ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ತಮ್ಮ ವಾಹನದಲ್ಲಿ ಕರೆದೊಯ್ದು ಚಿಕಿತ್ಸೆ ನೀಡಲು ಸಹಕರಿಸಿದ ಶಾಸಕಿ ಡಾ ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅಭಿವೃದ್ಧಿ ಕಾರ್ಯದಲ್ಲಿ ಅಷ್ಟೆ ಅಲ್ಲದೆ ಮಾನವಿಯತೆಯಲ್ಲೂ ಸೈಎಣಿಸಿಕೊಂಡಿದ್ದಾರೆ.
ಶಾಸಕಿ ಡಾ ಅಂಜಲಿ ನಿಂಬಾಳ್ಕರ್ ಅವರು ಭೂರಣಕಿ ಗ್ರಾಮಕ್ಕೆ ಕಾರ್ಯಕ್ರಮದ ನಿಮಿತ್ತವಾಗಿ ಹೋಗುವ ಸಂದರ್ಭದಲ್ಲಿ ಹೆಬ್ಬಾಳ ಗ್ರಾಮದ ಸಮೀಪದಲ್ಲಿ ಹೆಬ್ಬಾಳ ಗ್ರಾಮದ ಮಹಿಳೆಯಾದಂತ ಪೂಂಜಾ ಹಾಗೂ ಅವರ ಗಂಡ ಮತ್ತು ಮಕ್ಕಳು ಸಂಚರಿಸುವ ಸಂದರ್ಭದಲ್ಲಿ ಅಪಘಾತಕ್ಕೆ ಒಳಗಾದ ಪೂಂಜಾ ಅವರನ್ನು ತಮ್ಮ ವಾಹನದಲ್ಲಿ ನಂದಗಡ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿ ಉಪಚರಿಸಿ ಧೈರ್ಯ ತುಂಬುವ ಕೆಲಸ ಮಾಡಿದರು.
ಆಸ್ಪತ್ರೆಯ ವೈದ್ಯರಿಗೆ ಬೇಗ ಚಿಕಿತ್ಸೆ ನೀಡಬೇಕು ಎಂದು ಹೇಳಿದರು. ಕ್ಷೇತ್ರದ ಜನತೆಯ ಕಷ್ಟ ಸುಖಗಳಿಗೆ ಮೊದಲು ಪ್ರಾಮುಖ್ಯತೆ ನೀಡಿದ್ದಾರೆ ಇದರಿಂದಾಗಿ ಕ್ಷೇತ್ರದ ಜನತೆಯ ಹೃದಯದಲ್ಲಿ ಡಾ ಅಂಜಲಿ ನಿಂಬಾಳ್ಕರ್ ಪ್ರೀತಿ ಗೌರವ ಸ್ಥಾನ ಪಡೆದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy