್ನ ತೃಪ್ತಿ ಪಡಿಸುವ ಉದ್ದೇಶಕ್ಕಾಗಿ ಜಾತಿಯ ಹೆಸರಿನಲ್ಲಿ ಮಾತನಾಡವದು ಸರಿಯಲ್ಲ. ಒಂದು ಅಧಿಕಾರ ಅನುಭವಿಸಿದ ವ್ಯಕ್ತಿಗಳೆ ಇಂತಹ ಕಿಳುಮಟ್ಟಕ್ಕೆ ಇಳಿಯಬಾರದು. ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಮೋದಿಜಿಯವರ ಜೋತೆಯಲ್ಲಿ ಉತ್ತಮ ಬಾಂಧವ್ಯ ಹೊಂದುವದರೊಂದಿಗೆ ಬಿಜೆಪಿಯಲ್ಲಿ ಪ್ರಭಾವ ಸಚಿವರಾಗಿ ರಾಜ್ಯಕ್ಕೆ ಬರುವ ಎಲ್ಲ ಯೋಜನೆ ಸೌಲಭ್ಯಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಂತವರನ್ನ ಬ್ರಾಹ್ಮಣ ಜಾತಿಗೆ ಸೀಮಿತಗೊಳಿಸಿ ಮಾತನಾಡಿರುವ ಕುಮಾರ ಸ್ವಾಮಿಗಳ ಹೇಳಿಯನ್ನು ಉಗ್ರವಾಗಿ ಖಂಡಿಸುತ್ತೆವೆ.
ಅವರು ಕೂಡಲೆ ಆಡಿರುವ ಶಬ್ದಗಳನ್ನು ಹಿಂದಕ್ಕೆ ಪಡೆಯಬೇಕು ಮತ್ತು ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾದಿತು ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಜಿಲ್ಲಾ ವಕ್ತಾರ ಸಂಜಯ ಕಂಚಿ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ನೀತಿನ ಚೌಗಲೆ, ವೀರಭದ್ರಯ್ಯ ಪುಜಾರ ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy