ಅಥಣಿ: ಶಾಲೆಗೆ ಹೋಗಿದ್ದ ಬಾಲಕ ಚಿಕ್ಕಪ್ಪನ ಜೊತೆ ಟ್ರ್ಯಾಕ್ಟರ್ ನಲ್ಲಿ ಬರೋವಾಗ ಬಿದ್ದು ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸ್ಥಳದಲ್ಲೆ ಸಾವನ್ನಪ್ಪಿರುವ ದಾರುಣ ಘಟನೆ ಅಥಣಿ ತಾಲ್ಲೂಕಿನ ತೆವರಗಟ್ಟಿ ಗ್ರಾಮದಲ್ಲಿ ನಡೆದಿದೆ
ಸುದರ್ಶನ ನಿಲಜಗಿ(7) ಮೃತ ಬಾಲಕನಾಗಿದ್ದು ಶಾಲೆಗೆಂದು ಹೋಗಿ ಶವವಾಗಿ ಬಂದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಚಿಕ್ಕಪ್ಪನ ಜತೆ ಟ್ರಾಕ್ಟರ್ ನಲ್ಲಿ ಮನೆಗೆ ಬರುತ್ತಿದ್ದ ಬಾಲಕ ಟ್ರ್ಯಾಕ್ಟರ್ ನಿಂದ ಇಳಿಯುವ ಸಂದರ್ಭದಲ್ಲಿ ಬಾಲಕನ ಬ್ಯಾಗ್ ಟ್ರ್ಯಾಕ್ಟರಿಗೆ ಸಿಲುಕಿ ಕೆಳಗೆ ಬಿದ್ದಿದ್ದಾನೆ. ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy