ವಿಶ್ವದ ಅತ್ಯಂತ ವಿಧ್ವಂಸಕ ಪರಮಾಣು ಕ್ಷಿಪಣಿ ಎಂದೇ ಖ್ಯಾತಿ ಪಡೆದಿರುವ ಆರ್ ಎಸ್-28 ಸರ್ಮತ್ (ಸೈತಾನ್-2) ಕ್ಷಿಪಣಿಗಳನ್ನು ರಷ್ಯಾ ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಿರುವುದು ಭಾರೀ ಗೊಂದಲಕ್ಕೆ ಕಾರಣವಾಗುತ್ತಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಬೆನ್ನಲ್ಲೇ ಪ್ರಮುಖ ಸ್ಥಳಗಳಲ್ಲಿ ರಷ್ಯಾ ಖಂಡಾಂತರ ಪರಮಾಣು ಕ್ಷಿಪಣಿಗಳನ್ನು ನಿಯೋಜಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಖಂಡಾಂತರ ಬ್ಯಾಲಿಸ್ಟಿಕ್ ಶ್ರೇಣಿಯ ಸರ್ಮತ್ ಕ್ಷಿಪಣಿಯು 15 ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಅದು ಸೃಷ್ಟಿಸುವ ವಿನಾಶ ಊಹೆಗೂ ನಿಲುಕದ್ದು ಎನ್ನಲಾಗಿದೆ.