ನಗರದ ಹೋಟೆಲ್ ಒಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಜನಸಾಮಾನ್ಯರು, ವ್ಯಾಪಾರಸ್ಥರು, ಬಿಲ್ಡರ್ , ಆತಂಕದಲ್ಲಿದ್ದಾರೆ ಸಾಮಾನ್ಯ ಜನರಿಗೆ ನ್ಯಾಯ ಕೊಡುವವರೇ ಅನ್ಯಾಯವನ್ನು ಮಾಡುತ್ತಿದ್ದಾರೆ ಆಡಳಿತ ರೂಢ ಶಾಸಕರು ತಮ್ಮ ಆಡಳಿತ ಪ್ರಭಾವ ಹಾಗೂ ಸರ್ಕಾರದ ಪ್ರಭಾವವನ್ನು ಇಲ್ಲಿ ಅಧಿಕಾರಿಗಳ ಮೂಲಕ ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರ ಜೀವಭಯದಿಂದ ದಿನಕಳೆಯುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ನ್ಯಾಯವಾದಿ ಪ್ರಭು ಎಥನಟ್ಟಿ ಮಾಡಿದರು.
ನಾವು ಭಾರತೀಯ ಜನತಾ ಪಕ್ಷಕ್ಕೆ ಸಹಾಯ ಮಾಡುತ್ತಾ ಬಂದಿದ್ದೆವು ಹಿಂದುತ್ವದ ಆಧಾರದ ಮೇಲೆ ನಾವು ಈ ಪಕ್ಷವನ್ನು ಬೆಂಬಲಿಸುತ್ತಾ ಇದ್ದೆವು. ಆದರೆ ಇಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲ ಹಿಂದುತ್ವದ ಆಧಾರದ ಮೇಲೆ ಬರಿ ರಾಜಕೀಯ ನಡೆಯುತ್ತಿದೆ ಎಂದು ದೂರಿದರು,
ಬೆಳಗಾವಿ ಎಲ್ಲಿ ಸಬ್ ರಿಜಿಸ್ಟರ್ ಒಂದೇ ಕಚೇರಿ ಇತ್ತು ಅದನ್ನು ವಿಭಾಗ ಮಾಡಿ ದಕ್ಷಿಣ ಕ್ಷೇತ್ರಕ್ಕೆ ತೆಗೆದುಕೊಂಡು ಅಲ್ಲಿ
ಸಬ್ ರಿಜಿಸ್ಟರ್ ಕಚೇರಿಯನ್ನು ಪ್ರಾರಂಭಿಸಿದ್ದಾರೆ ,ಆದರೆ ನಾವು ಈ ಬೆಳವಣಿಗೆಗೆ ವಿರೋಧಿಗಳಲ್ಲ ,ನಮ್ಮ ಬೇಡಿಕೆ ಯನ್ನು ನಾವು ಕಂದಾಯ ಸಚಿವರಿಗೆ ಬೆಂಗಳೂರಿನಲ್ಲಿ ಇರುವಂತ ಸಬ್ ರಿಜಿಸ್ಟರ್ ಕಚೇರಿಗಳು ಯಾವ ರೀತಿ ಕಾರ್ಯನಿರ್ವಹಿಸುತ್ತೇವೆ ಅದೇ ರೀತಿ ಬೆಳಗಾವಿನಲ್ಲಿ ಕೂಡ ನಿರ್ವಹಿಸಲಿ ಎಂಬ ಬೇಡಿಕೆ ನಮ್ಮದಾಗಿತ್ತು . ಆದರೆ ಶಾಸಕರು ಅದನ್ನು ವಿರೋಧಿಸಿ ತಮಗೆ ಅನುಕೂಲವಾಗುವಂತೆ, ಸಬ್ ರಿಜಿಸ್ಟರ್ ಕಚೇರಿಯನ್ನು ಪ್ರಾರಂಭಿಸಿದ್ದಾರೆ.
ಈ ಎಲ್ಲ ಬೆಳವಣಿಗೆ ಶಾಸಕರು ತಮ್ಮ ವರ್ಚಸ್ಸನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂಬುದು ಸಾಕ್ಷಿ ಇದೆ, ಅವರ ಅನೇಕ ಭ್ರಷ್ಟಾಚಾರದ ವಿಷಯಗಳನ್ನು ಅತಿ ಶೀಘ್ರದಲ್ಲಿ ಸಾಕ್ಷಿಗಳ ಸಹಿತ ಲೋಕಾರ್ಪಣೆ ಮಾಡಲಿದ್ದೇನೆ. ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. ನಾನು ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ಸಿನ ಅಭ್ಯರ್ಥಿ ಆಗಬೇಕೆಂದು ನಮ್ಮ ನಾಯಕರಗಳಾದ ಸತೀಶ್ ಜಾರಕಿಹೊಳಿ ಬೆಂಬಲ ನೀಡಿದ್ದಾರೆ ಪಕ್ಷ ಯಾವ ನಿರ್ಣಯ ಕೈಗೊಂಡರು ನಾನು ಅದಕ್ಕೆ ಸ್ವಾಗತಿಸುತ್ತೇನೆ ಒಗ್ಗಟ್ಟಿನಿಂದ ಪಕ್ಷವನ್ನು ಗೆಲ್ಲಿಸುತ್ತೇವೆ, ದಕ್ಷಿಣ ಕ್ಷೇತ್ರದ ಭಯದ ವಾತಾವರಣವನ್ನು ಮುಕ್ತಗೊಳಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಮಹಾವೀರ್ ಮಗದುಮ್ ಮೋಹನ್ ಮಾವಿನ ಕಟ್ಟಿ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy