ಕೊರಟಗೆರೆ: ತಾಲ್ಲೂಕಿನ ವಡ್ಡಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಅಡುಗೆ ಸಿಬ್ಬಂದಿಗಳೆ ಮಕ್ಕಳಿಗೆ ನೀಡುವ ಊಟದ ಅಕ್ಕಿ ಕದ್ದ ದುರ್ಘಟನೆ ನಡೆದಿದೆ.
ವಡ್ಡಗೆರೆಯ ಲಲಿತಮ್ಮ ಮತ್ತು ಪುಟ್ಟಮ್ಮ ಎಂಬ ಇಬ್ಬರು ಅಡುಗೆ ಸಿಬ್ಬಂದಿಗಳು ಸುಮಾರು 50 ಕೆಜಿ ಅಕ್ಕಿ ಕದ್ದಿರುವ ಆರೋಪ ಕೇಳಿ ಬಂದಿದೆ.
ಲಲಿತಮ್ಮ ಎಂಬ ಅಡುಗೆ ಸಿಬ್ಬಂದಿ ತನ್ನ ಮಗನಾದ ವೆಂಕಟೇಶ್ ಎಂಬುವರನ್ನು ಶಾಲೆಯ ಆವರಣಕ್ಕೆ ಕರೆಯಿಸಿ ಕೊಂಡು ಸುಮಾರು 59 ಕೆ.ಜಿ.ಯಷ್ಟು ಅಕ್ಕಿಯನ್ನು ಕದ್ದು ದ್ವಿಚಕ್ರ ವಾಹನದಲ್ಲಿ ಕೊಟ್ಟು ಕಳಿಸಿದ್ದಾರೆ.
ವೆಂಕಟೇಶ್ ತನ್ನ ತಾಯಿಯ ಜೊತೆ ಕೆಲಸ ಮಾಡುವ ಪುಟ್ಟಮ್ಮನ ಮನೆಗೆ ತೆಗೆದುಕೊಂಡು ಹೋಗುವಾಗ ಗ್ರಾಮದ ಸಾರ್ವಜನಿಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ಕೊರಟಗೆರೆ ತಾಲ್ಲೂಕಿನ ವಡ್ಡಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಈ ಘಟನೆ ನಡೆದಿದೆ. ಬಹಳ ದಿನಗಳಿಂದ ಇಂತಹ ಕೆಲಸ ಮಾಡುತಿದ್ದನ್ನು ಕಂಡ ಗ್ರಾಮಸ್ಥರು ಇಂದು ಮಾಲು ಸಹಿತ ಹಿಡಿದಿದ್ದಾರೆ.
ಕದ್ದ ಅಕ್ಕಿಯನ್ನು ಮನೆಗೆ ಕೊಂಡೊಯ್ದ ಸಿಬ್ಬಂದಿಗಳನ್ನು ತನಿಖೆ ಮಾಡದ ಶಾಲೆಯ ಶಿಕ್ಷಕರು ಅಡುಗೆ ಸಿಬ್ಬಂದಿಗಳ ಪರ ವಕಾಲತ್ತು ವಹಿಸಿರುವುದನ್ನು ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಅಡುಗೆ ಎಣ್ಣೆ,ತರಕಾರಿ, ಬೇಳೆ, ಅಕ್ಕಿ, ಸೇರಿದಂತೆ ಇನ್ನೂ ಅನೇಕ ವಸ್ತುಗಳನ್ನು ಕುದಿಯುತ್ತಿದ್ದ ಅಡುಗೆ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮಹಿಳೆಯರು ಆಗ್ರಹಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.