ಗೌರಿ, ಗಣೇಶ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲು ನಗರದ ಜನತೆ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಬೇಕಾದ ವಿಗ್ರಹ, ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಶನಿವಾರ ಜೋರಾಗಿತ್ತು.
ವರಮಹಾಲಕ್ಷ್ಮಿ ಹಬ್ಬದಲ್ಲಿ ಗಗನಕ್ಕೇರಿದ್ದ ಹೂವು ಹಣ್ಣು-ಹಂಪಲು ಸೇರಿ ಅಗತ್ಯ ವಸ್ತುಗಳ ಬೆಲೆ ಈಗ ಇಳಿದಿದೆ. ಆದರೆ, ಆ ಪ್ರಮಾಣದ ಗ್ರಾಹಕರು ಮಾರುಕಟ್ಟೆಗಳಲ್ಲಿ ಈ ಬಾರಿ ಕಂಡುಬರಲಿಲ್ಲ. ಗೌರಿ-ಗಣೇಶ ಹಬ್ಬಕ್ಕೆ ತರಕಾರಿ, ಹಣ್ಣು, ಹೂವಿನ ದರಗಳ ಸಾಕಷ್ಟು ಕಡಿಮೆಯಾಗಿದೆ.