ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ. ಬಿಜೆಪಿಗೆ ಮುಜುಗರ ತರುವ ಕೆಲಸ ಮಾಡುವುದಿಲ್ಲ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿಯಾಗಿ ವಾಪಸ್ ಬೆಂಗಳೂರಿಗೆ ಹೋಗುತ್ತೇನೆ. ನನ್ನ ಇತಿಮಿತಿಯಲ್ಲಿ ನಾನು ಜೀವನ ಮಾಡುತ್ತಿದ್ದೇನೆ. ನನ್ನಿಂದ ಬಿಜೆಪಿಗೆ ಅಪಚಾರವಾಗಬಾರದು. ನಾನು ಬಿಜೆಪಿ ಬಿಡಲ್ಲ. ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ವಿಜಯೇಂದ್ರ ವಿರುದ್ದ ಅಸಮಾಧಾನ ಕುರಿತು ಪತ್ರರ್ಕತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸೋಮಣ್ಣ, ವಿಜಯೇಂದ್ರ ಯಾರು..? ಅವರಿಗೂ ನನಗೂ ಏನು ಸಂಬಂಧ. ಬಿಎಸ್ ವೈ ಪುತ್ರ ವಿಜಯೇಂದ್ರ ಗೆ 40 ವರ್ಷ ನನಗೆ 70 ವರ್ಷ ವಿಜಯೇಂದ್ರ ಬಗ್ಗೆ ನನ್ನ ಪುತ್ರನಿಗೆ ಅಸಮಾಧಾನವಿದ್ದರೇ ಅವನನ್ನೇ ಕೇಳಿ ಎಂದು ವಿ.ಸೋಮಣ್ಣ ಹೇಳಿದರು .
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA