ಮೋದಿಯವರು ಕಳೆದ ಎಂಟು ವರ್ಷಗಳ ಆಡಳಿತ ಅವಧಿಯಲ್ಲಿ ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೆ ,ಕೆಲಸ ಮಾಡುತ್ತಿದ್ದಾರೆ, ಅವರ ಕೈಯನ್ನು ನಾವು ಬಲಪಡಿಸಬೇಕಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ತುರುವೇಕೆರೆ ಪಟ್ಟಣಕ್ಕೆ ಭಾರತೀಯ ಜನತಾ ಪಾರ್ಟಿಯ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು 50 ಕಾರ್ಯಕ್ರಮವನ್ನು ಮುಗಿಸಿ ಕಡೆ ಕಾರ್ಯಕ್ರಮ ನಿಮ್ಮ ತಾಲೂಕಿಗೆ ಬಂದಿದ್ದೇನೆ, ನೀವು ನನಗೆ ಅದ್ದೂರಿ ಸ್ವಾಗತ ಮಾಡಿ ಪ್ರೀತಿಯನ್ನು ತೋರಿಸಿದ್ದೀರಿ, ಇದಕ್ಕೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ. ಜೊತೆಗೆ ಮಸಾಲ ಜೈರಾಮ್ ಅವರನ್ನು 20,000 ಮತಗಳ ಅಂತರದಿಂದ ಗೆಲ್ಲಿಸುತ್ತೀರಿ ಎಂದು ನಾನು ಭಾವಿಸಿದ್ದೇನೆ ಎಂದರು.
ಮೋದಿಯವರು ಕಳೆದ ಎಂಟು ವರ್ಷಗಳ ಆಡಳಿತ ಅವಧಿಯಲ್ಲಿ ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೆ, ಕೆಲಸ ಮಾಡುತ್ತಿದ್ದಾರೆ. ಅವರ ಕೈಯನ್ನು ನಾವು ಬಲಪಡಿಸಬೇಕಾಗಿದೆ. ಇನ್ನು ಎರಡು ತಿಂಗಳುಗಳಲ್ಲಿ ಚುನಾವಣೆ ವೇಳೆ ನೀವೆಲ್ಲ ಮಸಾಲ ಜಯರಾಮ್ ಪರ ನಿಂತು ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುತ್ತೇವೆಂದು ನಾನು ಭಾವಿಸಿದ್ದೇನೆ ಎಂದರು.
ತಾಲೂಕಿನಲ್ಲಿ ರೈತರಿಗಾಗಿ ಹೇಮಾವತಿ ನೀರು ಸರಾಗವಾಗಿ ಅರಿಯಲು ನಾನು ಮುಖ್ಯಮಂತ್ರಿ ಆಗಿದ್ದಾಗ ಸಾವಿರದ ಇನ್ನೂರು ಕೋಟಿಗಳನ್ನು ನೀಡಿದ್ದೇನೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ 1,600 ಕೋಟಿ ಅನುದಾನವನ್ನು ನೀಡಿದ್ದೇನೆ. ಮಸಾಲ ಜೈರಾಮ್ ಅವರು ಎಲ್ಲಾ ಮಂತ್ರಿಗಳ ಮನೆಗೆ ಹೋಗಿ ಕ್ಷೇತ್ರದ ಅಭಿವೃದ್ಧಿಗೆ ಮಂಜೂರು ಮಾಡಿಸಿಕೊಂಡು ನಿಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ತಿಳಿಸಿದರು.
ನೀವು ಗಳೆಲ್ಲರೂ ಸೇರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಠೇವಣಿ ಕಳೆದುಕೊಳ್ಳುವ ರೀತಿ ಮಾಡಿ, ಅದು ನೀವು ಕೊಡುವ ನಮಗೆ ನೀಡುವ ಬಳುವಳಿ ಎಂದ ಅವರು, ಕಾಂಗ್ರೆಸ್ ಎಲ್ಲಾ ಕಡೆ ಠೇವಣಿ ಕಳೆದುಕೊಂಡು ದಿವಾಳಿಯಾಗಿದೆ. ನಾವು 150 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡುವುದು ಶತಸಿದ್ಧ. ಕಿಸಾನ್ , ಸಮ್ಮಾನ್ ಯೋಜನೆಯೆಲ್ಲಿ, 10.54 ಲಕ್ಷ ಫಲಾನುಭವಿಗಳ ಖಾತೆಗೆ 10,000 ರೂ ಗಳನ್ನು ಜಮಾ ಮಾಡಲಾಗುತ್ತಿದೆ, ಭಾಗ್ಯಲಕ್ಷ್ಮಿ ಯೋಜನೆಯಿಂದ ಲಕ್ಷಾಂತರ ಹೆಣ್ಣು ಮಕ್ಕಳ ಬದುಕು, ಹಸನಾಗಿದೆ. ಕಾಂಗ್ರೆಸ್ ನವರ ಸುಳ್ಳು ಆಶ್ವಾಸನೆಗಳಿಗೆ ಕಿವಿಗೊಡಬೇಡಿ, ಮಸಾಲ ಜಯರಾಮ್ ರವರನ್ನು ದೊಡ್ಡ ಮೊತ್ತದಲ್ಲಿ ಗೆಲ್ಲಿಸಿ ಇಂತಹ ವ್ಯಕ್ತಿಯನ್ನು ಕಳೆದುಕೊಳ್ಳಬೇಡಿ ಎಂದು ಕರೆ ನೀಡಿದರು.
ಸಚಿವ ಮಾಧುಸ್ವಾಮಿಯವರು ಮಾತನಾಡಿ , ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಹೇಮಾವತಿ ನೀರನ್ನು ಹರಿಸುವಲ್ಲಿ ಮಸಾಲಾ ಜೈರಾಮ್ ರವರ ಪಾತ್ರ ಬಹಳ ದೊಡ್ಡದು. ಹಾಗಾಗಿ ಈ ಬಾರಿಯೂ ಮಸಾಲ ಜಯರಾಮ್ ರವರನ್ನು ಶಾಸಕರನ್ನಾಗಿ ಮಾಡಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಎಂದು ಹೇಳಿದರು.
ಸಿ.ಟಿ.ರವಿ ಅವರು ಮಾತನಾಡಿ ಚಿಕ್ಕಮಗಳೂರು ಜಿಲ್ಲೆಗೂ ತುಮಕೂರು ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ, ನಮ್ಮ ಚಿಕ್ಕಮಗಳೂರಿನ ನೀರನ್ನು ನೀವು ಬಳಸುತ್ತಿದ್ದೀರಿ, ಆದ್ದರಿಂದ ಅವಿನಾಭಾವ ಸಂಬಂಧ, ನೀವು ನಿಮ್ಮ ಶಾಸಕರಾದ ಮಸಾಲ ಜೈರಾಮ್ ರವರನ್ನು ಗೆಲ್ಲಿಸಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕೋಳಿಗಳಿಗೆ ಮಸಾಲೆಯನ್ನು ಮಸಾಲೆ ಜಯರಾಮ್ ರವರ ಮಸಾಲೆಯಲ್ಲಿ ಅರೆಯಿರಿ ಎಂದು ಕರೆ ನೀಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy