ತುಮಕೂರು: ನೂತನ ಸಚಿವ ಕೆ.ಎನ್.ರಾಜಣ್ಣ ತುಮಕೂರು ನಗರಕ್ಕೆ ಸಚಿವರಾದ ನಂತರ ಮೊದಲ ಬಾರಿಗೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.
ಅಭಿಮಾನಿ ಹಾಗೂ ನೂರಾರು ಕಾರ್ಯಕರ್ತರಿಂದ ಕ್ಯಾತ್ಸಂದ್ರ ಟೋಲ್ ನಿಂದ ತುಮಕೂರು ನಗರದ ಕಾಂಗ್ರೆಸ್ ಕಚೇರಿವರೆಗೂ ಬೈಕ್ ರ್ಯಾಲಿ ನಡೆಸಿ ಅದ್ದೂರಿಯಾಗಿ ಸ್ವಾಗತಿಸಿದರು.
ಜೈಕಾರ ಹಾಕಿ , ಪಟಾಕಿಸಿಡಿಸಿ, ತಮಟೆ ವಾದ್ಯದೊಂದಿಗೆ ತೆರದ ವಾಹನದಲ್ಲಿ ಯಾರ್ಲಿ ಮೂಲಕ ಕೆ.ಎನ್.ರಾಜಣ್ಣಗೆ ಸ್ವಾಗತ ನೀಡಲಾಯಿತು. ಬಳಿಕ ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ ಎನ್ ರಾಜಣ್ಣ, ಪಕ್ಷಾತೀತ ಮತ್ತು ಜಾತ್ಯತೀತವಾಗಿ ಸ್ವಾಗತ ಮಾಡಿದ್ದಾರೆ. ಎಲ್ಲಾರಿಗೂ ವೈಯಕ್ತಿಯವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲೆಯ ಎಲ್ಲಾ ಸಹಕಾರಿಗಳು, ಧ್ವನಿ ಇಲ್ಲದ ಸಮುದಾಯಗಳ ಪ್ರತಿನಿಧಿಯಾಗಿ ನನ್ನ ಆಯ್ಕೆ ಮಾಡಿದ್ದಾರೆ ಎಂದರು.
ತಳ ಸಮುದಾಯದಿಂದ ಬಂದವರು ರಾಜಕೀಯದಲ್ಲಿ ಮೇಲೆ ಬರುವುದು ಕಷ್ಟ. ಜಿಲ್ಲೆಯ ಎಲ್ಲಾ ಸಹಕಾರಿ, ಬಡವರ ಆಶೀರ್ವಾದದಿಂದ ಗೆದ್ದಿದ್ದೇನೆ. ನನ್ನದು ಬಡವರ ಜಾತಿ, ಕಾಂಗ್ರೆಸ್ ಪಕ್ಷವೊಂದೆ ಬಡವರನ್ನು ಚೆನ್ನಾಗಿ ನೋಡಿಕೊಳ್ಳುವುದು ಎಂದು ಹೇಳಿದರು.
ಮುಂದಿನ ದಿನದಲ್ಲಿ ಹೆಚ್ಚು ಶಕ್ತಿಯುತವಾಗಿ ಬೆಳೆಸಬೇಕು. ಚುನಾವಣೆಯಲ್ಲಿ ಗೆದ್ದವರು ಸೋತಂತೆ, ಸೋತವರು ಸತ್ತಂತೆ. ಆದರೆ ಸೋಲು ಗೆಲುವು ಸಹಜ, ಇದಕ್ಕೆಲ್ಲಾ ಧೃತಿಗೆಡಬಾರದು ಎಂದರು.
ನಮಗೆ ಸರ್ಕಾರ ಇದೆ, ಸೋತಿರುವ ನೀವೇ ಆ ಕ್ಷೇತ್ರದ ಶಾಸಕರು ಪಕ್ಷ ಸಂಘಟನೆ ಮಾಡಿ, ನಿಮ್ಮೊಂದಿಗೆ ಸರ್ಕಾರ ಇರುತ್ತೆ. 25 ಸಾವಿರಕ್ಕಿಂತ ಹೆಚ್ಚು ಜನ ಆಶೀರ್ವಾದ ಮಾಡುತ್ತಾರೆ ಅಂತ ಹೇಳಿದ್ದೆ. ಬಟ್ 35 ಸಾವಿರಕ್ಕೂ ಹೆಚ್ಚು ಜನರು ಮತ ನೀಡಿದ್ದಾರೆ ಎಂದರು.
ಇಷ್ಟೊಂದು ಮತ ಬಂದಿದೆ ಅಂತ ದುರಂಹಕಾರ ತೋರಲ್ಲ, ವಿನಮ್ರವಾಗಿರುತ್ತೇನೆ. ಯುವಕರು ಜನಪರವಾದ ಹೋರಾಟವನ್ನು ಬೆಳಸಿಕೊಳ್ಳಬೇಕು. ಇಂತಹ ಹೋರಾಟಕ್ಕೆ ಒಂದಲ್ಲ ಒಂದು ದಿನ ಬೆಲೆ ಸಿಗುತ್ತದೆ ಎಂದರು.
ಜಿಲ್ಲೆಯಲ್ಲಿ ಸ್ವಂತ ಕಟ್ಟಡ ಮಾಡಬೇಕು. ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ವಂತ ಕಟ್ಟಡ ನಿರ್ಮಾಣ ಮಾಡುತ್ತೇವೆ. ಜಿಲ್ಲೆಯನ್ನು ಸರ್ವೊತ್ತೊಮುಖ ಬೆಳವಣಿಗೆ ಮಾಡಬೇಕಿದೆ ಎಂದರು.
ಸರ್ಕಾರ ಜನರ ಪರವಾಗಿ ಜನರ ನಿರೀಕ್ಷೆ ತಕ್ಕಂತೆ ಕೆಲಸ ಮಾಡುತ್ತದೆ. ನೀರಾವರಿ ವಿಚಾರದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. 24 ಟಿಎಂಟಿ ಹೇಮಾವತಿ ನೀರು ನಿಗದಿಯಾಗಿದೆ, ಈವರೆಗೂ18 ಟಿಎಂಸಿ ಮಾತ್ರ ನೀರು ಸಿಕ್ಕಿದೆ ಎಂದರು.
ಇಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಾರಣ. ಎತ್ತಿನಹೊಳೆ ಯೋಜನೆಗೆ ಚುರುಕು ನೀಡುತ್ತೇವೆ. ಜನರ ನಿರೀಕ್ಷೆಗೆ ಸ್ಪಂದಿಸಿ ಕೆಲಸ ಮಾಡುತ್ತೇವೆ ಎಂದರು.
ಚುನಾವಣೆ ಗೆದ್ದ ಬಳಿಕ ಎಲ್ಲಾ ಜನರ ಯೋಗ ಕ್ಷೇಮ ಬಯಸಿ ಕೆಲಸ ಮಾಡುತ್ತೇವೆ. ಸಹಕಾರಿ ಖಾತೆ ಅಧಿಕೃತವಾಗಲಿದೆ ಅನ್ನೋ ವಿಶ್ವಾಸವಿದೆ ಎಂದರು.
ಸಹಕಾರಿ ಸಚಿವನಾಗಬೇಕೆಂಬುದು ಜನರ ನಿರೀಕ್ಷೆಯಿದೆ. ಇದು ನನ್ನ ರಾಜಕೀಯದ ಕೊನೆಯ ಆಸೆ. ಸಹಕಾರಿ ದೊರಕುತ್ತೆ ಅನ್ನೋ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜಾರಿ ಮಾಡಿಯೇ ತೀರುತ್ತೇವೆ. ಅರ್ಹರನ್ನು ಗುರುತಿಸಬೇಕು, ಎಲೆಕ್ಷನಂತೆ ಮನೆ ಮನೆಗೆ ಹಂಚಲಾಗುವುದಿಲ್ಲ. 1 ನೇ ತಾರೀಕು ಕ್ಯಾಬಿನೇಟ್ ಗೆ ಎಲ್ಲಾ ಸಿದ್ದತೆಗಳೊಂದಿಗೆ ಬರಲು ಅಧಿಕಾರಿಗಳಿಗೆ ತಿಳಿಸಿಲಾಗಿದೆ ಎಂದರು.
ಕುಮಾರಸ್ವಾಮಿ ವಚನ ಭ್ರಷ್ಟ, ಅವರ ಮಾತಿಗೆ ಮಹತ್ವ ಬೇಡ. ಸ್ಪಷ್ಟ ಬಹುಮತ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದಿದ್ದರು. ಆ ಮಾತುಗಳನ್ನು ಉಳಿಸಿಕೊಳ್ಳಲಿ. ಬಡವರ ಪಾಲಿನ ಸೌಲಭ್ಯಗಳು, ಬಲಿಗರಿಗೆ ದೊರಕಬಾರದು. 200 ಯೂನಿಟ್ ವಿದ್ಯುತ್ ನೀಡುತ್ತೇವೆ. ಜನರು ಮುಗ್ಧರಿದ್ದಾರೆ, ಅವರನ್ನು ಎತ್ತಿಕಟ್ಟು ಕೆಲಸ ಮಾಡಬಾರದು. ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಕಾಂಗ್ರೆಸ್ ಗ್ಯಾರೆಂಟಿಗಳನ್ನು ಜಾರಿ ಮಾಡುತ್ತೇವೆ ಎಂದರು
ನಿಯಮ ಬಾಹಿರವಾಗಿ ಜಾರಿಯಾಗಿರುವ ಕಾಮಗಾರುಗಳನ್ನು ತಡೆಯಲಾಗುವುದು.ಸಚಿವ ಸ್ಥಾನ ಹಂಚಿಕೆ ವಿಚಾರ ಅಸಮಧಾನ ಅಂತ ಹೇಳಲ್ಲ, ಅರ್ಹರು ತುಂಬಾ ಇದ್ದಾರೆ ಎಂದರು. ನಮ್ಮ ಮುಂದಿನ ಟಾರ್ಗೆಟ್ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಲೋಕಸಭೆ ಚುನಾವಣೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA