ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಸುಳ್ಳು ಹೇಳುತ್ತಾ ಮೋಸ ಮಾಡುತ್ತಿವೆ. ಬಿಳಿ ಕೂದಲಿನ ವ್ಯಕ್ತಿಯ ಹೆಸರು ನಾನು ಹೇಳಲು ಬಯಸುವುದಿಲ್ಲ ಯಾಕೆಂದರೆ ಇದು ಕಾಂಗ್ರೆಸ್ ಯುವ ಕ್ರಾಂತಿ ಸಮಾವೇಶ ಎಂದು ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಹೇಳಿದರು.
ಬೆಲೆ ಏರಿಕೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಅಲ್ಲದೆ ಗ್ರಹಣಿ ಇಂದು ಮನೆ ನಡೆಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಿಲೆಂಡರ್ 1200 ರೂ.ಈ ಮಟ್ಟದ ಬೆಲೆ ಏರಿಕೆ ನಾವು ಎಂದು ನೋಡಿಲ್ಲಾ.
ಇವರಿಗೆ 8 ವರ್ಷಗಳ ಕಾಲ ಸರ್ಕಾರ ನಡೆಸಲು ಬಿಟ್ಟಿದ್ದೇವೆ ಇವರು ದೇಶವನ್ನು ಬಡತನಕ್ಕೆ ತಳ್ಳಿದ್ದಾರೆ , ಎಂದು ಬೆಲೆ ಏರಿಕೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಖಾನಾಪುರ ಕ್ಷೇತ್ರಕ್ಕೆ ಕೇಂದ್ರ ಸಚಿವರು ರಾಜನಾಥ್ ಸಿಂಗ್ ಅವರು ಸಂಗೊಳ್ಳಿ ರಾಯಣ್ಣ ಅವರ ಸಮಾಧಿಗೆ ಭೇಟಿ ನೀಡಿ ಜನ ಸಂಕಲ್ಪ ಯಾತ್ರೆ ಪ್ರಾರಂಭಿಸಿದರು. ಅವರಿಗೆ ನಾನು ಹೇಳಲು ಬಯಸುತ್ತೇನೆ ನೀವು ಚುನಾವಣೆ ಬಂದಾಗ ಮಾತ್ರ ಮಹಾಪುರುಷರ ಹಾಗೂ ಸ್ವತಂತ್ರಕ್ಕಾಗಿ ತ್ಯಾಗ ಬಲಿದಾನ ನೀಡಿದ ವ್ಯಕ್ತಿಗಳನ್ನು ಸ್ಮರಣೆ ಮಾಡುತ್ತೀರಿ. ನನ್ನ ಕ್ಷೇತ್ರ ಕಷ್ಟದಲ್ಲಿದ್ದಾಗ ನೀವೆಲ್ಲಿದ್ದೀರಿ ಕರೋನ ಕಾಲಾವಧಿಯಲ್ಲಿ ಆಕ್ಸಿಜನ್ ಸಿಲೆಂಡರ್ ದೊರಕದೆ ಜನ ಸಾಯುತ್ತಿದ್ದರು ಆಗ ನೀವು ಎಲ್ಲಿದ್ದೀರಿ, ನನ್ನ ಕ್ಷೇತ್ರದಲ್ಲಿ ಪ್ರವಾಹ ಬಂದಾಗ ನೀವು ಎಲ್ಲಿದ್ದೀರಿ, ನೀವು ಚುನಾವಣಾ ರಾಜಕಾರಣ ಮತ್ತು ಘೋಷಣೆಗಳ ಸೀಮಿತವಾಗಿದ್ದೀರಿ ಎಂದು ಪ್ರಶ್ನೆಗಳ ಸುರಿಮಳೆಗೈದರು.
ನಾನು ನನ್ನ ಕ್ಷೇತ್ರದಲ್ಲಿ 250 ಹೆಣ್ಮಕ್ಕಳ ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ವಿದ್ಯಾಲಯ ನಿರ್ಮಾಣ ಮಾಡಿ ಉದ್ಘಾಟನೆಕ್ಕೆ ಜಿಲ್ಲಾ ಆಡಳಿತಕ್ಕೆ ಕರೆದರೆ ಆಗ ಬಿಜೆಪಿ ಕೆಟ್ಟದಾಗಿ ರಾಜಕಾರಣ ಮಾಡಿತು.ನೀವು ಬೇಟಿ ಪಡಾವೊ, ಬೇಟಿ ಬಚಾವೊ ಘೋಷಣೆ ಕೂಗುತ್ತೀರಿ ಮಹಿಳೆಯರ ಮೇಲೆ ಅತ್ಯಾಚಾರ ವಾದಾಗ ನೀವು ಮೌನವಾಗುತ್ತೀರಿ, ನಿಮಗೆ ಯಾವುದೇ ನೈತಿಕತೆ ಇಲ್ಲ.
ಕಾಂಗ್ರೆಸ್ ಪಕ್ಷ ಬಡವರ ಪರವಾಗಿದೆ ಈ ಕೈ ಬಡವರ ಪರವಾಗಿದೆ ಈ ಕೈ ಯನ್ನು ಹಿಡಿದು ಬಡತನ ನಿರ್ಮೂಲನೆ ಮಾಡೋಣ ಎಂದು ವೇದಿಕೆಯಿಂದ ಕರೆ ಕೊಟ್ಟರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy