ಸರ್ಕಾರ ಕಾರ್ಮಿಕ ಕಿಟ್ ನೀಡುವ ಮೂಲಕ ಕಟ್ಟಡ ಕಾರ್ಮಿಕರ ನೆರವಿಗೆ ಧಾವಿಸಿದ್ದು, ನೋಂದಣಿಗೊಂಡ ಕಟ್ಟಡ ಕಾರ್ಮಿಕರು ಕಿಟ್ ನ್ನು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಸೂರ್ಯಕಾಂತ ಸಾದುರೆ ತಿಳಿಸಿದರು.
ಬೀದರ್ ಜಿಲ್ಲೆಯ ಮಂಗಲಪೇಟ ಹತ್ತಿರದ ಇಡೇನ್ ಕಾಲೋನಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಸಂಘಟನೆಯ ವತಿಯಿಂದ ಕಾರ್ಮಿಕ ಕಿಟ್ ವಿತರಿಸಿ ಅವರು ಮಾತನಾಡಿದರು.
ಈ ವೇಳೆ ಕಾರ್ಮಿಕ ಸಂಘಟನೆಯ ಗೌರವ ಅಧ್ಯಕ್ಷ ಪಂಡರಿ ಪೂಜಾರಿ, ಕಾರ್ಮಿಕ ಅಧ್ಯಕ್ಷ ಸೂರ್ಯಕಾಂತ ಸಾದುರೆ, ಉಪಾಧ್ಯಕ್ಷರಾದ ಯೇಸುದಾಸ್ ಬೆಳ್ಳೋರ, ಅನಿಲಕುಮಾರ ಗಂಜ್ಕರ್, ತುಕಾರಾಮ ಗೌರೆ, ಸಂತೋಷ ಸಿಂಧೆ, ಪ್ರಬುರಾವ್ ಬಾಚೆಪಳ್ಳಿ, ಶಿವರಾಜ ಜಮಸ್ತಾನ ಪುರ, ಪ್ರಕಾಶ ಚಿಕಪೇಟ ಕರ್ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy