ತುರುವೇಕೆರೆ: ಹಾಲಿ ಶಾಸಕರಾಗಿರುವ ಮಸಾಲ ಜೈರಾಮ್ ರವರು ಮಹಾನ್ ಸುಳ್ಳುಗಾರ, ಯಾರೋ ಹುಟ್ಟಿಸಿದ ಮಗುವಿಗೆ ಯಾರದ್ದೋ ಹೆಸರು ಎಂದು ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಹಾಲಿ ಶಾಸಕ ಮಸಾಲ ಜೈರಾಮ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಹಾಲಿ ಶಾಸಕರ ಸಾಧನೆ ನಮ್ಮ ತಾಲೂಕಿನಲ್ಲಿ ಶೂನ್ಯವಾಗಿದೆ, ನನ್ನ ಅಧಿಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅದರಲ್ಲಿ ಕಮಿಷನ್ ಹೊಡೆಯುವುದೇ ದೊಡ್ಡ ಸಾಧನೆಯಾಗಿದೆ. ಆದರೆ ಕಣ್ಣೀರಿಟ್ಟು ನಾನೇ ಮಂಜೂರು ಮಾಡಿಸಿದೆ ಎಂದು ಜನರನ್ನು ನಂಬಿಸಿ ಗಿಮಿಕ್ ಮಾಡುತ್ತಿದ್ದಾರೆ, ಅವರಿಗೂ ಇದೆಲ್ಲದರ ಅರಿವಿದೆ ಎಂದರು.
ಇನ್ನು ದಬ್ಬೇಘಟ್ಟ ಹೋಬಳಿಯ ಏತ ನೀರಾವರಿ ಯೋಜನೆಗೆ 2019ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರದಲ್ಲಿ ನಾನು ಮಂಜೂರು ಮಾಡಿಸಿದ್ದೆ, ಗುಡ್ಡೇನಹಳ್ಳಿ , ಡಣನಾಯಕನಪುರ, ಕಾವಲ್ ಬಾಣಸಂದ್ರ, ಕಡೆಹಳ್ಳಿ ಕವಲ್, ಏತಾ ನೀರಾವರಿ ಯೋಜನೆಗಳಿಗೆ ಪ್ರಸ್ತಾವನೆಯನ್ನು 2017ರಲ್ಲಿ ಸಲ್ಲಿಸಲಾಗಿತ್ತು, ನಂತರ 2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ದಿನಾಂಕ 12.7 19ರಲ್ಲಿ ಮಂಜೂರಾದ ಬಗ್ಗೆ ಸರ್ಕಾರದ ಆದೇಶ ಪ್ರತಿ ಇದ್ದು, ದಾಖಲೆ ಪತ್ರಗಳು ನನ್ನ ಬಳಿ ಇದೆ ಎಂದು ಹೇಳಿ ಶಾಸಕರೇ ತಾವುಗಳು ಈ ಯೋಜನೆಗಳನ್ನ ಮಂಜೂರು ಮಾಡಿಸಿದ್ದೀರಾ ಎಂಬುದನ್ನ ಅರಿತುಕೊಳ್ಳೋಣ ಹಾಗಾಗಿ ಬಹಿರಂಗವಾಗಿ ಜನಗಳ ಮುಂದೆ ನಿಮ್ಮ ದಾಖಲೆಗಳನ್ನು ಪ್ರದರ್ಶಿಸಿ ಎಂದು ಸವಾಲ್ ಹಾಕಿದರು.
2007ರಲ್ಲಿ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನಹಳ್ಳಿ ಬಳಿ ಉಪ ವಿದ್ಯುತ್ ಸ್ಥಾವರ ಮತ್ತು 2017- 18ರಲ್ಲಿ ಕಸಬಾ ಹೋಬಳಿಯ ಹರಿದಾಸನಹಳ್ಳಿಯಲ್ಲಿ ಉಪ ವಿದ್ಯುತ್ ಸ್ಥಾವರವನ್ನು ಮಂಜೂರು ಮಾಡಿಸಿದ್ದೆ ನಾನು, ಆದರೆ ಶಾಸಕ ಮಸಾಲ ಜೈರಾಮ್ ರವರು ಇದನ್ನು ಸಹ ನಾನೇ ಮಂಜೂರು ಮಾಡಿಸಿದ್ದು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣೆ ಹತ್ತಿರ ಬರುತ್ತಿರುವ ಸಮೀಪದಲ್ಲಿ ಜನರ ಬಳಿ ಅನುಕಂಪದ ಮತಗಳನ್ನು ಸೆಳೆಯಲು ಕಣ್ಣೀರು ಹಾಕುತ್ತಿದ್ದಾರೆ, ಜೊತೆಗೆ ಜಾತಿ ರಾಜಕಾರಣ ಮಾಡಿಕೊಂಡು ಜಾತಿ ಜಾತಿಗಳ ನಡುವೆ ಹತ್ತಿಕುವ ಕೆಲಸವನ್ನು ಬಿಜೆಪಿ ಪಕ್ಷ ಮೊದಲಿಂದ ಮಾಡುತ್ತಾ ಬರುತ್ತಿದೆ. ಒಕ್ಕಲಿಗ ಸಮುದಾಯವನ್ನು ಮುಸ್ಲಿಂ ಸಮುದಾಯದ ಮೇಲೆ ಎತ್ತಿ ಕಟ್ಟುತ್ತಿದ್ದಾರೆ ಎಂದು ದೂರಿದರು.
ಟಿಪ್ಪು ಸುಲ್ತಾನ್ ರನ್ನು ಕೊಂದಿದ್ದು, ಬ್ರಿಟಿಷರು ಎಂಬುದು ಇತಿಹಾಸಗಳಿಂದ ತಿಳಿದಿದ್ದು, ಒಕ್ಕಲಿಗ ಸಮುದಾಯ ಟಿಪ್ಪು ಸುಲ್ತಾನರಿಗೆ ನೀಡಿದ ಗೌರವವನ್ನು ಯಾವ ಸಮುದಾಯ ಕೂಡ ನೀಡಿಲ್ಲ ಆದರೂ ಕೂಡ ನಿಮ್ಮ ಆರೋಪ ಟಿಪ್ಪುವನ್ನು ಕೊಂದಿದ್ದು ಒಕ್ಕಲಿಗ ಸಮುದಾಯದ ಹುರಿಗೌಡ ,ನಂಜೇಗೌಡ, ಎಂಬುದು ಬಿಜೆಪಿ ಪಕ್ಷದವರ ಬಳಿ ದಾಖಲೆಗಳಿದ್ದರೆ, ಬಹಿರಂಗವಾಗಿ ಚರ್ಚಿಸಲಿ, ಆ ಕೆಲಸ ಮಾಡದೆ ಬಿಜೆಪಿಯವರು ಮುಸ್ಲಿಂ ಸಮುದಾಯದವರನ್ನು ಜೆಡಿಎಸ್ ಪಕ್ಷದ ಪರವಾಗಿದ್ದಾರೆ ಎಂಬ ದುರುದ್ದೇಶದಿಂದ, ಇಲ್ಲಸಲ್ಲದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಈ ಸುದ್ದಿಗೋಷ್ಠಿಯಲ್ಲಿ ಎ.ಮಂಗಿ ಕುಪ್ಪೆ ಬಸವರಾಜ್, ವೆಂಕಟಪುರ ಯೋಗಿ, ಪರಮಶಿವಯ್ಯ ಇನ್ನಿತರರು ,ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA