ಬೆಂಗಳೂರು : ಬೆಂಗಳೂರಿನ ಮುನೇನಕೊಳಲು ಲೇಔಟ್ ನ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟವಾದ ಘಟನೆ ನಡೆದಿದೆ.
ಮಾರತಹಳ್ಳಿಯ ಮುನೇನಕೊಳಲು ಲೇಔಟ್ ಮನೆಯಲ್ಲಿ ಅಡುಗೆ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ನಾಲ್ಕು ಜನರಿಗೆ ಗಾಯ, ಓರ್ವನ ಸ್ಥಿತಿ ಗಂಭೀರವಾಗಿದೆ.
ಸಿಲಿಂಡರ್ ಲೀಕ್ ನಿಂದ ಸ್ಫೋಟಗೊಂಡಿದೆ. ಕಳೆದ ರಾತ್ರಿ ಗ್ಯಾಸ್ ಲೀಕ್ ಆಗಿದ್ದು ಬೆಳಗ್ಗೆ ಅಡುಗೆ ಮನೆಯ ಲೈಟ್ ಸ್ವಿಚ್ ಆನ್ ಮಾಡಿದಾಗ ಸ್ಫೋಟವಾಗಿದೆ.