ಇತ್ತೀಚೆಗೆ ನಿಧನರಾದ ಚಾಮರಾಜನಗರ ಲೋಕಸಭಾ ಮಾಜಿ ಸಂಸದರಾದ ಆರ್. ಧ್ರುವನಾರಾಯಣ ಅವರಿಗೆ ಹನ್ನೊಂದನೇ ದಿನದ ಪ್ರಯುಕ್ತ ಹೆಚ್.ಡಿ.ಕೋಟೆಯ ಹೆಚ್.ಮಟಕೆರೆಗ್ರಾಮದ ಅಭಿಮಾನಿಗಳು ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಧ್ರುವನಾರಾಯಣರವರ ಅಭಿಮಾನಿ, ಗ್ರಾಮದ ಮುಖಂಡ ಶಿವರಾಜು, ಆರ್. ಧ್ರುವನಾರಾಯಣ ಅವರು, ಇಡೀ ರಾಜ್ಯದ ರಾಜಕಾರಣಿಗಳಿಗೆ ಮಾದರಿ ಸಂಸದರು. ಅಭಿವೃದ್ಧಿ ಕೆಲಸಗಳಿಂದ ಅವರು ಎಲ್ಲರ ಮನಸ್ಸನ್ನು ಗೆದ್ದ ಧ್ರುವತಾರೆಯಾಗಿದ್ದಾರೆ. ಇಂದು ಅವರನ್ನ ಕಳೆದು ಕೊಂಡು ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಯಜಮಾನ ಮಹದೇವಯ್ಯ, ಗ್ರಾಮಪಂಚಾಯಿತಿ ಸದಸ್ಯರಾದ ವೆಂಕಟೇಶ, ವಸಂತ ಬಸಪ್ಪ, ಮುಖಂಡರಾದ ಗೋಪಾಲಸ್ವಾಮಿ, ಜಯಪಾಲ, ಕೃಷ್ಣಮಟಕೆರೆ, ಶಿವರಾಜು, ಶಿವಣ್ಣ, ಶಂಕರಯ್ಯ ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy