ಸಿರಿಯಾ : ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪ ಸಂಭವಿಸಿ ನರಕಯಾತನೆ ಶುರುವಾಗಿದ್ದು ಸಾವು ನೋವುಗಳು ನೋಡುಗರನ್ನು ಬೆಚ್ಚಿಬೀಳಿಸುತ್ತಿವೆ. ಸುಮಾರು 9 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 15 ರಿಂದ 20 ಸಾವಿರಕ್ಕೂ ಹೆಚ್ಚು ಮಂದಿ ದುರಂತದಲ್ಲಿ ಗಾಯಗೊಂಡಿದ್ದು ಪ್ರತಿಯೊಂದು ದೃಷ್ಯಗಳು ಮನಕಲುಕುತ್ತಿದ್ದು ಇಬ್ಬರು ಕಂದಮ್ಮಗಳ ನರಳಾಟ ನೋಡುಗರ ಮನ ಕರಗುವಂತೆ ಮಾಡಿದೆ.
ಸಿರಿಯಾದಲ್ಲಿ ಭೂಕಂಪದ ಸಂಭವಿಸಿ ಹಲವು ಕಟ್ಟಡಗಳು ಕುಸಿದಿವೆ. ಈ ಪುಟಾಣಿಗಳು ಆ ಕಟ್ಟಡಗಳ ಕೆಳಗೆ ಬರೋಬ್ಬರಿ 17 ಗಂಟೆಗಳ ಕಾಲ ಸಿಲುಕಿ ಒದ್ದಾಡಿವೆ. ನೀರು, ಆಹಾರ ಇಲ್ಲದ ಈ ಇಬ್ಬರೂ ಮಕ್ಕಳು ಅವಶೇಷಗಳಡಿಯಲ್ಲಿ 17 ಗಂಟೆ ಕಳೆದು ತನ್ನನ್ನು ಮತ್ತು ತನ್ನ ತಮ್ಮನ್ನು ಕಾಪಾಡುವಂತೆ ಬೇಡಿ ಕೊಳ್ಳುತ್ತಿರುವ ಘಟನೆ ಮನಕಲುಕುವಂತಿದೆ.
ಈ ಏಳು ವರ್ಷದ ಬಾಲಕಿ ಹಾಗೂ ಆಕೆಯ ಕಿರಿಯ ಸಹೋದರ ಕೂಡ ಸಿಲುಕಿದ್ದಾರೆ. ಆದರೆ ಇಂತಹ ಕಷ್ಟದ ಸಂದರ್ಭದಲ್ಲೂ ತಮ್ಮನ ಜವಾಬ್ದಾರಿ ತೆಗೆದುಕೊಂಡಿರುವ ಬಾಲಕಿ, ಪುಟ್ಟ ಮಗುವಿನ ತಲೆಯನ್ನು ತನ್ನ ಕೈಯಲ್ಲಿ ಹಿಡಿಕೊಂಡು ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾಳೆ. ರಕ್ಷಣಾ ಕಾರ್ಯಾಚರಣೆ ವೇಳೆ ಮನ ಕಲಕುವ ಘಟನೆ ನಡೆದಿದ್ದು, ಇವರನ್ನು ನೋಡಿದವರು ರಕ್ಷಣಾ ತಂಡದ ಗಮನಕ್ಕೆ ತಂದಿದ್ದಾರೆ. ಇದೀಗ ಈ ಫೋಟೋವನ್ನು ಯುಎನ್ ಪ್ರತಿನಿಧಿ ಮೊಹಮ್ಮದ್ ಸಫಾ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy